ಕಲ್ಯಾಣ ಕರ್ನಾಟಕ ಅಭಿವೃದ್ಧಿಯೇ ನಮ್ಮ ಗುರಿ  ಹೊಸ ಕಲ್ಯಾಣ ಸೌಧ ನಿರ್ಮಾಣ ಕುರಿತು ಚರ್ಚೆ ಕಲ್ಯಾಣ ಕರ್ನಾಟಕ ಭಾಗದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ

ಕಲಬುರಗಿ(ಮಾ.20): ರಾಜ್ಯ ಬಿಜೆಪಿ ಸರ್ಕಾರವು ನವ ಕರ್ನಾಟಕ ಅಭಿವೃದ್ಧಿಗೆ 3 ಸಾವಿರ ಕೋಟಿ ಅನುದಾನ ನೀಡಿ, ನವ ಕಲ್ಯಾಣ ಕರ್ನಾಟಕ ಪಣ ತೊಟ್ಟಿದೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನುಡಿದಂತೆ ನಡೆದಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌ ಅವರು ಹೇಳಿದ್ದಾರೆ.

ಶನಿವಾರ ಇಲ್ಲಿನ ಕೆಕೆಆರ್‌ಡಿಬಿ ಕಚೇರಿಯಲ್ಲಿ ಸುದ್ದಿಗೋಪ್ಠಿಯಲ್ಲಿ ಮಾತನಾಡಿದ ಅವರು, ಜಿ.ಪಂ, ತಾಪಂ ಸೇರಿ ಸಕಾರದ ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ಇರಬೇಕು ಎಂಬ ನಿಟ್ಟಿನಲ್ಲಿ ಕಲ್ಯಾಣ ಸೌಧ ನಿರ್ಮಾಣದ ಚಿಂತನೆ ನಡೆದಿದ್ದು, ಅದಕ್ಕಾಗಿ 10 ರಿಂದ 15 ಎಕರೆ ಭೂಮಿಯ ಅವಶ್ಯಕತೆ ಇದೆ. ಸ್ಥಳ ಸಿಕ್ಕ ಕೂಡಲೇ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬೆಳಗಾವಿಯ ಸುವರ್ಣ ಸೌಧದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಹ ಹೊಸ ಕಲ್ಯಾಣ ಸೌಧ ನಿರ್ಮಾಣ ಮಾಡುವ ಬಗ್ಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪ್ರಥಮ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ಪ್ರಾದೇಶಿಕ ಅಸಮಾನತೆ ಕಲ್ಯಾಣದ ಸೀಮೆ ಬಿಟ್ಟು ಹೋಗಿಲ್ಲ

ಈ ಭಾಗಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ 1500 ಕೋಟಿ ಕ್ರಿಯಾ ಯೋಜನೆ ಮೂಲಕ ಬಳಕೆ ಮಾಡುವ ಉದ್ದೇಶದಿಂದ ಏಳು ಜಿಲ್ಲೆಯ ಶಾಸಕರಿಗೆ ಪತ್ರ ಬರೆಯಲಾಗಿದೆ. ಜಿಲ್ಲಾವಾರು ಮೆಗಾ ಪ್ರಾಜೆಕ್ಟ್ ಆರಂಭಕ್ಕಾಗಿ ಹಾಗೂ ಮೈಕ್ರೋ ಪ್ರಾಜೆಕ್ಟ್ ಗೆ ಕ್ರಿಯಾ ಯೋಜನೆ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

1500 ಕೋಟಿ ಅನುದಾನ ಈ ವರ್ಷವೇ ಸಂಪೂರ್ಣ ಬಳಸಿಕೊಳ್ಳಲಾಗುವುದು. ಕೆಕೆಆರ್‌ಡಿಬಿ ಅಮೃತ ಮಹೋತ್ಸವ ಹಿನ್ನೆಲೆ ಹೆಚ್ಚಿನ ಅನುದಾನ ನೀಡಲಾಗಿದೆ. ಕ್ರೀಡಾ ಮತ್ತು ಸಂಸ್ಕೃತಿ ಸಂಕಿರಣ, ಕೃಷ್ಣ ನದಿಯ ನೀರನ್ನು ಕಾರಂಜಿ ಜಲಾಶಯ ಹಾಗೂ ಕಾಗಿಣ ನೀರು ತುಂಬಿಸುವ ಕೆಲಸ ನಡೆಯಲಿದೆ. ಅಲ್ಲದೇ ಶಿಕ್ಷಣಕ್ಕೆ ಅಧಿಕ ಅನುದಾನ ನೀಡುವ ನಿಟ್ಟಿನಲ್ಲಿ ಗಮನ ಹರಿಸಿ ವಿಶ್ವವಿದ್ಯಾಲಯ, ಉನ್ನತ ಶಿಕ್ಷಣ, ಸ್ಮಾರ್ಟ್‌ ಕ್ಲಾಸ್‌ಗಳ ಸ್ಥಾಪನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಮತ್ತು ಕಲಬುರಗಿಗೆ ಎರಡನೇ ರಿಂಗ್‌ ರೋಡ್‌ ಗಾಗಿ ಸ್ಥಳ ಸಿಕ್ಕ ಕೂಡಲೇ ಸರಕಾರದ ಜೊತೆ ಮಾತನಾಡಲಾಗುವುದು ಎಂದರು.

