Asianet Suvarna News Asianet Suvarna News

ಶಹಾಬಾದನ ಮುಖ್ಯರಸ್ತೆಯಲ್ಲೇ ಹರಿತಿದೆ ಕೊಳಚೆ ನೀರು: ಡೆಂಘೀ ಭೀತಿ

ಕೊಳಚೆ ನೀರು ಮುಖ್ಯ ರಸ್ತೆಗೆ| ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ | ಶಾಸಕರ ಮಾತಿಗೂ ಕ್ಯಾರೆ ಅನ್ನದ ಅಧಿಕಾರಿಗಳು | ನಗರವಾಸಿಗಳಿಗೆ ಸಂಕಷ್ಟ| 

Sewage Water in Main Road in Shahabad in Kalaburagi District
Author
Bengaluru, First Published Oct 25, 2019, 11:48 AM IST

ಶಹಾಬಾದ[ಅ.25]: ನಗರದಿಂದ ಬಸವೇಶ್ವರ ವೃತ್ತದ ಮೂಲಕ ಹೊರಹೋಗುವ ಮುಖ್ಯ ರಸ್ತೆ ನಗರಸಭೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನ ಮೂಗು ಮುಚ್ಚಿಕೊಂಡು ರಸ್ತೆಯಲ್ಲಿ ನಿಂತಿರುವ ಕೊಳಚೆ ನೀರಿನಲ್ಲಿ ಸಾಗಬೇಕಾಗಿದೆ. ಕನಿಷ್ಠ ಚರಂಡಿ ಸ್ವಚ್ಛಗೊಳಿಸಿ, ನೀರು ಹೋಗುವಷ್ಟು ಕ್ರಮಕೈಗೊಳ್ಳುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ.

ನಗರದ ಶಾಸ್ತ್ರಿ ವೃತ್ತದಿಂದ, ಬಸವೇಶ್ವರ ವೃತ್ತದವರೆಗೆ ದೊಡ್ಡ ರಸ್ತೆ ನಿರ್ಮಿಸಿ, ಮಧ್ಯದಲ್ಲಿ ವಿಭಜಕವನ್ನು ನಿರ್ಮಿಸಲಾಗಿದೆ. ಇದರಿಂದ ಎರಡು ಭಾಗದಲ್ಲಿ ಸರಾಗವಾಗಿ ವಾಹನಗಳು ಸಂಚರಿಸಲು ಅನುಕೂಲವಾಗಿದೆ. ಅದರೆ ಮಿಲತ್ ನಗರ ಭಾಗದ ಖುಲ್ಲಾ ನಿವೇಶನಗಳಲ್ಲಿ ಈ ಹಿಂದೆ ಚರಂಡಿನಿ ರ್ಮಿಸಲಾಗಿದೆ. ಆದರೆ, ನಿರ್ಮಿಸಿದ ಚರಂಡಿ ಆಗಾಗೇ ಸ್ವಚ್ಛಗೊಳಿಸದೆ ಇರುವುದರಿಂದ ಚರಂಡಿ ಸಂಪೂರ್ಣ ಪ್ಲಾಸ್ಟಿಕ್, ಕಲ್ಲು, ಕಸದಿಂದ ತುಂಬಿಹೋಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಭಾಗದಲ್ಲಿ ಖಾಲಿ ನಿವೇಶನಗಳು ಇರುವುದರಿಂದ ಇಲ್ಲಿ ಮಳೆ ಬಂದಾಗ, ಸುತ್ತಲಿನ ಮನೆ ನೀರು ಸೇರಿ, ಚರಂಡಿಯಲ್ಲಿ ಸಾಗದೆ ರಸ್ತೆಗೆ ಬಂದು ನಿಲ್ಲುತ್ತಿದೆ. ಇಲ್ಲಿರುವ ಖಾಲಿ ನಿವೇಶನದ ಗಿಡಕಂಟಿಗಳ ಮಧ್ಯೆ ಸ್ಥಳೀಯರು ಶೌಚಾಲಯಕ್ಕೆ ಹೋಗುವುದರಿಂದ, ಮಳೆ ಬಂದಾಗ ಕೊಳಚೆ ರಸ್ತೆಯಲ್ಲಿಅವೃತ್ತವಾಗುತ್ತದೆ. ಈ ರಸ್ತೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ದ್ವಿಚಕ್ರವಾಹನ ಸವಾರರು ಕೊಳಚೆಗೆ ಇಳಿಯದೆ ರಸ್ತೆ ನಿಯಮ ಉಲ್ಲಂಘಿಸಿ, ಬಲಕ್ಕೆಹೊರಳಿ ಹೋಗುವುದು ಅನಿವಾರ್ಯವಾಗಿದೆ.

