ವಾಸ್ಕೋ(ಡಿ.26): ಇಂಡಿಯನ್‌ ಪ್ರೀಮಿಯರ್‌ ಲೀಗ್‌ 7ನೇ ಆವೃತ್ತಿ ಆರಂಭವಾದಾಗಿನಿಂದ ಇಲ್ಲಿಯವರೆಗೂ ಜಯವನ್ನೆ ಕಾಣದ ಈಸ್ಟ್‌ ಬೆಂಗಾಲ್‌ ಎಫ್‌ಸಿ, ಶನಿವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಚೆನ್ನೈಯಿನ್‌ ಎಫ್‌ಸಿ ಎದುರು ಸೆಣಸಲು ಸಜ್ಜಾಗಿದೆ. 

ಈಸ್ಟ್ ಬೆಂಗಾಲ್‌ 6 ಪಂದ್ಯಗಳಲ್ಲಾಡಿದ್ದು, 2 ಡ್ರಾ ಹಾಗೂ 4 ಪಂದ್ಯಗಳಲ್ಲಿ ಸೋಲುಂಡಿದೆ. ಈ ಮೂಲಕ 2 ಅಂಕಗಳೊಂದಿಗೆ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ. 

ISL 7: ಜೆಮ್ಶೆಡ್‌ಪುರ ಎದುರು ಗೋವಾಗೆ ರೋಚಕ ಜಯ

ಇನ್ನು ಚೆನ್ನೈ ತಂಡ 6 ಪಂದ್ಯಗಳನ್ನಾಡಿದ್ದು, ತಲಾ 2 ಗೆಲುವು, ಸೋಲು ಹಾಗೂ ಡ್ರಾ ಸಾಧಿಸಿದ್ದು 8 ಅಂಕಗಳಿಸಿ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

ಸ್ಥಳ: ವಾಸ್ಕೋ
ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್