Asianet Suvarna News Asianet Suvarna News

ಅಂಬರೀಶ್ ಕೊಟ್ಟ ರಿಯಾಕ್ಷನ್'ಗೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸುಸ್ತೋ ಸುಸ್ತು

ಸಿಎಂ ಆದ ಮೇಲೆ ಸಿದ್ದರಾಮಯ್ಯ ಬದಲಾಗಿದ್ದಾರಾ ಅವರೇ ಹೇಳಬೇಕು. ಹಳೆಯದನ್ನು ಅವರೇ ಹೇಳಬೇಕು. ಈಗ ನನ್ನನ್ನು ದೂರ ಮಾಡಿದ್ದಾರೆ. ‘ನನ್ನ ಮನೆಗೆ ಸಿಎಂ ಬರಬೇಕೆಂಬ ಆಸೆ ಇಲ್ಲ, ನನ್ನ ಮನೆಗೆ ಹತ್ತಾರು ಸಿಎಂಗಳು ಬಂದಿದ್ದಾರೆ

VenuGopal Meet and Ambi Reaction Karnataka Assembly  Election 2018

ಬೆಂಗಳೂರು(ಏ.24): ರೆಬಲ್ ಸ್ಟಾರ್ ಅಂಬರೀಶ್ ಮತ್ತೆ ರೆಬಲ್ ಆಗಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸ್ವತಃ ಮನವೊಲಿಸಲು ಬಂದಾಗ ಬಗ್ಗದೆ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಡ್ಯದ ಚುನಾವಣಾ ಉಸ್ತುವಾರಿ ವಹಿಸಿ, ಪಕ್ಷ ಗೆಲ್ಲಿಸಿ ಎಂದು ವೇಣುಗೋಪಾಲ್ ಮನವಿ ಮಾಡಿಕೊಂಡಾಗ ಸ್ಪಷ್ಟವಾಗಿ ‘ನೋ’ ಎಂದಿದ್ದಾರೆ. ಆರೋಗ್ಯ ಸಹಕರಿಸ್ತಿಲ್ಲ, ಓಡಾಡೋಕೆ ಆಗೊಲ್ಲ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಗಣಿಗ ರವಿಕುಮಾರ್​ ಸ್ಪರ್ಧೆಗೆ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿ ಮಾಜಿ  ಸಂಸದೆ ರಮ್ಯಾ ಪರ ಬ್ಯಾಟಿಂಗ್ ಮಾಡಿದರು. ಗಣಿಗ ರವಿ ಬದಲು ರಮ್ಯಾಗೆ ಟಿಕೆಟ್ ನೀಡಬಹುದಿತ್ತು. ರಮ್ಯಗೆ ಟಿಕೆಟ್ ಕೊಟ್ಟಿದ್ದಿದ್ರೆ ಸಂತೋಷ ಆಗುತ್ತಿತ್ತು ಎಂದ ಅಂಬಿ ಗಣಿಗ ರವಿ ನಾಯಕ ಏನ್ರೀ..? ಎಂದು ಪ್ರಶ್ನಿಸಿದರು.

ಸಿದ್ದು ಬಗ್ಗೆ ತೀವ್ರ ಅಸಮಾಧಾನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರೆಬಲ್'ಸ್ಟಾರ್ ‘ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಬಯಸಿದ್ದೇ ನಾನು’‘ಕನಕದಾಸನನ್ನು ಕನಕರಾಜ ಮಾಡಿ ಎಂದು ಹೇಳಿದ್ದೇ ಇದೇ ಅಂಬರೀಶ್​. ಕನಕರಾಜ ಎಂದಿದ್ದಕ್ಕೆ ನನ್ನನ್ನು ಟೀಕಿಸಿದವರು ಈಗ ಸಿಎಂ ಜತೆಗಿದ್ದಾರೆ. ಸಿಎಂ ಆದ ಮೇಲೆ ಸಿದ್ದರಾಮಯ್ಯ ಬದಲಾಗಿದ್ದಾರಾ ಅವರೇ ಹೇಳಬೇಕು.   

ಹಳೆಯದನ್ನು ಅವರೇ ಹೇಳಬೇಕು. ಈಗ ನನ್ನನ್ನು ದೂರ ಮಾಡಿದ್ದಾರೆ. ‘ನನ್ನ ಮನೆಗೆ ಸಿಎಂ ಬರಬೇಕೆಂಬ ಆಸೆ ಇಲ್ಲ, ನನ್ನ ಮನೆಗೆ ಹತ್ತಾರು ಸಿಎಂಗಳು ಬಂದಿದ್ದಾರೆ’ ಅವರಿಗಿಂತ ಗ್ರೇಟ್​ ಎಂಬ ಭಾವನೆ ಇಲ್ಲ, ‘ನಾನು ಸೀರಿಯಸ್ ರಾಜಕಾರಣಿ ಅಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios