ರಾಧಿಕಾ ಜತೆ ಶೀಘ್ರ HDK ಪಲಾಯನ ಮಾಡ್ತಾನೆ : ಜಮೀರ್

ಮೈಸೂರು(ಏ.28):  ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹಳೆಯ ಸ್ನೇಹಿತ ಜಮೀರ್ ಅಹಮದ್ ಖಾನ್ ತಮ್ಮ ಟೀಕೆಗಳನ್ನು ಮುಂದುವರಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಡಿಕೆ ರಾಧಿಕಾ ಜತೆ ಓಡಿ ಹೋಗುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಮೈಸೂರಿನ ವರುಣಾ ಕ್ಷೇತ್ರದಲ್ಲಿ ಸಿಎಂ ಪುತ್ರ ಡಾ.ಯತೀಂದ್ರ ಪರವಾಗಿ  ಪ್ರಚಾರದಲ್ಲಿ ಮಾತನಾಡಿದ ಅವರು,  ಕುಮಾರಸ್ವಾಮಿ ಎಲ್ಲಿ ಅಂತಾ ಜನರು ಹುಡುಕುವಂತಹ ಪರಿಸ್ಥಿತಿ ಬರುತ್ತದೆ. ಜೆಡಿಎಸ್ ರಾಜ್ಯಾಧ್ಯಕ್ಷರಿಗೆ   ಇದು ಕೊನೆಯ ಚುನಾವಣೆ. ಇನ್ನು ಒಂದು ತಿಂಗಳು ಕಾಯಿರಿ. ಎಚ್ ಡಿಕೆ ಅಣ್ಣನ ಮಗ ಪ್ರಜ್ವಲ್ ರೇವಣ್ಣ ಬರ್ತಾನೆ, ಅವನನ್ನು ಓಡಿಸುತ್ತಾನೆ ’ಎಂದು ಎಚ್.ಡಿ.ಕೆ ವಿರುದ್ಧ  ಏಕವಚನದಲ್ಲಿ ನಿಂದಿಸಿದರು.

Comments 0
Add Comment