ಚಿತ್ರದುರ್ಗ(ಮೇ 09): ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಗಣಿ ಬಾಧಿತ ಪ್ರದೇಶಗಳಲ್ಲಿ ಪುನರ್‌ ನಿರ್ಮಾಣ, ಪುನರ್ವಸತಿ ಕಲ್ಪಿಸಲು ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿ ರೂಪಿಸಿರುವ 147.23 ಕೋಟಿ ರು. ಕ್ರಿಯಾ ಯೋಜನೆ ತಯಾರಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆ ಅನುಮೋದನೆ ನೀಡಿತು.

ಸಚಿವ ಬಿ.ಶ್ರೀರಾಮುಲು ಮಾತನಾಡಿ ಸಂಗ್ರಹವಾದ ನಿಧಿಯಲ್ಲಿ ನೇರವಾಗಿ ಗಣಿ ಬಾಧಿತ ಪ್ರದೇಶಕ್ಕೆ ಶೇ. 50 ಹಾಗೂ ಪರೋಕ್ಷವಾಗಿ ಗಣಿ ಬಾಧಿತ ಪ್ರದೇಶಕ್ಕೆ ಶೇ. 50ರಷ್ಟುಅನುದಾನ ಹಂಚಿಕೆ ಮಾಡಲು ಸರ್ಕಾರದ ನಿಯಮಾವಳಿ ಇದೆ. ಅದರಂತೆ ಹೊಳಲ್ಕೆರೆ ಹಾಗೂ ಚಿತ್ರದುರ್ಗಕ್ಕೆ ಹೆಚ್ಚು ಅನುದಾನ ನೀಡಲಾಗಿದೆ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಚಿತ್ರದುರ್ಗ ವಿಧಾನಸಭೆ ಕ್ಷೇತ್ರ ಪರೋಕ್ಷವಾಗಿ ಗಣಿಬಾಧಿತ ಪ್ರದೇಶ. ಶೇ. 50 ರಷ್ಟುಅನುದಾನ ನೀಡಬೇಕೆಂದು ಒತ್ತಾಯಿಸಿದರು.

ದಶಕದ ಬೇಡಿಕೆ: ಕೆರೆ ತುಂಬಿಸಿ ನೀರಿನ ಹಾಹಾಕಾರ ಈಡೇರಿಸಿದ ಶಾಸಕ ನಡಹಳ್ಳಿ

ಡಿಎಂಎಫ್‌ ನಡಿ ಒಟ್ಟು ಸಂಗ್ರಹವಾದ ನಿಧಿಯಲ್ಲಿ 60;40 ಅನುಪಾತದಡಿ ವೆಚ್ಚ ಮಾಡಬೇಕಾಗಿದ್ದು ಶೇ. 60 ರಷ್ಟುನಿಧಿಯಲ್ಲಿ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣಾ ಕಾಮಗಾರಿಯನ್ನು ಕೈಗೊಳ್ಳಬೇಕು. ಉಳಿದಂತೆ ಇತರೆ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ.

ಅನುದಾನ ಹಂಚಿಕೆ;

ಹೊಳಲ್ಕೆರೆ - . 50.62 ಕೋಟಿ, ಚಿತ್ರದುರ್ಗ . 43.55 ಕೋಟಿ, ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು, ಹೊಸದುರ್ಗ ವಿಧಾನಸಭೆ ಕ್ಷೇತ್ರಗಳಿಗೆ ತಲಾ . 11.77 ಕೋಟಿ ಕ್ರಿಯಾ ಯೋಜನೆ ತಯಾರಿಸಲು ಉದ್ದೇಶಿಸಲಾಗಿದ್ದು ಇದರಲ್ಲಿ ಪರೋಕ್ಷವಾಗಿ ಬಾಧಿತ ಚಿತ್ರದುರ್ಗಕ್ಕೆ ಒಂದಿಷ್ಟುಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ ಎಂದು ಶ್ರೀರಾಮುಲು ಹೇಳಿದರು.

ನಿಗದಿತ ಗುರಿಯನ್ವಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕ್ರಿಯಾ ಯೋಜನೆಯನ್ನು ಒಂದು ವಾರದಲ್ಲಿ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು, ಅನುಮೋದಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದ್ದು ವಿಳಂಬ ಮಾಡದೆ ಸಲ್ಲಿಸಲು ಎಲ್ಲಾ ಶಾಸಕರಿಗೆ ಸಚಿವರು ತಿಳಿಸಿದರು.

ಕೋವಿಡ್‌-19ಗೆ ಡಿಎಂಎಫ್‌:

ಕೇಂದ್ರ ಸರ್ಕಾರ ಕೊವಿಡ್‌-19 ನಿಯಂತ್ರಣಕ್ಕಾಗಿ ಡಿಎಂಎಫ್‌ ನಿಧಿ ಅನುದಾನ ಬಳಕೆ ಮಾಡಿಕೊಳ್ಳಲು ಆದೇಶ ನೀಡಿದ್ದು ಶೇ. 30 ರಷ್ಟುಅನುದಾನ 23.55 ಕೋಟಿ ಹಣವನ್ನು ಕೊವಿಡ್‌ಗಾಗಿ ಬಳಕೆ ಮಾಡಿಕೊಳ್ಳಲು ಸಮಿತಿ ನಿರ್ಧರಿಸಿತು. ಹಂತ ಹಂತವಾಗಿ ಕೊವಿಡ್‌ ನಿಯಂತ್ರಣಕ್ಕಾಗಿ ಹಣ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಜಿಲ್ಲಾ ಖನಿಜ ಪ್ರತಿಷಠಾನ ಸಮಿತಿಗೆ ಗಣಿಬಾಧಿತ ಪ್ರದೇಶದ ಸರ್ಕಾರೇತರ ಸದಸ್ಯರನ್ನು ನೇಮಕ ಮಾಡಿದ್ದು ಇದನ್ನು ರದ್ದು ಮಾಡಿ ಹೊಸದಾಗಿ ನಾಮನಿರ್ದೇಶನ ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಕೃಷ್ಣಾ ನೀರು ನಿರ್ವಹಣೆ ಮಂಡಳಿ ರದ್ದತಿಗೆ ಆಗ್ರಹ: ಪ್ರಧಾನಿ ಮೋದಿಗೆ ಮನವಿ

ಸಂಸದ ಎ.ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್‌.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಗೂಳಿಹಟ್ಟಿಡಿ.ಶೇಖರ್‌, ವಿಧಾನ ಪರಿಷತ್‌ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಾಂಬಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಲಿಂಗರಾಜ್‌ ಉಪಸ್ಥಿತರಿದ್ದರು.