ಬಾಗಲಕೋಟೆ: ಹಿಪ್ಪರಗಿ ಜಲಾಶಯಕ್ಕೆ ಹರಿದು ಬಂದ ನೀರು, ಜನರಲ್ಲಿ ಸಂತಸ
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಾದ 10 ಮಿ. ಮೀ, ನೌಜಾ 22 ಮಿಮೀ, ಮಹಾಬಳೇಶ್ವರ 25 ಮೀ. ಮೀ ಮಳೆಯಾಗಿದ್ದು, ರಾಜಾಪೂರ ಡ್ಯಾಮ ಮೂಲಕ 7120 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ರಬಕವಿ-ಬನಹಟ್ಟಿ(ಜು.06): ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಬುಧವಾರ ಹಿಪ್ಪರಗಿ ಜಲಾಶಯದಲ್ಲಿ ನೀರಿನ ಮಟ್ಟ 519.35 ಮೀ. ಇದ್ದು, ಒಟ್ಟು 12400 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 3720 ಕ್ಯುಸೆಕ್ ನೀರನ್ನು ಜಲಾಶಯದಿಂದ ಹರಿದು ಬಿಡಲಾಗುತ್ತಿದೆ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಾದ 10 ಮಿ. ಮೀ, ನೌಜಾ 22 ಮಿಮೀ, ಮಹಾಬಳೇಶ್ವರ 25 ಮೀ. ಮೀ ಮಳೆಯಾಗಿದ್ದು, ರಾಜಾಪೂರ ಡ್ಯಾಮ ಮೂಲಕ 7120 ಕ್ಯುಸೆಕ್ ನೀರು ಹರಿದು ಬರುತ್ತಿದೆ ಎಂದು ಹಿಪ್ಪರಗಿ ಅಣೆಕಟ್ಟಿನ ಸಹಾಯಕ ಅಭಿಯಂತರರಾದ ವಿಠ್ಠಲ ನಾಯಕ ತಿಳಿಸಿದರು.
ಬಾಗಲಕೋಟೆ: ಕೃಷ್ಣಾನದಿಯಲ್ಲಿ ಇದೀಗ ಲಕ್ಷ್ಮೀ ಕಟಾಕ್ಷ..!
ಜನತೆ ನಿರಾಳ:
ನಗರದಲ್ಲಿ ತಲೆದೂರಿದ್ದ ಕುಡಿಯುವ ನೀರು ಸಮಸ್ಯೆ ನೀಗಿಸಲು ಮಹಾರಾಷ್ಟ್ರದಿಂದ ಹರಿಬಿಟ್ಟನೀರು ಹಿಪ್ಪರಗಿ ಜಲಾಶಯ ದಾಟಿ ಮುಂದೆ ತೆರಳುತ್ತಿದೆ. ನೀರಿಲ್ಲದೇ ಸ್ಥಗಿತವಾಗಿದ್ದ ನಗರಕ್ಕೆ ನೀರು ಪೂರೈಸುವ ಪಂಪ್‌ಗಳು ಕಾರ್ಯಾರಂಭ ಮಾಡಿರುವುದರಿಂದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಬೇಸಿಗೆ ಮುಗಿದ ನಂತರವೂ ಕೃಷ್ಣೆಗೆ ನೀರು ಬಾರದ ಹಿನ್ನೆಲೆ ಈ ಬಾರಿ ಸಂಪೂರ್ಣ ಬತ್ತಿ ಹೋಗುವಲ್ಲಿ ಹಿಪ್ಪರಗಿ ಜಲಾಶಯ ಕಾರಣವಾಗಿತ್ತು. ಇದೀಗ ಮತ್ತೆ ಹಳೆಯ ಗತವೈಭವವನ್ನು ತುಂಬಿಕೊಂಡಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ನೀಗುವಲ್ಲಿ ಕಾರಣವಾಗಿದೆ. ಸದ್ಯ ಇನ್ನಷ್ಟುನೀರು ಮಹಾರಾಷ್ಟ್ರದಿಂದ ಹರಿಬಿಡಲಾಗುತ್ತಿರುವುದರಿಂದ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಎರಿಕೆ ಕಾಣುತ್ತಿರುವುದು ಸಂತಸ ತರುವಲ್ಲಿ ಕಾರಣವಾಗಿದೆ.