ಮಲೆನಾಡಿನಲ್ಲಿ ಮಳೆಗಾಲದಲ್ಲಿ ಅಣಬೆಗಳ ಖಾದ್ಯ ತಯಾರಿಸುವುದು ಸಾಮಾನ್ಯ. ಆದರೆ ಅಣಬೆಗಳನ್ನು ಆರಿಸುವಾಗ ಎಚ್ಚರದಿಂದಿರುವುದು ಅಗತ್ಯ. ವಿಷಯುಕ್ತ ಅಣಬೆ ತಿಂದ ಒಂದೇ ಕುಟುಂಬದ 15 ಮಂದಿ ಅಸ್ವಸ್ಥಗೊಂಡ ಘಟನೆ ತಾಲೂಕಿನ ಕೋಣಂದೂರು ಸಂತೆಹಕ್ಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ತೀರ್ಥಹಳ್ಳಿ(ಜು.21): ವಿಷಯುಕ್ತ ಅಣಬೆ ತಿಂದ ಒಂದೇ ಕುಟುಂಬದ 15 ಮಂದಿ ಅಸ್ವಸ್ಥಗೊಂಡ ಘಟನೆ ತಾಲೂಕಿನ ಕೋಣಂದೂರು ಸಂತೆಹಕ್ಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಒಂದೇ ಕುಟುಂಬದ 15 ಮಂದಿ ಶುಕ್ರವಾರ ರಾತ್ರಿ ಮನೆಯ ಹಿಂದಿದ್ದ ಅಣಬೆ ಸಂಗ್ರಹಿಸಿ ಅಡುಗೆ ಮಾಡಿದ್ದಾರೆ. ರಾತ್ರಿ ಊಟದ ಬಳಿಕ 11 ಗಂಟೆ ಸಮಯದಲ್ಲಿ ಹೊಟ್ಟೆನೋವು ಹಾಗೂ ವಾಂತಿ ಸಮಸ್ಯೆ ಕಾಣಿಸಿಕೊಂಡಿದೆ.
ಅಣಬೆಯ ಹಣೆಬರಹ ತಿಳಿದುಕೊಳ್ಳುವುದು ಹೇಗೆ?
ತಕ್ಷಣ ಗ್ರಾಮಸ್ಥರು ತುರ್ತು ಚಿಕಿತ್ಸೆಗಾಗಿ ತೀರ್ಥಹಳ್ಳಿ ಜೆ.ಸಿ.ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಅವರು ಆರೋಗ್ಯವಾಗಿದ್ದು, ಭಾನುವಾರ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ತಿಳಿಸಿದ್ದಾರೆ.
