ಸಮಾಜ ಸೇವೆಗೆ ಪ್ರತಿವರ್ಷ 1 ಕೋಟಿ ಮೀಸಲು: ಸತೀಶ ಜಾರಕಿಹೊಳಿ

*  ರಾಹುಲ್‌ ಜಾರಕಿಹೊಳಿ ಸಮಾಜದ ಆಸ್ತಿ
*  ತಂದೆಯವರ ಮಾರ್ಗದರ್ಶನದಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದೇನೆ:ರಾಹುಲ್‌ ಜಾರಕಿಹೊಳಿ
*  ಇನ್ಮುಂದೆ ಕೇಕ್‌ ಕತ್ತರಿಸಿ ಅದ್ಧೂರಿಯಾಗಿ ಜನ್ಮ ದಿನಾಚರಣೆ ಮಾಡೋದು ಬೇಡ  
 

1 Crore Every Year for Social Service Says Satish Jarkiholi grg

ಯಮಕನಮರಡಿ(ಅ.04): ಸಮಯ ಪರಿಪಾಲನೆ ಮಾಡುವ ಜನರಿಗೆ ಜೀವನದಲ್ಲಿ ಎಂದಿಗೂ ಸೋಲಿಲ್ಲ ಸಮಯವು ಅತ್ಯಅಮೂಲ್ಯವಾದದು ಸಮಯವನ್ನು ವ್ಯರ್ಥ ಮಾಡದೇ ಕೆಲಸ ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ(Satish Jarkiholi) ಹೇಳಿದ್ದಾರೆ. 

ಭಾನುವಾರ ಕರಗುಪ್ಪಿ ಗ್ರಾಮದಲ್ಲಿ ಅಭಿಮಾನಿಗಳು ಆಯೋಜಿಸಿದ ಯುವ ಧುರೀಣ ರಾಹುಲ್‌ ಜಾರಕಿಹೊಳಿ(Rahul Jarkiholi) ಅವರ 22ನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ರಾಹುಲ್‌ ಜಾರಕಿಹೊಳಿಯವರ ಜನ್ಮ ದಿನದಂದು ಸತೀಶ ಶುಗ​ರ್ಸ್‌ ಮತ್ತು ಸತೀಶ ಫೌಂಡೇಶನ್‌ ವತಿಯಿಂದ 1 ಕೋಟಿ ರೂ. ಸಮಾಜ ಸೇವೆಗೆ ಮೀಸಲಿಡಲಾಗುವುದು. ಈ ಹಣದಲ್ಲಿ ಪ್ರಿಯಾಂಕ ಹಾಗೂ ರಾಹುಲ್‌ ಜಾರಕಿಹೊಳಿಯವರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಕ್ರೀಡಾಸಾಮಗ್ರಿಗಳು ವಿಜ್ಞಾನ ಸಲಕರಣೆಗಳು ನೀಡಿ ಇನ್ನಿತರ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. ಸಮಾಜದಲ್ಲಿ ಶೋಷಿತರಿಗೆ ನ್ಯಾಯ ಒದಗಿಸಿ ಕೊಡಬೇಕಾಗಿದ್ದರಿಂದ ತನ್ನ ಹುಟ್ಟುಹಬ್ಬವನ್ನು ಎಂದಿಗೂ ಆಚರಿಸಿಕೊಂಡಿಲ್ಲ ಇಂದಿನಿಂದ ರಾಹುಲ ಜಾರಕಿಹೊಳಿಯವರು ಸಮಾಜದ ಆಸ್ತಿ ರಾಹುಲ ಜಾರಕಿಹೊಳಿಯವರಿಗೆ ಹೆಚ್ಚಿನ ಜವಾಬ್ದಾರಿ ಹೆಗಲೇರಿದೆ ಸಮಾಜ ಸೇವೆಗೆ ಸಾಕಷ್ಟುಕಾಲಾವಕಾಶವಿದ್ದು, ಹಿರಿಯರು, ಸ್ವಾಮಿಗಳ ಸಲಹೆಗಳನ್ನು ರಾಹುಲ ಅವರು ಆದೇಶವೆಂದು ಪಾಲಿಸಿ ಸಮಾಜಸೇವೆಯಲ್ಲಿ ತೊಡಗಬೇಕೆಂದು ಸತೀಶ ಜಾರಕಿಹೊಳಿ ಕರೆ ನೀಡಿದರು.

