ಗೋವಾ(ಡಿ.13): ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸುವ ವಿಶ್ವಾಸದಲ್ಲಿದ್ದು, ಭಾನುವಾರದ ಪಂದ್ಯದಲ್ಲಿ ಕೇರಳ ಬ್ಲಾಸ್ಟ​ರ್ಸ್ ತಂಡವನ್ನು ಎದುರಿಸಲಿದೆ. 

ಸುನಿಲ್ ಚೆಟ್ರಿ ನೇತೃತ್ವದ ಬಿಎಫ್‌ಸಿ ಆಡಿರುವ 4 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಮತ್ತೊಂದೆಡೆ ಕೇರಳ ತಂಡ ಆಡಿರುವ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದರೆ, 2ರಲ್ಲಿ ಡ್ರಾಗೆ ತೃಪ್ತಿಪಟ್ಟಿದೆ. ತಂಡ ಈ ಆವೃತ್ತಿಯಲ್ಲಿ ಮೊದಲ ಗೆಲುವು ಸಾಧಿಸಲು ಕಾತರಿಸುತ್ತಿದೆ.

ISL 7: ಒಡಿಶಾಕ್ಕೆ ಮತ್ತೆ ಸೋಲಿನ ಆಘಾತ, ಗೋವಾಕ್ಕೆ ಸತತ ಎರಡನೇ ಜಯ

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಬೆಂಗಳೂರು ಫುಟ್ಬಾಲ್ ಕ್ಲಬ್ ಉತ್ತಮ ದಾಖಲೆ ಹೊಂದಿದೆ. ಒಟ್ಟಾರೆಯಾಗಿ 6 ಪಂದ್ಯಗಳನ್ನು ಆಡಿದ್ದು 4 ಬಾರಿ ಗೆಲುವು ಸಾಧಿಸಿದರೆ, ಕೇವಲ ಒಮ್ಮೆ ಮಾತ್ರ ಸೋಲು ಕಂಡಿದೆ.