ಇಂತಹ ಸಂದರ್ಭದಲ್ಲಿ ಬಸವೇಶ್ವರ ವೃತ್ತದಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆಯುವ ಸಂಭವ ಹೆಚ್ಚಾಗಿದೆ. ಹೀಗಾಗಿ ಕೂಡಲೇ ರಸ್ತೆಯಲ್ಲಿನಿಂತಿರುವ ನೀರನ್ನು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕೆಂದು ವಾಹನ ಸವಾರರು ಹೇಳುತ್ತಾರೆ. ಮಿಲತ್ ನಗರ ಕೊಳಚೆ ನಿಲ್ಲುವ ರಸ್ತೆಯ ಬಲಭಾಗದಲ್ಲಿ ಆಧಿಶೇಷ ದೇವಸ್ಥಾನ, ಹನುಮಾನ ಮಂದಿರ, ಮ್ಯಾಟ್ರಿಕ್ ಪೂರ್ವ ವಸತಿ ನಿಲಯ,ಅನತಿ ದೂರದಲ್ಲಿ ಸಿದ್ದರಾಮೇಶ್ವರ ಪ್ರಾಥಮಿಕ ಶಾಲೆ, ಸುತ್ತಲೂ ಮನೆಗಳಿದ್ದು, ಒಂದು ಬಾರಿ ಮಳೆಬಂದು ಹೋದರು ಕನಿಷ್ಠ 10 ರಿಂದ 15 ದಿನ ಜನಯಾತನೆ ಪಡಬೇಕಾಗಿದೆ. ಈ ಬಗ್ಗೆ ಸ್ಥಳೀಯರು ಹಲವಾರು ಬಾರಿ ನಗರಸಭೆ ಗಮನಕ್ಕೆ ತಂದಿದ್ದರು, ಈ ಕುರಿತು ಶಾಸಕರು ನಗರಸಭೆ ಅಧಿಕಾರಿಗಳಿಗೆ ಆದೇಶ ನೀಡಿದರೂ ಕ್ಯಾರೆ ಎನ್ನದೆ ನಿರ್ಲಕ್ಷ್ಯ ವಹಿಸಿದ್ದಾರೆ.

25 ಕ್ಕೂ ಹೆಚ್ಚು ಡೆಂಘೀ ಪ್ರಕರಣ ದಾಖಲು

ನಗರದಲ್ಲಿ ಕಳೆದ ಮೂರು ವಾರಗಳಿಂದ ಡೆಂಘೀ ಪ್ರಕರಣ ಉಲ್ಬಣಿಸಿದ್ದು, 25 ಕ್ಕೂ ಹೆಚ್ಚು ಡೆಂಘೀ ಪ್ರಕರಣ ದಾಖಲಾಗಿದ್ದು, ಈ ಭಾಗಕ್ಕೆ ಡೆಂಘೀ ಹರಡಲು ನಗರಸಭೆ ತನ್ನ ಕೈಲಾದ ಸಹಕಾರ ನೀಡುವಂತಿದೆ ಇಲ್ಲಿಯ ಸ್ಥಿತಿ. ನಗರದ ರಾಮಾ ಮೊಹಲ್ಲಾ, ಶರಣ ನಗರ, ಮಾರುಕಟ್ಟೆ, ಮಿಲತ್ ನಗರ ಪ್ರದೇಶದಲ್ಲಿ ನಗರಸಭೆ ಕಚೇರಿ ಸುತ್ತಲಿನ ಬಡಾವಣೆಗಳಲ್ಲಿ ಸಣ್ಣ ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವಯಸ್ಸಿನವರಲ್ಲಿ ಡೆಂಘೀ ಕಾಣಿಸಿಕೊಂಡಿದ್ದು, ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. 

ಈಗಾಗಲೇ ಡೆಂಘೀ ಪೀಡಿತರು ಸರ್ಕಾರಿ ಆಸ್ಪತ್ರೆಯತ್ತ ಮುಖ ಮಾಡದೆ ಖಾಸಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರೂಹೊನಗುಂಟಾ ರಸ್ತೆಯ ಡಾ. ವಿನೋದ ಕೌಲಗಿ ಆಸ್ಪತ್ರೆಯಲ್ಲಿ 15 ಕ್ಕೂ ಹೆಚ್ಚು ರೋಗಿಗಳುದಾಖಲಾಗಿದ್ದಾರೆ. ಅಲ್ಲದೆ, ನಗರದ ವಿವಿಧ ಖಾಸಗಿ ಆಸ್ಪತ್ರೆ, ಕಲಬುರಗಿ, ಸೊಲ್ಲಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಈ ಸಂಖ್ಯೆ ಮಾತ್ರ ಪ್ರತಿ ದಿನ ಹೆಚ್ಚುತ್ತಿದೆ. 

Follow Us:
Download App:
  • android
  • ios