ನಕಲಿ ನೋಟು ದಂಧೆಕೋರರಿಂದ 1 ಕೋಟಿ ರು. ಮೌಲ್ಯದ ರತ್ನ ವಶ
- ಕಳೆದೊಂದು ವರ್ಷದ ಹಿಂದೆ ಜಿಲ್ಲೆಯ ಆಲ್ದೂರು ಠಾಣೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಇಬ್ಬರು ನಕಲಿ ನೋಟು ದಂಧೆಕೋರರು
- ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿ
ಚಿಕ್ಕಮಗಳೂರು (ಆ.24): ಕಳೆದೊಂದು ವರ್ಷದ ಹಿಂದೆ ಜಿಲ್ಲೆಯ ಆಲ್ದೂರು ಠಾಣೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಇಬ್ಬರು ನಕಲಿ ನೋಟು ದಂಧೆಕೋರರನ್ನು ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇವರಿಂದ ಶಿವಮೊಗ್ಗದಲ್ಲಿ ಅಪಹರಿಸಿದ್ದ ಸುಮಾರು ಒಂದು ಕೋಟಿ ರು. ಮೌಲ್ಯದ ಅಪೂರ್ವ ರತ್ನವನ್ನೂ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ವಿಚಾರಣೆ ನಡೆಸಿದಾಗ 510.60 ಕ್ಯಾರೆಟ್‌ನ ರತ್ನ ಕದ್ದಿರುವ ವಿಚಾರ ಬೆಳಕಿಗೆ ಬಂತು. ಹಾಸನ, ಚಿಕ್ಕಮಗಳೂರು ಸೇರಿ ವಿವಿಧೆಡೆ ಕಳ್ಳತನ, ವೇಶ್ಯಾವಾಟಿಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಈ ಆರೋಪಿಗಳ ಗ್ಯಾಂಗ್ ಶಿವಮೊಗ್ಗದ ವ್ಯಕ್ತಿಯೊಬ್ಬರಿಂದ ಈ ರತ್ನ ಕಳವು ಮಾಡಿತ್ತು.
ಕ್ಷುಲ್ಲಕ ಕಾರಣಕ್ಕೆ ಪತ್ನಿ ಹತ್ಯೆ ಮಾಡಿ ಚಿಕ್ಕಬಾಣಾವರ ಕೆರೆಗೆ ಎಸೆದ!
ಆರೋಪಿಗಳಿಂದ ಈವರೆಗೆ ಒಟ್ಟು 5.57 ಲಕ್ಷ ಮೌಲ್ಯದ 500 ರು. ಮುಖಬೆಲೆಯ ನಕಲಿ ನೋಟುಗಳು, 5000 ರು. ನಗದು, 3 ಕಾರು, 5 ಮೊಬೈಲ್, ನಕಲಿ ನೋಟುಗಳ ಮುದ್ರಣಕ್ಕೆ ಬಳಸುತ್ತಿದ್ದ ಪ್ರಿಂಟ್, ಪೆನ್ ಡ್ರೈವ್‌ಗಳು, ಪೇಪರ್, ಮುದ್ರಣ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.