ಬೆಂಗಳೂರು(ಜ. 28)   ಸರ್ಕಾರಿ ಹುದ್ದೆ  ಹಲವರ ಕನಸು. ಇದೀಗ  ಕರ್ನಾಟಕ ಸರ್ಕಾರ ಒಂದು ಆದೇಶ ಜಾರಿಮಾಡಿದ್ದು ಸರ್ಕಾರಿ ಹುದ್ದೆ ಸೇರುವವರಿಗೆ ಸಣ್ಣ ಮಟ್ಟದ ಶಾಕ್ ನೀಡಿದೆ.

ಯಾವುದೇ ಸರ್ಕಾರಿ ನೌಕರ ಹೊಸದಾಗಿ ಕೆಲಸಕ್ಕೆ ಸೇರಿದಾಗ, ಮೂರು ತಿಂಗಳ ಒಳಗಾಗಿ ತನ್ನ ಆಸ್ತಿ, ಕುಟುಂಬದವರ ಆಸ್ತಿ, ಬೇರೆ ಸದಸ್ಯರ ಹೆಸರಿನಲ್ಲಿರುವ ಸ್ಥಿರ ಮತ್ತು ಚರಾಸ್ಥಿ ವಿವರ ನೀಡಬೇಕು ಎಂದು ಆದೇಶ ಹೊರಡಿಸಲಾಗಿದೆ.

ರಾಜ್ಯದಲ್ಲಿ ಇಪ್ಪತ್ತು ಸಾವಿರ ಶಿಕ್ಷಕರ ನೇಮಕಕ್ಕೆ ತೀರ್ಮಾನ, ಮಾನದಂಡವೇನು? 

ಜೊತೆಗೆ ಡಿಸೆಂಬರ್ ಅಂತ್ಯಕ್ಕೆ (31) ಕ್ಕೆ ಆಸ್ತಿ ವಿವಿರ ನೀಡಬೇಕು.  ಈ ಮೊದಲು  ಈ ಮೊದಲು ಮಾರ್ಚ್ 31ಕ್ಕೆ ಸಲ್ಲಿಸಲಾಗುತ್ತಿತ್ತು.  ಹೊಸದಾಗಿ ಸರ್ಕಾರಿ ಹುದ್ದೆಗೆ ನೇಮಕ ಆಗುವವರು ಎಲ್ಲ ಆಸ್ತಿ ವಿವರಗಳನ್ನು ಸಲ್ಲಿಕೆ ಮಾಡಬೇಕಾದದ್ದು ಇನ್ನು ಮುಂದೆ ಕಡ್ಡಾಯವಾಗಲಿದೆ.