Asianet Suvarna News Asianet Suvarna News

ಪುಟ್ಟ ಗ್ರಾಮದ 144 ಮಂದಿಗೆ ಕೊರೋನಾ ಸೋಂಕು

ಅದು 300 ಜನರು ಇರುವ ಪುಟ್ಟ ಗ್ರಾಮ ಆ ಗ್ರಾಮದಲ್ಲಿ 144 ಮಂದಿಗೆ ಕೊರೋನಾ ಮಹಾಮಾರಿ ತಗುಲಿದೆ. ಅರ್ಧದಷ್ಟು ಮಂದಿಗೆ ಕೊರೋನಾ ಸೋಂಕು ತಗುಲಿದ್ದು ಇದರಿಂದ ಆತಂಕ ಎದುರಾಗಿದೆ. 

144 People Test Positive Covid 19 in One village snr
Author
Bengaluru, First Published Apr 21, 2021, 7:07 AM IST

ಬೆಳಗಾವಿ (ಏ.21): ಕೊರೋನಾ ಮಹಾಮಾರಿ 2ನೇ ರೌದ್ರಾವತಾರಕ್ಕೆ ಬೆಳಗಾವಿ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ಖಾನಾಪುರ ತಾಲೂಕಿನ ಅಬನಾಳಿಯ ಸಣ್ಣ ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಬರೋಬ್ಬರಿ 144 ಜನರಿಗೆ ಸೋಂಕು ದೃಢಪಟ್ಟಿದೆ. 

ಅಬನಾಳಿ ಗ್ರಾಮದಲ್ಲಿ 300 ಜನರಿದ್ದಾರೆ. ಇವರಿಗೆಲ್ಲ ಅಶೋಕ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾರ‍ಯಂಡಮ್‌ ಟೆಸ್ಟ್‌ ಮಾಡಿಸಲಾಗಿತ್ತು. 

ಕರ್ನಾಟಕದಲ್ಲಿ ಹೊಸ ರೂಲ್ಸ್ ಜಾರಿ; ಏನಿರುತ್ತೆ? ಏನಿರಲ್ಲ? ಸಂಪೂರ್ಣ ವಿವರ ಇಲ್ಲಿದೆ ..

ಈ ವೇಳೆ 144 ಜನರಿಗೆ ಪಾಸಿಟಿವ್‌ ಬಂದಿದೆ. ಮಹಾರಾಷ್ಟ್ರ, ಗೋವಾಗೆ ಹೋಗಿದ್ದ ವಲಸೆ ಕಾರ್ಮಿಕರು ಸ್ವಗ್ರಾಮಕ್ಕೆ ವಾಪಸ್‌ ಬಂದಿದ್ದರಿಂದ ಸೋಂಕು ಹರಡಿದ ಶಂಕೆ ವ್ಯಕ್ತವಾಗಿದೆ. 

ಒಂದೇ ಗ್ರಾಮದಲ್ಲಿನ 144 ಜನ ಸೋಂಕಿತರ ಟ್ರಾವೆಲ್‌ ಹಿಸ್ಟರಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸೋಂಕಿತರೆಲ್ಲರಿಗೂ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ.

Follow Us:
Download App:
  • android
  • ios