ಕೋಲಾರ ಕಾಂಗ್ರೆಸ್‌ ಅಭ್ಯರ್ಥಿ ಪಾಷಾ ನಾಪತ್ತೆ..!

Kolar Congress Candidate Abscond
Highlights

ಈ ಕ್ಷೇತ್ರದಲ್ಲಿ ವಿಧಾನ ಪರಿಷತ್‌ ಮಾಜಿ ಸಭಾಧ್ಯಕ್ಷ ವಿ.ಆರ್‌. ಸುದರ್ಶನ್‌ ಸೇರಿದಂತೆ ಅನೇಕರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿದ್ದರು. ಆದರೆ ಸಂಸದ ಮುನಿಯಪ್ಪ ಅವರ ಶಿಫಾರಸಿನ ಆಧಾರದಲ್ಲಿ ಜಮೀರ್‌ ಪಾಷಾ ಅವರಿಗೆ ಟಿಕೆಟ್‌ ದಕ್ಕಿತ್ತು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿ ಪ್ರತಿಭಟನೆಗಳೂ ನಡೆದಿದ್ದವು.

ಕೋಲಾರ(ಏ.24): ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಸಿರುವ ಸೈಯ್ಯದ್‌ ಜಮೀರ್‌ ಪಾಷ ಕಳೆದ ನಾಲ್ಕು ದಿವಸಗಳಿಂದ ಎಲ್ಲಿಯೂ ಪ್ರಚಾರಕ್ಕೆ ಹೋಗದೆ ಇರುವುದು ಕಾರ್ಯಕರ್ತರಲ್ಲಿ ಗೊಂದಲವನ್ನುಂಟು ಮಾಡಿದೆ.

ಕಳೆದ ಶುಕ್ರವಾರದಂದು ನಾಮಪತ್ರ ಸಲ್ಲಿಸಿದ್ದ ಪಾಷಾ ಈವರೆಗೂ ಯಾವ ಸ್ಥಳೀಯ ಮುಖಂಡರನ್ನಾಗಲಿ, ಕಾರ್ಯಕರ್ತರನ್ನಾಗಲಿ ಸಂಪರ್ಕಿಸಿಲ್ಲ, ಮಾತ್ರವಲ್ಲ ಸಂಪರ್ಕಕ್ಕೂ ಸಿಕ್ಕಿಲ್ಲ. ಹೀಗಾಗಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಿಂತ ನೀರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗುತ್ತಿದೆ.

ಈ ಕ್ಷೇತ್ರದಲ್ಲಿ ವಿಧಾನ ಪರಿಷತ್‌ ಮಾಜಿ ಸಭಾಧ್ಯಕ್ಷ ವಿ.ಆರ್‌. ಸುದರ್ಶನ್‌ ಸೇರಿದಂತೆ ಅನೇಕರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿದ್ದರು. ಆದರೆ ಸಂಸದ ಮುನಿಯಪ್ಪ ಅವರ ಶಿಫಾರಸಿನ ಆಧಾರದಲ್ಲಿ ಜಮೀರ್‌ ಪಾಷಾ ಅವರಿಗೆ ಟಿಕೆಟ್‌ ದಕ್ಕಿತ್ತು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿ ಪ್ರತಿಭಟನೆಗಳೂ ನಡೆದಿದ್ದವು. ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿರುವ ಸೈಯ್ಯದ್‌ ಜಮೀರ್‌ ಪಾಷ, ‘ಟಿಕೆಟ್‌ ವಿಚಾರದಲ್ಲಿ ಮುನಿಸಿಕೊಂಡಿದ್ದ ಮುಖಂಡರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದ್ದು ಇನ್ನೆರಡು ಮೂರು ದಿವಸಗಳೊಳಗಾಗಿ ಪ್ರಚಾರ ಕಾರ್ಯ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

loader