ಗೋವಾ(ಜ.25): 7ನೇ ಆವೃತ್ತಿಯ ಇಂಡಿಯನ್ ಸೂಪರ್‌ ಲೀಗ್‌(ಐಎಸ್‌ಎಲ್‌) ಸೆಮಿಫೈನಲ್‌ಗೆ ಸುನಿಲ್‌ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡ ಪ್ರವೇಶಿಸುವುದು ಬಹುತೇಕ ಅನುಮಾನವೆನಿಸಿದೆ.

ಭಾನುವಾರ ನಡೆದ ಒಡಿಶಾ ಎಫ್‌ಸಿ ವಿರುದ್ದದ ಪಂದ್ಯವನ್ನು ಬಿಎಫ್‌ಸಿ 1-1 ಗೋಲಿನಿಂದ ಡ್ರಾ ಮಾಡಿಕೊಳ್ಳಲಷ್ಟೇ ಶಕ್ತವಾಯಿತು. ಬಿಎಫ್‌ಸಿ ತಂಡವು ಕಳೆದ 7 ಪಂದ್ಯಗಳಲ್ಲಿ ಗೆಲುವನ್ನೇ ಕಂಡಿಲ್ಲ. 7 ಪಂದ್ಯಗಳ ಪೈಕಿ 5 ಸೋಲು ಹಾಗೂ 2 ಡ್ರಾ ಸಾಧಿಸಿದೆ.

ಕೇರಳ-ಬೆಂಗಾಲ್‌ ಐಎಸ್‌ಎಲ್‌ ಪಂದ್ಯ 1-1ರಲ್ಲಿ ಡ್ರಾ

ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಇದುವರೆಗು ಒಟ್ಟು 13 ಪಂದ್ಯಗಳನ್ನಾಡಿದ್ದು, ಕೇವಲ 3 ಜಯ ಗಳಿಸಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ

ಹಾಕಿ: ಚಿಲಿ ವಿರುದ್ಧ ಭಾರತಕ್ಕೆ 4ನೇ ಜಯ

ಸ್ಯಾಂಟಿಯಾಗೋ(ಚಿಲಿ): ಚಿಲಿ ಪ್ರವಾಸದಲ್ಲಿರುವ ಭಾರತ ಕಿರಿಯರ ಮಹಿಳಾ ಹಾಕಿ ತಂಡ ಗೆಲುವಿನ ನಾಗಲೋಟ ಮುಂದುವರಿಸಿದೆ. ಭಾರತ ತಂಡ, ಚಿಲಿ ಹಿರಿಯ ಮಹಿಳಾ ತಂಡದ ವಿರುದ್ಧ 2-0 ಗೆಲುವು ಸಾಧಿಸಿದೆ. ಭಾರತ 5ನೇ ಪಂದ್ಯಗಳಲ್ಲಿ 4ನೇ ಗೆಲುವು ದಾಖಲಿಸಿದೆ. ಭಾರತದ ಪರ ಸಂಗೀತಾ (48ನೇ ನಿ.), ಸುಷ್ಮಾ (56ನೇ ನಿ.) ಗೋಲು ಬಾರಿಸಿದರು.