ಜೆಡಿಎಸ್‌'ಗೆ 29 ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಯಾರಿದ್ದಾರೆ..?

29 JDS Star Campaigner List Announce
Highlights

ವಿಧಾನಸಭಾ ಚುನಾವಣಾ ಸಮರದಲ್ಲಿ ಮತಬೇಟೆಗೆ ಜೆಡಿಎಸ್‌ ಪಕ್ಷವು 29 ಸ್ಟಾರ್‌ ಕ್ಯಾಂಪೇನರ್‌'ಗಳ ಪಟ್ಟಿ ಪ್ರಕಟಿಸಿದ್ದು, ಇದರಲ್ಲಿ ಇತ್ತೀಚೆಗೆ ಪಕ್ಷ ಸೇರಿದ ನಟಿಯರಾದ ಅಮೂಲ್ಯ ಹಾಗೂ ಪೂಜಾ ಗಾಂಧಿ ಅವರನ್ನು ಕೈ ಬಿಟ್ಟಿರುವುದು ಕುತೂಹಲ ಮೂಡಿಸಿದೆ.

ಬೆಂಗಳೂರು(ಏ.24): ವಿಧಾನಸಭಾ ಚುನಾವಣಾ ಸಮರದಲ್ಲಿ ಮತಬೇಟೆಗೆ ಜೆಡಿಎಸ್‌ ಪಕ್ಷವು 29 ಸ್ಟಾರ್‌ ಕ್ಯಾಂಪೇನರ್‌'ಗಳ ಪಟ್ಟಿ ಪ್ರಕಟಿಸಿದ್ದು, ಇದರಲ್ಲಿ ಇತ್ತೀಚೆಗೆ ಪಕ್ಷ ಸೇರಿದ ನಟಿಯರಾದ ಅಮೂಲ್ಯ ಹಾಗೂ ಪೂಜಾ ಗಾಂಧಿ ಅವರನ್ನು ಕೈ ಬಿಟ್ಟಿರುವುದು ಕುತೂಹಲ ಮೂಡಿಸಿದೆ.

ಎಂದಿನಂತೆ ಸ್ಟಾರ್‌ ಕ್ಯಾಂಪೇನರ್‌'ಗಳ ಪಟ್ಟಿಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಕುಟುಂಬದ ಪ್ರಾಬಲ್ಯ ಮುಂದುವರೆದಿದ್ದು, ನಟ ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಶಿವಕುಮಾರ್‌ ರಾಜ್‌ ಕುಮಾರ್‌ ಮತ್ತು ಮಧು ಬಂಗಾರಪ್ಪ ಕೂಡಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನುಳಿದ ಪಕ್ಷದ ಅಗ್ರಪಂಕ್ತಿಯ ಹಿರಿಯ ನಾಯಕರ ಪ್ರಚಾರಕ್ಕಿಳಿಯಲಿದ್ದಾರೆ. ದೇವೇಗೌಡರೂ ಸೇರಿದಂತೆ ಅವರ ಕುಟುಂಬದ ಏಳು ಮಂದಿ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿರುವುದು ವಿಶೇಷ.

ಯಾರ್ಯಾರು ಇದ್ದಾರೆ?:

ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್‌ ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ, ಅವರ ಪತ್ನಿ ಭವಾನಿ ರೇವಣ್ಣ, ಪುತ್ರ ಪ್ರಜ್ವಲ್‌ ರೇವಣ್ಣ, ಪಕ್ಷದ ಹಿರಿಯ ನಾಯಕರಾದ ಡ್ಯಾನಿಶ್‌ ಅಲಿ, ಪಿ.ಜಿ.ಆರ್‌.ಸಿಂಧ್ಯಾ, ಬಿ.ಎಂ.ಫಾರೂಕ್‌, ಕುಪೇಂದ್ರ ರೆಡ್ಡಿ, ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶಂಪೂರ್‌, ಬಿ.ಬಿ.ನಿಂಗಯ್ಯ, ವೈ.ಎಸ್‌.ವಿ.ದತ್ತ, ಎಚ್‌.ವಿಶ್ವನಾಥ್‌, ಜಫ್ರುಲ್ಲಾ ಖಾನ್‌, ಪಟೇಲ್‌ ಶಿವರಾಂ, ಗೀತಾ ಶಿವರಾಜ್‌ ಕುಮಾರ್‌, ಮಧು ಬಂಗಾರಪ್ಪ, ರಮೇಶ್‌ ಬಾಬು, ಕೆ.ಟಿ.ಶ್ರೀನಿವಾಸ್‌ ಗೌಡ, ಕಾಂತರಾಜ್‌ ಪಟೇಲ್‌, ಟಿ.ಎ.ಶರವಣ, ಮರಿತಿಬ್ಬೇಗೌಡ, ಎ.ಪಿ.ರಂಗನಾಥ್‌, ಕೆ.ವಿ.ಅಮರನಾಥ್‌, ಸೈಯದ್‌ ಮೋಹಿದ್‌ ಅಲ್ತಾಫ್‌, ಎಚ್‌.ಎಂ.ರಮೇಶ್‌ ಗೌಡ.

loader