ಇಂದು ರಾಹುಕಾಲದ ಸಮಯ 3 ಗಂಟೆಯಿಂದ 4.30 ರ ವೇಳೆಯಲ್ಲಿ ಆಗಮಿಸಿ 3.02 ನಿಮಿಷಕ್ಕೆ ತಮ್ಮ ಉಮೇದುವಾರಿಕೆಯನ್ನು ಚುನಾವಣಾ ಅಧಿಕಾರಿಗೆ ಒಪ್ಪಿಸಿದ್ದಾರೆ.

ಬೆಳಗಾವಿ(ಏ.24): ಮೇ. 12 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಮಾಜಿ ಸಚಿವ ಸತೀಶ್ ಜಾರಕಿಹೋಳಿಅವರು ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಮೂನಂಬಿಕೆ ವಿರುದ್ಧ ತಮ್ಮ ಹೋರಾಟವನ್ನ ಮುಂದುವರಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು. ಇಂದು ರಾಹುಕಾಲದ ಸಮಯ 3 ಗಂಟೆಯಿಂದ 4.30 ರ ವೇಳೆಯಲ್ಲಿ ಆಗಮಿಸಿ 3.02 ನಿಮಿಷಕ್ಕೆ ತಮ್ಮ ಉಮೇದುವಾರಿಕೆಯನ್ನು ಚುನಾವಣಾ ಅಧಿಕಾರಿಗೆ ಒಪ್ಪಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಹಲವು ದಿನಗಳಿಂದ ಮೂನಂಬಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ದೇಶದಲ್ಲಿ ಹಲವರು ಮಹೂರ್ತ ನೋಡಿ ತಮ್ಮ ನಾಮಪತ್ರ ಸಲ್ಲಿಸುತ್ತಾರೆ. ಆ ನಿಟ್ಟಿನಲ್ಲಿ ನಾನು ಮೂನಂಬಿಕೆ ವಿರುದ್ಧ  ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದು ಖಂಡಿತಾ ಗೆಲುವು ಸಾಧಿಸಲಿದ್ದೇನೆ'ಎಂದು ವಿಶ್ವಾಸ ವ್ಯಕ್ತಪಡಿಸಿದರು.