.ಯುವಜನರನ್ನು ಸಂಘಟಿಸಿ ಕಾಂಗ್ರೆಸ್‌ಗೆ ಬಲ ನೀಡಿ
ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪರಿಶಿಷ್ಟವರ್ಗದ ಯುವಜನರನ್ನು ಸಂಘಟನೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬಲ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಪರಿಶಿಷ್ಟಪಂಗಡದ ಕಾಂಗ್ರೆಸ್ ಮುಖಂಡರಿಗೆ ಸಲಹೆ ನೀಡಿದ್ದಾರೆ.
ತುಮಕೂರು (ಅ.28): ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪರಿಶಿಷ್ಟವರ್ಗದ ಯುವಜನರನ್ನು ಸಂಘಟನೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬಲ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಪರಿಶಿಷ್ಟಪಂಗಡದ ಕಾಂಗ್ರೆಸ್ ಮುಖಂಡರಿಗೆ ಸಲಹೆ ನೀಡಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ (Congress) ಕಚೇರಿಯಲ್ಲಿ ನಡೆದ ಪರಿಶಿಷ್ಟಪಂಗಡದ (ST) ಮುಖಂಡರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷ ನರಸಿಂಹಯ್ಯ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಆದರೆ ಆಂತರಿಕ ಭಿನ್ನಾಭಿಪ್ರಾಯದಿಂದ ಕೆಲವೊಮ್ಮೆ ಹಿನ್ನೆಡೆಯಾಗಿದೆ. ಈ ಬಾರಿ ಹಾಗಾದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಕಾಂಗ್ರೆಸ್ ಸರ್ಕಾರದಿಂದ ಪರಿಶಿಷ್ಟಪಂಗಡದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ಪರಿಶಿಷ್ಟಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕೆಂಬುದು ಹಲವು ದಿನಗಳ ಹೋರಾಟವಾಗಿದೆ. ಆದರೆ ಸುಗ್ರೀವಾಜ್ಞೆಗಿಂತ ಸಚಿವ ಸಂಪುಟದಲ್ಲಿಟ್ಟು ಅನುಮೋದನೆ ಪಡೆದು ಜಾರಿಗೆ ತಂದರೆ ಹೆಚ್ಚಿನ ಭದ್ರತೆ ದೊರೆತಂತಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬಂದರೆ ಹೆಚ್ಚಿನ ಬಲ ಬರಲಿದೆ ಎಂದರು.
ಕೆಪಿಸಿಸಿ ಪರಿಶಿಷ್ಟಪಂಗಡದ ರಾಜ್ಯಾಧ್ಯಕ್ಷ ಪಾಲಯ್ಯ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಹೆಚ್ಚಿನ ಅವಕಾಶವಿದೆ. 11 ಕ್ಷೇತ್ರಗಳಲ್ಲಿ ಪರಿಶಿಷ್ಟಮತದಾರರ ಸಂಖ್ಯೆಯೂ ಹೆಚ್ಚಿದೆ. ಯುವಜನರನ್ನು ಸಂಘಟಿಸುವ ಉದ್ದೇಶದಿಂದ ಎಲ್ಲಾ ಬೂತ್‌ಗಳಲ್ಲಿಯೂ ಎಸ್ಸಿ ಸೆಲ್‌ನ ಪದಾಧಿಕಾರಿಗಳನ್ನು ನೇಮಕ ಮಾಡಿ, ಅವರ ಮೂಲಕ ಪರಿಶಿಷ್ಟಪಂಗಡದ ಎಲ್ಲಾ ಮತದಾರರನ್ನು ತಲುಪಿ, ಕಾಂಗ್ರೆಸ್ ಪಕ್ಷದ ಸಾಧನೆಗಳು, ಇದುವರೆಗೂ ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಕಾಂಗ್ರೆಸ್ ಪಕ್ಷ ನೀಡಿರುವ ಕಾರ್ಯಕ್ರಮಗಳನ್ನು ತಿಳಿಸಿ, ಮನದಟ್ಟು ಮಾಡುವ ಮೂಲಕ ಕಾಂಗ್ರೆಸ್ ಪಕ್ಷದತ್ತ ಅವರನ್ನು ಸೆಳೆಯುವ ಅಗತ್ಯವಿದೆ. ಪಕ್ಷದ ಪರಿಶಿಷ್ಟಪಂಗಡದ ಜಿಲ್ಲಾಧ್ಯಕ್ಷರಾಗಿ ನರಸಿಂಹಯ್ಯ ಅವರನ್ನು ನೇಮಿಸಿದೆ. ಹಿರಿಯರಾದ ನರಸಿಂಹಯ್ಯರ ನೇತೃತ್ವದಲ್ಲಿ ಯುವಜನರು ಒಗ್ಗೂಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕಿದೆ ಎಂದರು.
ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಲಕ್ಕಪ್ಪ, ಪರಿಶಿಷ್ಟಪಂಗಡ ವಿಭಾಗದ ಪುರುಷೋತ್ತಮ್ ಬಾಬು, ಓಬಳರಾಜು, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕೆಲವು ಕ್ಷೇತ್ರದಲ್ಲಿ ಎಸ್ಟಿಮತದಾರರು ನಿರ್ಣಾಯಕ
ತುಮಕೂರು ಜಿಲ್ಲಾ ಘಟಕದಲ್ಲಿ ಪರಿಶಿಷ್ಟಪಂಗಡ ವಿಭಾಗದ ಪದಾಧಿಕಾರಿಗಳ ಪರಿಷ್ಕರಣೆಯ ಜೊತೆಗೆ, ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿರುವವರಿಗೆ ಸ್ಥಾನಮಾನ ನೀಡಿರುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ತುಮಕೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿಯೂ ಪರಿಶಿಷ್ಟಪಂಗಡದ ಮತದಾರರ ಸಂಖ್ಯೆ ಸಾಕಷ್ಟಿದೆ. ಕೆಲವು ಕ್ಷೇತ್ರಗಳಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಬಿಜೆಪಿ ಸರ್ಕಾರದ ಬಡವರ ವಿರೋಧಿ ನೀತಿಗಳ ವಿರುದ್ಧ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡುವ ಮೂಲಕ ಭ್ರಷ್ಟಾಚಾರವನ್ನೇ ಬಂಡವಾಳ ಮಾಡಿಕೊಂಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಯುವಜನತೆ ಮುಂದಾಗಬೇಕೆಂದು ಆರ್.ರಾಮಕೃಷ್ಣ ತಿಳಿಸಿದರು.
ಯುವಜನರನ್ನು ಸಂಘಟಿಸಿ ಕಾಂಗ್ರೆಸ್‌ಗೆ ಬಲ ನೀಡಿ
ಪರಿಶಿಷ್ಟಪಂಗಡ ಮುಖಂಡರ ಪೂರ್ವಭಾವಿ ಸಭೆಯಲ್ಲಿ ರಾಮಕೃಷ್ಣ
ಬಿಜೆಪಿಯ ಬಡವರ ವಿರೋಧಿ ನೀತಿ ವಿರುದ್ಧ ಹೋರಾಡೋಣ
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಆದರೆ ಆಂತರಿಕ ಭಿನ್ನಾಭಿಪ್ರಾಯದಿಂದ ಕೆಲವೊಮ್ಮೆ ಹಿನ್ನೆಡೆ
ಈ ಬಾರಿ ಹಾಗಾದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಕಾಂಗ್ರೆಸ್ ಸರ್ಕಾರದಿಂದ ಪರಿಶಿಷ್ಟಪಂಗಡದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ.
ಪರಿಶಿಷ್ಟಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕೆಂಬುದು ಹಲವು ದಿನಗಳ ಹೋರಾಟವಾಗಿದೆ
ಯುವಜನರನ್ನು ಸಂಘಟಿಸುವ ಉದ್ದೇಶದಿಂದ ಎಲ್ಲಾ ಬೂತ್‌ಗಳಲ್ಲಿಯೂ ಎಸ್ಸಿ ಸೆಲ್‌ನ ಪದಾಧಿಕಾರಿಗಳನ್ನು ನೇಮಕ ಮಾಡಿ, ಅವರ ಮೂಲಕ ಪರಿಶಿಷ್ಟಪಂಗಡದ ಎಲ್ಲಾ ಮತದಾರರನ್ನು ತಲುಪಿ
ತುಮಕೂರು ಜಿಲ್ಲಾ ಘಟಕದಲ್ಲಿ ಪರಿಶಿಷ್ಟಪಂಗಡ ವಿಭಾಗದ ಪದಾಧಿಕಾರಿಗಳ ಪರಿಷ್ಕರಣೆ