ತಗಡಿನ ಶೆಡ್‌ನಲ್ಲಿ ಅಜ್ಜಿ ಬಳಸ್ತಿರೋದು 2 ಬಲ್ಬ್, ಬಂದಿದ್ದು 1 ಲಕ್ಷ ರೂ. ಬಿಲ್!

ಅದು ಭಾಗ್ಯಜ್ಯೋತಿ ಸಂಪರ್ಕ ಇರುವ ಪುಟ್ಟಮನೆ. ಶೆಡ್‌ನಂತ ಮನೆಯೊಳಗೆ ಇರುವುದು ಕೇವಲ ಎರಡೇ ಬಲ್‌್ಬ. ಈ ಮನೆ ಇರುವುದು ಕೊಪ್ಪಳದ ಭಾಗ್ಯನಗರದಲ್ಲಿ. ಆ ಮನೆಗೆ ಬಂದ ಈ ತಿಂಗಳ ವಿದ್ಯುತ್‌ ಬಿಲ್‌ ಮಾತ್ರ .1,03,315!.

1 lakh rupis electricity bill for a shed with 2 bulbs at bhagyanagar at koppal rav

ಕೊಪ್ಪಳ  (ಜೂ.22) : ಅದು ಭಾಗ್ಯಜ್ಯೋತಿ ಸಂಪರ್ಕ ಇರುವ ಪುಟ್ಟಮನೆ. ಶೆಡ್‌ನಂತ ಮನೆಯೊಳಗೆ ಇರುವುದು ಕೇವಲ ಎರಡೇ ಬಲ್‌್ಬ. ಈ ಮನೆ ಇರುವುದು ಕೊಪ್ಪಳದ ಭಾಗ್ಯನಗರದಲ್ಲಿ. ಆ ಮನೆಗೆ ಬಂದ ಈ ತಿಂಗಳ ವಿದ್ಯುತ್‌ ಬಿಲ್‌ ಮಾತ್ರ .1,03,315!.

ತನ್ನ ಮನೆಯ ವಿದ್ಯುತ್‌ ಬಿಲ್‌ ನೋಡಿ ಮನೆಯ ಯಜಮಾನಿ ಅಜ್ಜಿ ಗಿರಿಜಮ್ಮ ಚಿಂತಿಪಲ್ಲಿ ಗಾಬರಿಯಾಗಿದ್ದಾರೆ. ತಿಂಗಳಿಗೆ .70-100 ವಿದ್ಯುತ್‌ ಬಿಲ್‌ ಬರುವ ಮನೆಗೆ ಲಕ್ಷ ರುಪಾಯಿಗೂ ಹೆಚ್ಚು ವಿದ್ಯುತ್‌ ಬಿಲ್‌ ಬಂದಿತ್ತು. ಮಾಧ್ಯಮಗಳಲ್ಲಿ ಈ ಸುದ್ದಿ ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜೆಸ್ಕಾಂ ಸಿಬ್ಬಂದಿ, ತಾಂತ್ರಿಕ ದೋಷದಿಂದ ಇಷ್ಟೊಂದು ವಿದ್ಯುತ್‌ ಬಿಲ್‌ ಬಂದಿದೆ. ಬಿಲ್‌ ನಮೂದಿಸುವಾಗ ಆದ ಎಡವಟ್ಟಿನಿಂದ ಹೀಗಾಗಿದೆ. ಈ ಕುರಿತು ಸಂಬಂಧಪಟ್ಟಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ. ಬಳಿಕ, ಅಜ್ಜಿ ನಿಟ್ಟುಸಿರು ಬಿಟ್ಟಿದ್ದಾಳೆ.

 

Latest Videos
Follow Us:
Download App:
  • android
  • ios