ಮಾರ್ಗೋ(ಡಿ.01): ಇಂಡಿಯನ್‌ ಸೂಪರ್‌ ಲೀಗ್‌ 7ನೇ ಆವೃತ್ತಿಯಲ್ಲಿ ಸೋಮವಾರ ಎದುರಾದ ಗೋವಾ ಎಫ್‌ಸಿ ಹಾಗೂ ನಾತ್‌ರ್‍ ಈಸ್ಟ್‌ ಯುನೈಟೆಡ್‌ ಎಫ್‌ಸಿ ನಡುವಣ ಪಂದ್ಯ 1-1 ಗೋಲಿನಿಂದ ಡ್ರಾದಲ್ಲಿ ಅಂತ್ಯವಾಯಿತು. 

ಈ ಆವೃತ್ತಿಯ ಟೂರ್ನಿಯಲ್ಲಿ ಡ್ರಾದಲ್ಲಿ ಅಂತ್ಯವಾದ 6ನೇ ಪಂದ್ಯ ಇದಾಗಿದೆ. ಪಂದ್ಯದ ಮೊದಲಾರ್ಧದ ಅವಧಿ ಮುಕ್ತಾಯಕ್ಕೆ ಉಭಯ ತಂಡಗಳು ತಲಾ 1 ಗೋಲುಗಳಿಸಿ ಸಮಬಲ ಸಾಧಿಸಿದ್ದವು. ನಾರ್ತ್ ಈಸ್ಟ್‌ ತಂಡದ ಐಡ್ರಿಸ್‌ ಸಿಲ್ಲಾ (40ನೇ ನಿ.) ಎದುರಾಳಿ ಗೋಲ್‌ ಕೀಪರ್‌ನ್ನು ವಂಚಿಸುವಲ್ಲಿ ಯಶಸ್ವಿಯಾಗಿ ಆಕರ್ಷಕ ಗೋಲುಗಳಿಸಿದರು. ಇದಾದ 3 ನಿಮಿಷಗಳ ಅಂತರದಲ್ಲಿ ಎಫ್‌ಸಿ ಗೋವಾದ ಐಗೊರ್‌ ಆ್ಯಂಗುಲಾ (43ನೇ ನಿ.) ನಾರ್ತ್ ಈಸ್ಟ್‌ ತಂಡದ ಭದ್ರಕೋಟೆಯ ಒಳನುಗ್ಗಿ ಗೋಲು ಗಳಿಸುವಲ್ಲಿ ಯಶಸ್ವಿಯಾದರು. 

ದ್ವಿತೀಯಾರ್ಧದ ಆಟದಲ್ಲಿ ಎರಡೂ ತಂಡಗಳ ಆಟಗಾರರು ಗೋಲುಗಳಿಸಲು ಸಾಕಷ್ಟು ಪ್ರಯತ್ನ ಪಟ್ಟರು. ಆದರೆ ಗೋಲು ದಾಖಲಾಗಲಿಲ್ಲ. ಅಂತಿಮವಾಗಿ ಸಮಬಲದ ಅಂತರವನ್ನು ಕಾಯ್ದುಕೊಂಡ ಉಭಯ ತಂಡಗಳು ಡ್ರಾ ಸಾಧಿಸಿದವು.

ಇಂದಿನ ಪಂದ್ಯ

ಮುಂಬೈ ಸಿಟಿ ವರ್ಸಸ್ ಎಸ್‌ಸಿ ಈಸ್ಟ್‌ ಬೆಂಗಾಲ್‌

ಸ್ಥಳ: ಬಂಬೋಲಿಮ್‌, 
ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್