ಮಂಗಳೂರು (ಏ.04): ದಕ್ಷಿಣ ಕನ್ನಡದ ಉಳ್ಳಾಲದ ಕೆ.ಸಿ ರೋಡ್ ಬಳಿ ಕಾಣೆಯಾಗಿದ್ದ  ಬಾಲಕನ  ಮೃತದೇಹ ಪತ್ತೆಯಾಗಿದೆ

ಉಳ್ಳಾಲಯದ ಲಾರಿ ಚಾಲಕ ಹನೀಫ್ ಪುತ್ರ 12 ವರ್ಷದ ಆಕಿಫ್ ಮೃತದೇಹ ಇಲ್ಲಿ ಆಟದ ಮೈದಾನದ ಬಳಿ ಪತ್ತೆಯಾಗಿದೆ.

ಪಬ್ ಜೀ ವಿಚಾರಕ್ಕೆ ಸಂಬಂಧಿಸಿ ಮಕ್ಕಳ ನಡುವೆ ಜಗಳ ನಡೆದು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.  

ಲಾಕ್‌ಡೌನ್‌ ವೇಳೆ ಹಣ ಸಂಪಾದನೆಗೆ ಡ್ರಗ್ಸ್‌ ದಂಧೆಗಿಳಿದ ವಿದ್ಯಾರ್ಥಿಗಳು! ..
 
ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಫೋನಿನಲ್ಲಿ ಮಾತನಾಡುತ್ತಾ ಮನೆಯಿಂದ ತೆರಳಿದ್ದ ಬಾಲಕ  ಬಳಿಕ ಮನೆಗೆ ವಾಪಸಾಗಿರಲಿಲ್ಲ.  ಬಾಲಕ ನಾಪತ್ತೆಯಾಗಿದ್ದು, ಈ ಸಂಬಂಧ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. 

ಬಳಿಕ ಆಟದ ಮೈದಾನದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಆಕಿಫ್ ಫಲಾಹ್ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ಆತನಿಗೆ ಪಬ್‌ ಜಿ ಆಡುವ ಚಟವಿದ್ದುದಾಗಿ ಆತನ ಪೋಷಕರು ತಿಳಿಸಿದ್ದಾರೆ. 

ಪಬ್ ಜಿ ವಿಚಾರ ಗಲಾಟೆಯಾಗಿ ಆತನಿಗೆ ಥಳಿಸಿ ಹತ್ಯೆ ಮಾಡಿ ಕಾಂಪೌಂಡ್ ಬಳಿ ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದೆ ಎಂದು ಮಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.