ಮಂಗಳೂರು(ಮಾ.03): ಪುತ್ತೂ​ರು ತಾಲೂಕಿನಾದ್ಯಂತ ಸೋಮವಾರ ಬೆಳಗ್ಗಿನ ವೇಳೆ ಈ ವರ್ಷದ ಎರ​ಡನೇ ಬಾರಿಗೆ ಅಕಾಲಿಕ ಮಳೆ ಸುರಿಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿದಿದೆ. ಮಳೆಗೆ ರೈತರ ಅಂಗಳದಲ್ಲಿ ಹಾಕಿದ್ದ ಅಡಕೆ ವಿವಿ​ಧೆಡೆ ರಾಶಿ ಮಳೆ ನೀರಿಗೆ ಕೊಚ್ಚಿ ಹೋಗಿದೆ.

ಕಳೆದ ಗುರುವಾರ ಮುಂಜಾನೆ ಸುಮಾರು ಒಂದು ಗಂಟೆ ಮಳೆ ಸುರಿದಿತ್ತು. ಇದೀಗ 2ನೇ ಬಾರಿಗೆ ಬೆಳಗ್ಗಿನ ವೇಳೆಯಲ್ಲಿಯೇ ಮಳೆ ಸುರಿದಿದೆ. ಮಳೆಯಿಂದ ಗರಿಷ್ಠ ಉಷ್ಣತೆಯ ತಾಪಮಾನದಿಂದ ಬಳಲುತ್ತಿದ್ದ ಜನತೆಗೆ ಮಳೆ ತಂಪು ನೀಡಿದರೂ ರೈತರಿಗೆ ಆತಂಕ ಮೂಡಿಸಿದೆ.

ಬೆಂಗಳೂರು ಸೇರಿ ರಾಜ್ಯದಲ್ಲಿ ಮುಂದಿನ 3 ದಿನ ಸುರಿಯಲಿದೆ ಮಳೆ

ಕಳೆದ ಒಂದು ವಾರದಿಂದ ತಾಪಮಾನದಲ್ಲಿ ಗರಿಷ್ಠ ಏರಿಕೆಯಾಗಿದ್ದು, ಸೆಖೆಯಿಂದ ಜನತೆ ಪರದಾಡುವಂತಾಗಿತ್ತು. ಸೋಮವಾರ ಮುಂಜಾನೆ 6 ಗಂಟೆ ವೇಳೆಗೆ ಪ್ರಾರಂಭವಾದ ಮಳೆ ಸುಮಾರು 7.30 ತನಕ ಸುರಿಯಿತು. ಗುರುವಾರ ಮದ್ಯಾಹ್ನದ ತನಕ ಮೋಡ ಕವಿದ ವಾತಾವರಣವಿತ್ತು.