ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ 518 ನಾನ್-ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಡಿಸೆಂಬರ್ 31, 2024 ರಿಂದ ಜನವರಿ 21, 2025 ರವರೆಗೆ ಅರ್ಜಿ ಸಲ್ಲಿಸಬಹುದು.

Non-Executive Job: ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ ನಲ್ಲಿ (National Aluminium Company Limited) ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಈ ಸಂಬಂಧ ಡಿಸೆಂಬರ್ 20ರಂದು ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಧಿಕೃತ ವೆಬ್‌ಸೈಟ್‌ ಮೂಲಕವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 31, 2024ರಿಂದ ಜನವರಿ 21, 2025ರವರೆಗೆ ಅರ್ಜಿ ಸಲ್ಲಿಕೆ ಮಾಡಬಹುದು. S&P ಕಾಂಪ್ಲೆಕ್ಸ್, ಅಂಗುಲ್, ಮತ್ತು M&R ಕಾಂಪ್ಲೆಕ್ಸ್, ದಮಂಜೋಡಿ ಅಡಿಯಲ್ಲಿ ನಾನ್-ಎಕ್ಸಿಕ್ಯುಟಿವ್ ಹುದ್ದೆಗಳ ನೇಮಕಾತಿಗಾಗಿ ಡಿಸೆಂಬರ್ 20, 2024 ರಂದು ಜಾಹೀರಾತು ಪ್ರಕಟಿಸಲಾಗಿದೆ/ ಒಟ್ಟು 518 ಖಾಲಿ ಹುದ್ದೆಗಳಿವೆ. ಈ ಕೆಳಗಿನ ಪಿಡಿಎಫ್ ಫೈಲ್ ಮೂಲಕ ಹುದ್ದೆಗಳ ಮಾಹಿತಿಯನ್ನು ನೋಡಬಹುದು.

Add Asianetnews Kannada as a Preferred SourcegooglePreferred

ದೇಶ

ಭಾರತ
ಸಂಸ್ಥೆNational Aluminium Company Limited (NALCO)
ಹುದ್ದೆ ಹೆಸರುನಾನ್ ಎಕ್ಸಿಕ್ಯೂಟಿವ್ (SUPT, Dresser, Laboratory Technician, etc.)
ಒಟ್ಟು ಹುದ್ದೆಗಳು518
ವಯೋಮಿತಿ18 ರಿಂದ 27 (ವಿಶೇಷ ಪ್ರಕರಣಗಳಲ್ಲಿ 37 ವರ್ಷ)
ವಿದ್ಯಾರ್ಹತೆಐಟಿಐ, ಬಿಎಸ್‌ಸಿ, ಡಿಪ್ಲೋಮಾ/ ತತ್ಸಮಾನ
ಅರ್ಜಿ ಶುಲ್ಕ100 ರೂ (ಎಸ್‌ಸಿ, ಎಸ್‌ಟಿ,PwBD, ಮಾಜಿ ಸೈನಿಕರಿಗೆ ವಿನಾಯ್ತಿ)
ನೋಟಿಫಿಕೇಶನ್ ದಿನಾಂಕ20 ಡಿಸೆಂಬರ್ 2024
ಅರ್ಜಿ ಸಲ್ಲಿಕೆ ಆರಂಭ31 ಡಿಸೆಂಬರ್ 2024
ಅರ್ಜಿ ಸಲ್ಲಿಕೆ ಕೊನೆ ದಿನಾಂಕ21 ಜನವರಿ 2024

NALCO ಅಡಿಯಲ್ಲಿ ನಾನ್-ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಕಾಯ್ದಿರಿಸದ, ಇತರೆ ಹಿಂದುಳಿದ ವರ್ಗ ಅಥವಾ ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ ಸೇರಿದ ಅಭ್ಯರ್ಥಿಯು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, NET ಅನ್ನು ಬಳಸಿಕೊಂಡು ₹100/- ಅರ್ಜಿ ಶುಲ್ಕವನ್ನು ಠೇವಣಿ ಮಾಡಬೇಕಾಗುತ್ತದೆ. ಜನವರಿ 21, 2025ಕ್ಕೂ ಮೊದಲು ಶುಲ್ಕ ಪಾವತಿಸಬೇಕಾಗುತ್ತದೆ

ಗಮನಿಸಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಮಾನದಂಡದ ಅಂಗವೈಕಲ್ಯ ಹೊಂದಿರುವ ವ್ಯಕ್ತಿ ಅಥವಾ ಮಾಜಿ ಸೈನಿಕರು ಮತ್ತು ಆಂತರಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದ ಪಾವತಿಯಿಂದ ವಿನಾಯಿತಿ ನೀಡಲಾಗಿದೆ

ಆಯ್ಕೆ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಅವಶ್ಯವಿದ್ದಲ್ಲಿ ಟ್ರೇಡ್ ಟೆಸ್ಟ್ ನಡೆಸಲಾಗುತ್ತದೆ. ದಾಖಲೆಗಳ ಪರಿಶೀಲನೆ

ದಾಖಲೆ ಸಲ್ಲಿಸುವ ವೆಬ್‌ಸೈಟ್: nalcoindia.com

ಇದನ್ನೂ ಓದಿ:NHPC ನಲ್ಲಿ ಭರ್ಜರಿ ಉದ್ಯೋಗ! ₹1,80,000 ವರೆಗೆ ಸಂಬಳ! ಯಾರ್ಯಾರು ಅರ್ಜಿ ಹಾಕಬಹುದು?