ಚಿಂಚೋಳಿ: ತುಂಬಿದ ಮುಲ್ಲಾಮಾರಿ ಡ್ಯಾಂ, 697 ಕ್ಯುಸೆಕ್‌ ನೀರು

ಮುಲ್ಲಾಮಾರಿ ನದಿಗೆ 697 ಕ್ಯುಸೆಕ್‌ ನೀರು| ಮುಲ್ಲಾಮಾರಿ ಜಲಾಶಯದಿಂದ ಮುಲ್ಲಾಮಾರಿ ನದಿಗೆ ನೀರು  ಬಿಡಲಾಗಿದೆ| ಜಲಾಶಯಕ್ಕೆ 375 ಕ್ಯೂಸೆಕ್‌ ಒಳ ಹರಿವು| ಜಲಾಶಯದ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ 697 ಕ್ಯೂಸೆಕ್‌ ನೀರು ಹೊರಕ್ಕೆ ಬಿಡಲಾಗಿದೆ| ಪ್ರಸಕ್ತ ಸಾಲಿನಲ್ಲಿ ನಾಲ್ಕು ಸಲ ಭರ್ತಿಯಾದ ಡ್ಯಾಂ| 

697 Cusec Water Released From Mullamari Dam in Chincholi

ಚಿಂಚೋಳಿ(ಅ.27): ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಜಲಾಶಯದಲ್ಲಿ ಒಳ ಹರಿವು ಹೆಚ್ಚುತ್ತಿರುವುದರಿಂದ ಮುಲ್ಲಾಮಾರಿ ನದಿಗೆ ಕೋಡಿಗಳ ಮೂಲಕ 697 ಕ್ಯುಸೆಕ್‌ ನೀರು ಹರಿದು ಬಿಡಲಾಗಿದೆ ಎಂದು ಯೋಜನೆ ಎಇ ಹಣಮಂತರಾವ ಅವರು ತಿಳಿಸಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೆಳದಂಡೆ ಮುಲ್ಲಾಮಾರಿ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಅಗಾಗ ಮಳೆ ಸುರಿಯುತ್ತಿರುವುದರಿಂದ ಜಲಾಶಯದಲ್ಲಿ 375 ಕ್ಯೂಸೆಕ್‌ ಒಳ ಹರಿವು ಹೆಚ್ಚುತ್ತಿದೆ. ಪ್ರತಿನಿತ್ಯ ಜಲಾಶಯಕ್ಕೆ ಮಳೆ ನೀರು ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಜಲಾಶಯದ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಬುಧವಾರ ಸಂಜೆ 697 ಕ್ಯೂಸೆಕ್‌ ನೀರು ಹೊರಕ್ಕೆ ಬಿಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜಲಾಶಯವು ನಾಲ್ಕು ಸಲ ಭರ್ತಿಯಾಗಿದೆ. ಹಾಗಾಗಿ ಗೇಟ್‌ ಮೂಲಕ ನೀರು ಬಿಡಲಾಗುತ್ತಿದೆ. ಮುಲ್ಲಾಮಾರಿ ಜಲಾಶಯದ ಗರಿಷ್ಟ ನೀರಿನ ಮಟ್ಟ 491 ಮೀಟರ್‌ ಇದ್ದು ಕನಿಷ್ಟ ನೀರಿನ ಮಟ್ಟ 490.90 ಮೀಟರ್‌ ಇದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಲಾಶಯದಿಂದ ನದಿಗೆ ಗೇಟಿನ ಮೂಲಕ ನೀರು ಬಿಡುದ ಮೊದಲು ನದಿ ಪಾತ್ರದ ಜನ ಜನಜಾನುವಾರಗಳು ಎಚ್ಚರಿಕೆದಿಂದ ಇರಲು ಮತ್ತು ನದಿಯನ್ನು ದಾಟದಂತೆ ಸೈರನ್‌ ಮೂಲಕ ಭಾರಿ ಶಬ್ದ ಮಾಡಿ ಜನರಿಗೆ ಎಚ್ಚರಿಕೆ ನೀಡಿದ ನಂತರ ನೀರು ಹರಿದು ಬಿಡಲಾಗುತ್ತಿದೆ ಎಂದು ಯೋಜನೆಯ ಎಇ ತಿಳಿಸಿದ್ದಾರೆ.

ಕೆಳದಂಡೆ ಮುಲ್ಲಾಮಾರಿ ಜಲಾಶಯಕ್ಕೆ ವಿದ್ಯುತ್‌ ಸಂಪರ್ಕ ಬೇಕಾದ ಸಂದರ್ಭದಲ್ಲಿ ಸಮರ್ಪಕ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಕೆಲವರು ತಪ್ಪು ಮಾಹಿತಿಯಿಂದ ಜೆಸ್ಕಾಂ ಕಿರುಕುಳ ನೀಡುತ್ತಿದೆ ಎಂದು ದೂರಿದ್ದು ಸತ್ಯಕ್ಕೆ ದೂರವಾಗಿದೆ ಎಂದು ಜೆಸ್ಕಾಂ ಎಇಇ ಪರಮೇಶ್ವರ ಬೀರಾದಾರ ಅವರು ಸ್ಚಷ್ಟನೆ ನೀಡಿದ್ದಾರೆ.

ಜಲಾಶಯದಿಂದ ನೀರು ಬಿಡುವ ಸಂದರ್ಭದಲ್ಲಿ ಯೋಜನೆ ಅಧಿಕಾರಿಗಳು ನಮಗೆ ತಿಳಿಸಿದ ತಕ್ಷಣ ತುರ್ತು ಪರಿಸ್ಥಿತಿಯಲ್ಲಿ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಆದರೆ ಯೋಜನೆಯಲ್ಲಿ ಗುತ್ತಿಗೆದಾರರು ಕೈಕೊಂಡಿರುವ ವಿದ್ಯುತ್‌ ಕಾಮಗಾರಿಗಳು ಪೂರ್ಣಗೊಳಿಸದೇ ಇರುವುದರಿಂದ ವಿದ್ಯುತ್‌ ಸಂಪರ್ಕ ಆಗಿಲ್ಲ. ಅದಕ್ಕೆ ಜೆಸ್ಕಾಂ ಹೊಣೆ ಅಲ್ಲ.ಜೆಸ್ಕಾಂ ಸಿಬ್ಬಂದಿಗಳು ಎಲ್ಲ ಸಹಕಾರ ನೀಡುತ್ತಾರೆ. ಯೋಜನೆಯಿಂದ ಜೆಸ್ಕಾಂಗೆ 3 ಲಕ್ಷ ರುಪಾಯಿ ವಿದ್ಯುತ್‌ ಬಿಲ್ಲು ಬಾಕಿ ಇದೆ ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios