ಮನೆಯಂಗಳದಲ್ಲಿ ಕಂಡು ಬಂದ 13 ಹೆಬ್ಬಾವು ಮರಿಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ಕಾಡಿಗೆ ಬಿದ್ದು ಮಾನವೀಯತೆ ಮೆರೆದಿದ್ದಾರೆ ಪುತ್ತೂರು ಸಾಮೆತ್ತಡ್ಕ ನಿವಾಸಿ ಸರೀಸೃಪ ಪ್ರೇಮಿ ಸ್ನೇಕ್‌ ಫಾಯಿಝ್‌.

ಪುತ್ತೂರು(ಜು.04): ಮನೆಯಂಗಳದಲ್ಲಿ ಕಂಡು ಬಂದ 13 ಹೆಬ್ಬಾವು ಮರಿಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ಕಾಡಿಗೆ ಬಿದ್ದು ಮಾನವೀಯತೆ ಮೆರೆದಿದ್ದಾರೆ ಪುತ್ತೂರು ಸಾಮೆತ್ತಡ್ಕ ನಿವಾಸಿ ಸರೀಸೃಪ ಪ್ರೇಮಿ ಸ್ನೇಕ್‌ ಫಾಯಿಝ್‌.

ತಾಲೂಕಿನ ಒಳಮೊಗರು ಗ್ರಾಮದ ಪರ್ಪುಂಜ ಎಂಬಲ್ಲಿನ ಅಬ್ಬಾಸ್‌ ಎಂಬವರ ಮನೆಯ ಅಂಗಳದಲ್ಲಿ ತೆಂಗಿನ ಮರದ ಬುಡದಲ್ಲಿ ಈ ಹೆಬ್ಬಾವು ಮರಿಗಳು ಪತ್ತೆಯಾಗಿತ್ತು. ಅಬ್ಬಾಸ್‌ ಅವರು ಫಾಯಿಝ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅದರಂತೆ ಅಲ್ಲಿಗೆ ತೆರಳಿದ ಫಾಯಿಝ್‌ ಆಗ ತಾನೇ ಮೊಟ್ಟೆಯಿಂದ ಹೊರಬಂದಿರುವ ಈ ಮರಿಗಳನ್ನು ಫಾಯಿಝ್‌ ಅವರು ರಕ್ಷಣೆ ಮಾಡಿ ಕಾಡಿನಲ್ಲಿ ಬಿಟ್ಟಿದ್ದಾರೆ.

ಹೆಬ್ಬಾವಿನ ಮರಿ ರಕ್ಷಿಸಿದ ಪೇಜಾವರ ಶ್ರೀ

ಈ ಹಿಂದೆಯೂ ಅನೇಕ ಕಡೆಗಳಲ್ಲಿ ನಾಗರಹಾವು ಸೇರಿದಂತೆ ವಿವಿಧ ಜಾತಿಯ ವಿಷಪೂರಿತ ಹಾಗೂ ವಿಷವಲ್ಲದ ಹಾವುಗಳನ್ನು ಫಾಯಿಝ್‌ ಅವರು ರಕ್ಷಣೆ ಮಾಡಿ ಅರಣ್ಯ ಪ್ರದೇಶಗಳಿಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.