Karnataka Budget 2022:ಕಲ್ಯಾಣ ಕರ್ನಾಟಕಕ್ಕೆ ಹಲವು ಯೋಜನೆಗಳು, ಅಂಜನಾದ್ರಿ ಬೆಟ್ಟಕ್ಕೆ ಬಂಪರ್

ಈ ಭಾಗದ ಸವಾಂರ್‍ಗೀಣ ಅಭಿವೃದ್ಧಿ ಹಾಗೂ ಹೊಸ ಯೋಜನೆಗಳ ಪ್ರಗತಿಗಾಗಿ ಕಲ್ಯಾಣ ಕರ್ನಾಟಕ ಬೋರ್ಡ್‌ ನಲ್ಲಿ ಪ್ರತ್ಯೇಕ ಇಂಜಿನಿಯರ್‌ ವಿಂಗ್‌ ನೀಡಲು ಈಗಾಗಲೇ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪ್ರವಾಸಿತಾಣಗಳ ಅಭಿವೃದ್ಧಿ:
ಕಲ್ಯಾಣ ಕರ್ನಾಟಕ ಭಾಗದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಬದ್ಧವಾಗಿದೆ. ಅಂಜನಾದ್ರಿ ಬೆಟ್ಟಪ್ರವಾಸಿ ತಾಣ ಮಾಡುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್‌ನಲ್ಲಿ .100 ಕೋಟಿ ಅನುದಾನ ಮೀಸಲಿಡಲಾಗಿದೆ. ಅದರಂತೆ ಕಲಬುರಗಿ ಕೋಟೆ, ಸನ್ನತಿ, ಗಾಣಗಾಪುರ, ಬೀದರ್‌ ನರಸಿಂಹ ಝರ ಸೇರಿದಂತೆ ಈ ಭಾಗದಲ್ಲಿ ಪ್ರವಾಸೋದ್ಯಮ ಕಾರಿಡಾರ್‌ ಸ್ಥಾಪನೆಗೆ ಮನವಿ ಸಲ್ಲಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಭಾಗ ಸ್ವಾತಂತ್ರಗೊಂಡು 75 ವಷÜರ್‍ ಆಗುವುದಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಅಮೃತ ಮಹೋತ್ಸವ ಹಿನ್ನೆಲೆ ಹಂಪಿ ಉತ್ಸವ, ಕಿತ್ತೂರು ಉತ್ಸವ, ಕಾರ್ಕಳ ಉತ್ಸವದಂತೆ ಈ ಬಾರಿಯ ಕಲ್ಯಾಣ ಕರ್ನಾಟಕ ಉತ್ಸವ ಮಾಡುವ ಬಗ್ಗೆ ಸಭೆಯಲ್ಲಿ ಚಿಂತಿಸಲಾಗಿದೆ ಎಂದರು.

ಸದ್ಯ ಬೀದರ್‌- ಬೆಂಗಳೂರು ರೈಲು ಸೇಡಂ ಮೂಲಕ ಸಂಚಾರ ಮಾಡುತ್ತಿದೆ. ಆದರೆ, ಅದು ಕಮಲಾಪುರ್‌, ಮಹಾಗಾಂವ್‌ ಮೂಲಕ ರೈಲು ಸಂಚಾರ ಮಾಡಲು ಹೊಸ ರೈಲು ನೀಡಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕಲಬುರಗಿಯ ಎಲ್ಲಾ ಶಾಸಕರು ಕಲಬುರಗಿಯ ಸಂಸದ ಡಾ. ಉಮೇಶ್‌ ಜಾಧವ ಅವರ ನೇತೃತ್ವದಲ್ಲಿ ದೆಹಲಿಗೆ ತೆರಳಿ ಮನವಿ ಮಾಡಲಾಗುವುದು. ಇದರಿಂದ ಕಲಬುರಗಿ ಗ್ರಾಮೀಣ ಹಾಗೂ ದಕ್ಷಿಣದ ಜನತೆಗೆ ಅನುಕೂಲವಾಗಲಿದೆ ಎಂದು ಗ್ರಾಮೀಣ ಶಾಸಕ ಬಸವರಾಜ್‌ ಮತ್ತಿಮೂಡು ಅವರು ಹೇಳಿದರು.