ಕಲಬುರಗಿ[ಅ.30]: ಐವರು ವಿದ್ಯಾರ್ಥಿಗಳು ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಜಿಲ್ಲೆ ಸೇಡಂ ತಾಲೂಕಿನ ಕೊಂತಪಲ್ಲಿಯಿಂದ ಐವರು ವಿದ್ಯಾರ್ಥಿಗಳು ಕಾಣೆಯಾಗಿದ್ದರು. ಮನೆಯಿಂದ ನಾಪತ್ತೆಯಾಗಿದ್ದ ಈ ಐವರು ಮಕ್ಕಳು ಮುಂಬೈನಲ್ಲಿ ಪತ್ತೆಯಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಇವರೆಲ್ಲರೂ ಮನೆಯವರಿಗೆ ಹಾಸ್ಟೆಲ್ ಗೆ ಹೋಗೋದಾಗಿ ಸುಳ್ಳು ಹೇಳಿ ನಾಪತ್ತೆಯಾಗಿದ್ದರು. ಒಂದೇ ಏರಿಯಾದ ಐವರು ಮಾತಾಡಿಕೊಂಡು ಮುಂಬೈಗೆ ತೆರಳಿದ್ದರು. ಈ ಐವರು ಮಕ್ಕಳು ಮುಂಬೈನ ಹೋಟೆಲ್ ನಲ್ಲಿ ಕೆಲಸ ಕೇಳಲು ಹೋದಾಗ ವಿಷಯ ಬೆಳಕಿಗೆ ಬಂದಿದೆ. ಐವರಿಗೂ ಶಾಲೆ ಕಲಿಯಲು ಇಷ್ಟ ಇಲ್ಲದ್ದಕ್ಕೆ ಮನೆ ಬಿಟ್ಟು ಹೋಗಿದ್ದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ. ಈ ಸಂಬಂಧ ಮುಧೋಳ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.