ವಾಸ್ಕೋ(ಡಿ.31): ಇಂಡಿಯನ್‌ ಪ್ರೀಮಿಯರ್‌ ಲೀಗ್‌ 7ನೇ ಆವೃತ್ತಿಯಲ್ಲಿ ಎಫ್‌ಸಿ ಗೋವಾ 4ನೇ ಜಯ ದಾಖಲಿಸಿದೆ. 

ಬುಧವಾರ ಇಲ್ಲಿನ ತಿಲಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೋವಾ, ಹೈದ್ರಾಬಾದ್‌ ಎಫ್‌ಸಿ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿತು. ಪಂದ್ಯದ ಪೂರ್ಣವಾಧಿ ಆಟದ ಕೊನೆಯ 3 ನಿಮಿಷಗಳ ಅಂತರದಲ್ಲಿ 2 ಗೋಲು ಬಾರಿಸಿದ ಗೋವಾ ಜಯದ ನಗೆ ಬೀರಿತು. 

ಚೆನ್ನೈ ವಿರುದ್ಧ ಡ್ರಾ; ಆದರೂ ಅಂಕಪಟ್ಟಿಯಲ್ಲಿ ಮೋಹನ್ ಬಗಾನ್‌ಗೆ ಅಗ್ರಸ್ಥಾನ !

ಮೊದಲಾರ್ಧದಲ್ಲಿ ಉಭಯ ತಂಡಗಳು ಯಾವುದೇ ಗೋಲುಗಳಿಸಿರಲಿಲ್ಲ. ಹೈದ್ರಾಬಾದ್‌ ಪರ ಅರಿಡಾನ್‌ (58ನೇ ನಿಮಿಷ), ಗೋವಾ ಪರ ಪಂಡಿತಾ (87ನೇ ನಿ.), ಐಗೋರ್‌ (90ನೇ ನಿಮಿಷ) ಗೋಲುಗಳಿಸಿದರು.