ಗೋವಾ(ಜ.29): 86ನೇ ನಿಮಿಷದವರೆಗೂ 2-0 ಮುನ್ನಡೆಯಲ್ಲಿದ್ದ ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ಕೊನೆಯ 4 ನಿಮಿಷಗಳಲ್ಲಿ ಹೈದ್ರಾಬಾದ್ ಎಫ್‌ಸಿಗೆ 2 ಗೋಲುಗಳನ್ನು ಬಿಟ್ಟುಕೊಡುವ ಮೂಲಕ ಸುಲಭವಾಗಿ ಗೆಲ್ಲಬಹುದಿದ್ದ ಪಂದ್ಯವನ್ನು 2-2ರಲ್ಲಿ ಡ್ರಾ ಮಾಡಿಕೊಂಡಿತು.

ಇದರೊಂದಿಗೆ 7ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಎಸ್‌ಎಲ್)ನಲ್ಲಿ ಬೆಂಗಳೂರು ಎಫ್‌ಸಿ ಸತತ 8 ಪಂದ್ಯಗಳಲ್ಲಿ ಗೆಲುವನ್ನೇ ಕಾಣದೆ ಕಂಗೆಟ್ಟಿದೆ. 14 ಪಂದ್ಯಗಳಲ್ಲಿ 15 ಅಂಕ ಗಳಿಸಿರುವ ಬಿಎಫ್‌ಸಿ ಅಂಕಪಟ್ಟಿಯಲ್ಲಿ 9ರಿಂದ 7ನೇ ಸ್ಥಾನಕ್ಕೆ ಜಿಗಿದಿದ್ದರೂ ಸೆಮಿಫೈನಲ್ ರೇಸ್‌ನಲ್ಲಿ ಹಿಂದೆ ಉಳಿದಿದೆ.

ಐಎಸ್‌ಎಲ್‌: ಬಿಎಫ್‌ಸಿಗಿಂದು ಹೈದ್ರಾಬಾದ್‌ ಸವಾಲು

ಮಾಜಿ ಐಎಸ್‌ಎಲ್‌ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡಕ್ಕೆ ಇನ್ನು 6 ಪಂದ್ಯಗಳು ಬಾಕಿ ಇದ್ದು, ಸೆಮಿಫೈನಲ್‌ಗೇರಬೇಕಿದ್ದರೆ ಸುನಿಲ್‌ ಚೆಟ್ರಿ ನೇತೃತ್ವದ ಬಿಎಫ್‌ಸಿ ತಂಡವು ಎಲ್ಲ 6 ಪಂದ್ಯಗಳಲ್ಲೂ ಗೆಲುವು ಸಾಧಿಸಬೇಕಿದೆ.