ಗೆದ್ದರೆ ಬೈಕ್ ಫ್ರೀ, ಸೋತರೆ ಸಾಲ ತಲೆಯ ಮೇಲೆ.!

Bike will be given if Win Loan if Lost
Highlights

ಚುನಾವಣೆಯ ಪ್ರಚಾರಕ್ಕೆ ಲೋನ್‌'ನಲ್ಲಿ ಬೈಕ್ ನೀಡಲಾಗುತ್ತದೆ. ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೇ ಆ ಬೈಕ್ ಉಚಿತ ಹಾಗೂ ಆ ಸಾಲವನ್ನು ಗೆದ್ದ ಅಭ್ಯರ್ಥಿ ಪಾವತಿಸಿಕೊಳ್ಳುತ್ತಾರೆ. ಇಲ್ಲ ಅಭ್ಯರ್ಥಿಗೆ ಸೋಲಾದರೆ ಉಳಿದ ಸಾಲ ಬೈಕ್ ಪಡೆದಾತನ ತಲೆ ಮೇಲೆ.

ಕೊಪ್ಪಳ(ಏ.24): ಚುನಾವಣೆಯ ಪ್ರಚಾರಕ್ಕೆ ಲೋನ್‌'ನಲ್ಲಿ ಬೈಕ್ ನೀಡಲಾಗುತ್ತದೆ. ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೇ ಆ ಬೈಕ್ ಉಚಿತ ಹಾಗೂ ಆ ಸಾಲವನ್ನು ಗೆದ್ದ ಅಭ್ಯರ್ಥಿ ಪಾವತಿಸಿಕೊಳ್ಳುತ್ತಾರೆ. ಇಲ್ಲ ಅಭ್ಯರ್ಥಿಗೆ ಸೋಲಾದರೆ ಉಳಿದ ಸಾಲ ಬೈಕ್ ಪಡೆದಾತನ ತಲೆ ಮೇಲೆ.

ಕೊಪ್ಪಳದಲ್ಲಿ ರಾಜಕೀಯ ಪಕ್ಷದ ಅಭ್ಯರ್ಥಿಯೊಬ್ಬರು ತಮ್ಮ ಕಾರ್ಯಕರ್ತರಿಗೆ ಇಂಥದ್ದೊಂದು ಅಫರ್ ನೀಡಿದ್ದಾರೆ. ಐದು ಸಾವಿರ ಬೈಕ್‌'ನ್ನು ಕಾರ್ಯಕರ್ತರಿಗೆ ನೀಡುವ ಉದ್ದೇಶ ಹೊಂದಲಾಗಿದ್ದು, ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅವರದೇ ದಾಖಲೆಯ ಮೇಲೆ ಡೌನ್ ಪೇಮೆಂಟ್ ಪಾವತಿಸಿ, ಬೈಕ್ ನೀಡಲಾಗುತ್ತದೆ. ಹೀಗೆ ಪಡೆದ ಬೈಕ್‌'ನ್ನು ತೆಗೆದುಕೊಂಡು ಅವರು ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಬೇಕು. ಅಭ್ಯರ್ಥಿಯೂ ಈ ಬಗ್ಗೆ ತಮ್ಮ ಕಾರ್ಯಕರ್ತರಿಗೆ ಮಾತುಕತೆ ನಡೆಸುವಂತೆ ಸೂಚಿಸಿದ್ದಾರೆ. ತೀರಾ ಕಡಿಮೆ ಡೌನ್ ಪೇಮೆಂಟ್ ಸ್ಕೀಂನ್ನೇ ಆಯ್ಕೆ ಮಾಡಿಕೊಳ್ಳಬೇಕು. ಇದೆಲ್ಲ ಪ್ರಕ್ರಿಯೆ ಮುಗಿದ ಮೇಲೆ ಡೌನ್‌ ಪೇಮೆಂಟ್ ಪಾವತಿಸಲಾಗುತ್ತದೆ. ನಂತರ ಬೈಕ್ ಪಡೆದು, ಪ್ರಚಾರ ನಡೆಸಬೇಕು ಎಂದಿದ್ದಾರೆ.

ಅರ್ಧ ಪಾವತಿಸಲು ಪಟ್ಟು: ತೀರಾ ಕಡಿಮೆ ಡೌನ್‌ ಪೇಮೆಂಟ್ ಇರುವ ಸ್ಕೀಂ ಆಯ್ಕೆ ಮಾಡಿಕೊಳ್ಳುವುದಕ್ಕೆ ಕಾರ್ಯಕರ್ತರು ಹಿಂದೇಟು ಹಾಕಿದ್ದಾರೆ. ವಾಹನದ ಮೊತ್ತದ ಅರ್ಧದಷ್ಟಾದರೂ ಪಾವತಿಸಿದರೆ ನಾವು ಸಿದ್ಧವಿದ್ದೇವೆ. ನೀವು ಅರ್ಧ ಪಾವತಿಸಿದರೆ ಸಾಕು, ಉಳಿದಿದ್ದನ್ನು ನೀವು ಗೆದ್ದರೂ ಸರಿ, ಸೋತರೂ ಸರಿ ನಾವೇ ಪಾವತಿಸುತ್ತೇವೆ. ಇಂಥ ಸ್ಕೀಂ ಆದರೆ ಓಕೆ ಎಂದಿದ್ದು, ಇದಿನ್ನೂ ಚರ್ಚೆಯ ಹಂತದಲ್ಲಿಯೇ ಇದೆ.

loader