ಕಲಬುರಗಿ[ಅ.30]: ಶಾಲಾ ಪಠ್ಯದಿಂದ ಟಿಪ್ಪು ವಿಚಾರವನ್ನು ತೆಗೆದುಹಾಕುವ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿರ್ಧಾರವೇ ಅಂತಿಮ. ಈ ವಿಚಾರವಾಗಿ ಶಾಸಕ ಅಪ್ಪಚ್ಚು ರಂಜನ್‌ ಬರೆದಿರುವ ಪತ್ರವನ್ನು ಪಠ್ಯ ರಚನಾ ಸಮಿತಿಗೆ ಕಳುಹಿಸಿ ಕೊಡಲಾಗಿದೆ. ಅಲ್ಲಿಂದ ವರದಿ ಬಂದನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಪ್ರಾಥಮಿ ಕಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಅವರು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪಠ್ಯದಿಂದ ಟಿಪ್ಪು ಇತಿಹಾಸವನ್ನು ತೆಗೆದು ಹಾಕುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ ಹೇಳಿಕೆ ವಿಚಾರವಾಗಿ ಕಲಬುರಗಿಯಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳೇ ನಮ್ಮ ಕ್ಯಾಬಿನೆಟ್‌ ಮುಖ್ಯಸ್ಥರು. ಹೀಗಾಗಿ ಯಾವುದೇ ವಿಚಾರದಲ್ಲಿಅವರ ನಿರ್ಣಯವೇ ಅಂತಿಮ. ಟಿಪ್ಪು ಪಠ್ಯ ತೆಗೆದುಹಾಕುವ ಕೊಡಗು ಜಿಲ್ಲೆ ಶಾಸಕ ಅಪ್ಪಚ್ಚು ರಂಜನ್ ವಿಸ್ತೃತವಾಗಿ ಪತ್ರ ಬರೆದಿದ್ದಾರೆ. ಕೊಡಗಿನ ಜನತೆ ಮೇಲೆ ಟಿಪ್ಪು ಎಸಗಿದ ಕ್ರೌರ್ಯದ ಕುರಿತು ಪತ್ರದಲ್ಲಿ ವಿಸ್ತಾರವಾಗಿ ಉಲ್ಲೇಖಿಸಿದ್ದಾರೆ. ಹೀಗಾಗಿ ಪಠ್ಯ ರಚನಾ ಸಮಿತಿ ಈ ವಿಚಾರವಾಗಿ ಚರ್ಚೆ ನಡೆಸುವ ವೇಳೆ ಅಪ್ಪಚ್ಚು ರಂಜನ್ ಅವರನ್ನೂಕರೆಸುವಂತೆ ಸೂಚಿಸಿದ್ದೇನೆ. ಸಮಿತಿಯು ವರದಿ ಕೊಟ್ಟ ಬಳಿಕ ಟಿಪ್ಪು ಪಠ್ಯ ಇರಬೇಕೋ, ಬೇಡವೋ ಎಂಬ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದರು.

ಪಠ್ಯದಿಂದ ಟಿಪ್ಪು ತೆಗೆಯಲು ನ.7ಕ್ಕೆ ಸಭೆ

ಟಿಪ್ಪು ಸುಲ್ತಾನ್ ಕುರಿತ ಪಠ್ಯಗಳನ್ನುರಾಜ್ಯದ ಶಾಲಾ ಪಠ್ಯ ಪುಸ್ತಕಗಳಿಂದ ಕೈಬಿಡುವ ವಿಚಾರ ಸಂಬಂಧ ಚರ್ಚಿಸಲು ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯು ನ. 7 ರಂದು ಸಭೆ ನಡೆಸಲು ನಿರ್ಧರಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ನಿರ್ದೇಶನದಂತೆ ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯು ನ.7 ರಂದುವಿವಿಧ ತರಗತಿಗಳ ಇತಿಹಾಸ ಪಠ್ಯಪುಸ್ತಕಗಳ ರಚನೆಯಲ್ಲಿ ತೊಡಗಿದ್ದ ತಜ್ಞರು ಹಾಗೂ ಪಠ್ಯಪುಸ್ತಕಗಳಲ್ಲಿನ ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ವಿಷಯಗಳನ್ನು ತೆಗೆದು ಹಾಕುವಂತೆಸರ್ಕಾರಕ್ಕೆ ಮನವಿ ಮಾಡಿರುವ ಶಾಸಕ ಅಪ್ಪಚ್ಚು ರಂಜನ್ ಅವರೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಲು ತೀರ್ಮಾನಿಸಿದೆ. ನ.7 ರ ಮಧ್ಯಾಹ್ನ 12ಗಂಟೆ ವೇಳೆಗೆವಿಧಾನಸೌಧದಲ್ಲಿ ಈ ಸಭೆ ನಡೆಯಲಿದೆ. ತಜ್ಞರುಮತ್ತು  ಶಾಸಕರ ಅಭಿಪ್ರಾಯ ಆಲಿಸಿದ ನಂತರನಾವು ನಮ್ಮ ವರದಿಯನ್ನು ಇಲಾಖೆಯ ಸಚಿವರಿಗೆ ಸಲ್ಲಿಸುತ್ತೇವೆ. ಅದನ್ನು ಪರಿಶೀಲಿಸಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.