ಪೊಲೀಸ್‌ ಭದ್ರತೆಯೊಂದಿಗೆ ನಡೆದ ಹುಂಡಿ ಎಣಿಕೆ ಕಾರ್ಯ|  ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ಶ್ರೀಮಲೆಮಹದೇಶ್ವರ ದೇವಸ್ಥಾನ| ನಗದಿನ ಪೈಕಿ 11 ಲಕ್ಷಕ್ಕೂ ಅಧಿಕ ಮೊತ್ತದ ನಾಣ್ಯಗಳು| 

ಕೊಳ್ಳೇಗಾಲ(ಮಾ.27):ಕೋಟ್ಯಂತರ ಭಕ್ತರ ಆರಾಧ್ಯ ದೈವ ಶ್ರೀಮಲೆಮಹದೇಶ್ವರ ದೇಗುಲದ ಹುಂಡಿಯಲ್ಲಿ 28 ದಿನದ ಅವಧಿಯಲ್ಲಿ 1.54 ಕೋಟಿ ಆದಾಯ ಸಂಗ್ರಹವಾಗಿದೆ. 

ಗುರುವಾರ ಬೆಳಗ್ಗೆಯಿಂದ ರಾತ್ರಿಯ ತನಕ ಹುಂಡಿ ಎಣಿಕೆ ಪೊಲೀಸ್‌ ಭದ್ರತೆಯೊಂದಿಗೆ ಸಿಸಿ ಕ್ಯಾಮರಾ ಕಣ್ಗಾವಲಿನೊಂದಿಗೆ ಬ್ಯಾಂಕ್‌ ಅಧಿಕಾರಿಗಳು, ಪ್ರಾಧಿಕಾರದ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು. 

ನಿಮಗೆ ಗೊತ್ತಿಲ್ಲದ ಮಲೆಮಹದೇಶ್ವರ ಬೆಟ್ಟದ ಅಚ್ಚರಿಗಳು

ಈ ವೇಳೆ ಹುಂಡಿಯಲ್ಲಿ 1,54,64,147, 60 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ ಸಂಗ್ರಹವಾಗಿದೆ. ಸಂಗ್ರಹವಾದ ನಗದಿನ ಪೈಕಿ 11 ಲಕ್ಷಕ್ಕೂ ಅಧಿಕ ಮೊತ್ತದ ನಾಣ್ಯಗಳು ಹುಂಡಿಯಲ್ಲಿ ದೊರೆತಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.