ಕಲಬುರಗಿ[ಅ.21]:  ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಅ. 22 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಉದ್ಯೋಗ ಮೇಳದಲ್ಲಿ ಕಲಬುರಗಿ ಕ್ರೋಮ್ ಟೆಲೆ ಸರ್ವೀಸ್‌ಸನಲ್ಲಿ (ಮಹಿಳೆಯರು ಮಾತ್ರ) ಟೆಲಿಕಾಲರ್ 15  ಹುದ್ದೆಗಳಿಗೆ ಬಿ.ಬಿ.ಎಂ, ಬಿ.ಸಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಎ. ಪಾಸಾಗಿರಬೇಕು. ಕಲಬುರಗಿ ಅನ್ನಪೂರ್ಣ ಮೈಕ್ರೋ ಫೈನಾನ್ಸ್‌ನಲ್ಲಿ ಫೀಲ್ಡ್ ಕ್ರೆಡಿಟ್ ಆಫೀಸರ್ 100 ಹುದ್ದೆಗಳಿಗೆ(ಪುರುಷರಿಗೆ ಮಾತ್ರ) ಪಿಯುಸಿ ಮತ್ತು ಯಾವುದೇ ಪದವಿ ಪಾಸಾಗಿರಬೇಕು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೆಂಗಳೂರಿನ ಎನ್.ಟಿ.ಟಿ.ಎಫ್.ನಲ್ಲಿ ಪೋಸ್ಟ್ ಡಿಪ್ಲೊಮಾ ಇನ್‌ಏರೋಸ್ಪೆಸ್ ಇಂಟರ್ ಕನೆಕ್ಟ್ ಸಲ್ಯೂಷನ್‌ನಲ್ಲಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಟ್ರೇನಿಂಗ್‌ ನೀಡಲಾಗುತ್ತದೆ. ಧಾರವಾಡ ಕರಾವಳಿ ಟೀಚರ್ಸ್ ಹೆಲ್ಪ್‌ಲೈನ್‌ನಲ್ಲಿ ಶಿಕ್ಷಕರ ಹುದ್ದೆಗೆ ಪದ ಮತ್ತು ಸ್ನಾತಕೋತ್ತರ ಪದ ಜೊತೆಗೆ ಬಿ.ಎಡ್. ಮತ್ತು ಡಿ.ಎಡ್. ಪಾಸಾಗಿರಬೇಕು. ಹೆಚ್ಚಿನ ಮಾತಿಗಾಗಿ ಕಲಬುರಗಿ ಜಿಲ್ಲಾ ಉದೋಗ ನಿಮಯ ಕಚೇರಿ ದೂ. 08472- 274846 ಗೆ ಸಂಪರ್ಕಿಸಿ.