40 ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರ್ಪಡೆ : ಸತೀಶ ಜಾರಕಿಹೊಳಿ ಹೊಸ ಬಾಂಬ್‌

ರಾಹುಲ್‌ ಜಾರಕಿಹೊಳಿ ಮಾತನಾಡಿ ತಂದೆಯವರ ಮಾರ್ಗದರ್ಶನದಲ್ಲಿ ನಾನು ಕಳೆದ ಎರಡು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದೇನೆ. ಅಭಿಮಾನಿಗಳು ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಕ್ಕೆ ನಾನು ಚಿರಋುಣಿಯಾಗಿದ್ದೇನೆ. ಇನ್ನೂ ಮುಂದೆ ಕೇಕ್‌ ಕತ್ತರಿಸಿ ಅದ್ದೂರಿಯಾಗಿ ಜನ್ಮ ದಿನಾಚರಣೆ ಮಾಡುವುದು ಬೇಡ ಇದೇ ಹಣದಲ್ಲಿ ಅನಾಥಶ್ರಮ, ವೃದ್ಧಾಶ್ರಮಗಳಿಗೆ ಆಹಾರ ವಿತರಣೆ ಮಾಡಿ ಇನ್ನೀತರ ಸಾಮಾಜಿಕ ಕಾರ್ಯಗಳನ್ನು ಮಾಡೋಣ ಎಂದು ಹೇಳಿದರು.

ಯಮಕನಮರಡಿ ಹುಣಸಿಕೊಳ್ಳಮಠದ ಗುರು ರಾಚೋಟಿ ಶ್ರೀ ಮಾತನಾಡಿ, ಕೆಲವರು ಪಕ್ಷದ ಹೆಸರಿನಲ್ಲಿ ತಮ್ಮ ವರ್ಚಸ್ಸು ಅಂತಸ್ತು ಹೆಸರು ಗಳಿಸಿಕೊಳ್ಳುತ್ತಾರೆ. ಆದರೆ ಸತೀಶ ಜಾರಕಿಹೊಳಿ ಅವರು ತಮ್ಮ ವರ್ಚಸ್ಸಿನಿಂದ ಪಕ್ಷಕ್ಕೆ ಹೆಸರು ತಂದು ಕೊಟ್ಟಿದ್ದಾರೆ. ರಾಹುಲ್‌ ಅವರು ಯುವಪಡೆ ನಾಡಿಗೆ ಅವಶ್ಯಕತೆಯಿದೆ ಎಂದು ಹೇಳಿದರು.

ಹತ್ತರಗಿ ಕಾರಿಮಠದ ಗುರುಸಿದ್ದ ಶ್ರೀ, ಉ.ಖಾನಾಪೂರದ ಸಿದ್ದೇಶ್ವರ ಶಿವಾಚಾರ್ಯ ಶ್ರೀ, ಕುಂದರಗಿಯ ಅಡವಿಸಿದ್ದೇಶ್ವರಮಠದ ಅಮರಸಿದ್ದೇಶ್ವರ ಶ್ರೀ, ಬೂತರಾಮನಹಟ್ಟಿಯ ಶಿವಸಿದ್ದಸೋಮೇಶ್ವರ ಶ್ರೀ, ಕಡೋಲಿಯ ಗುರುಬಸವಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ವೇದಿಕೆಯ ಮೇಲೆ ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಪಂ ಸದಸ್ಯರಾದ ಸಿದ್ದಗೌಡ ಸುಣಗಾರ, ಮಂಜುನಾಥ ಪಾಟೀಲ ಹಾಗೂ ಸಮಸ್ತ ಕಾಂಗ್ರೆಸ್‌ ಕಾರ್ಯಕರ್ತರು ರಾಹುಲ್‌ ಜಾರಕಿಹೊಳಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು. ಶೈಲಜಾ ಕೊಕ್ಕರಿ ಕಾರ್ಯಕ್ರಮ ನಿರೂಪಿಸಿದರು. ಕಿರಣಸಿಂಗ ರಜಪೂತ ಸ್ವಾಗತಿಸಿದರು.
 

Latest Videos
Follow Us:
Download App:
  • android
  • ios