ನ.3ರಂದು NTSE ಪರೀಕ್ಷೆ: ಅರ್ಜಿ ಆಹ್ವಾನ
ನ.3ರಂದು ಎನ್‌ಟಿಎಸ್‌ಇ ಪರೀಕ್ಷೆ: ಅರ್ಜಿ ಆಹ್ವಾನ| ರಾಷ್ಟ್ರೀಯ ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ನಡೆಸುವ ಎನ್‌ಎಂಎಂಎಸ್ ಪರೀಕ್ಷೆ
ರಾಷ್ಟ್ರೀಯ ಪ್ರತಿಭಾ ಸಂಶೋಧನಾ ಪರೀಕ್ಷೆ (ಎನ್‌ಟಿಎಸ್‌ಇ) ಹಾಗೂ ರಾಷ್ಟ್ರೀಯ ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ನಡೆಸುವ ಎನ್‌ಎಂಎಂಎಸ್ ಪರೀಕ್ಷೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಭಾನುವಾರ ಸುತ್ತೋಲೆ ಹೊರಡಿಸಿದೆ.
ಎನ್‌ಎಂಎಂಎಸ್ ಹಾಗೂ ಎನ್‌ಟಿಎಸ್‌ಇ ಪರೀಕ್ಷೆಯು ನ.3ರಂದು ನಡೆಯಲಿದೆ. ವಿದ್ಯಾರ್ಥಿಗಳಿಗೆ ಅಂದು ಬೆಳಗ್ಗೆ ಮಾನಸಿಕ ಸಾಮರ್ಥ್ಯ ಪರೀಕ್ಷೆ ಹಾಗೂ ಮಧ್ಯಾಹ್ನ ವ್ಯಾಸಂಗ ಪ್ರವೃತ್ತಿ ಪರೀಕ್ಷೆ ನಡೆಯಲಿದೆ
ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ನಡೆಯುವ ವಿಧಾನ ಶುಲ್ಕ ಪಾವತಿ ಇತ್ಯಾದಿ ಎಲ್ಲ ಮಾಹಿತಿಯು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್‌ಸೈಟ್ https://kseeb.kar.nic.in ನಲ್ಲಿ ಲಭ್ಯವಿದೆ ಎಂದು ಮಂಡಳಿ ಪ್ರಕಟಣೆ ತಿಳಿಸಿದೆ.