ಫ್ರೆಂಚ್‌ಬಿರಿಯಾನಿಯ ಆಟೋಡ್ರೈವರ್‌, ಹಂಬಲ್‌ ಪಾಲಿಟಿಷಿಯನ್‌ ಡ್ಯಾನಿಶ್‌ ಸೇಠ್‌ ಆರ್‌ಸಿಬಿ ತಂಡದ ಡ್ರೆಸಿಂಗ್‌ ರೂಮ್‌ ಸದಸ್ಯ. ವಿರಾಟ್‌ ಕೊಹ್ಲಿ, ಎಬಿಡಿ, ಚಹಾಲ್‌, ಉಮೇಶ್‌ ಮುಂತಾದವರ ಆಪ್ತನೂ ಆಗಿರುವ ಡ್ಯಾನಿಶ್‌ ಸದ್ಯ ದುಬೈಯಲ್ಲಿ ಆರ್‌ಸಿಬಿ ತಂಡದ ಜತೆಗಿದ್ದಾರೆ.

ಆರ್‌ಸಿಬಿಯ ನಾನ್‌ಪ್ಲೇಯಿಂಗ್‌ ಸದಸ್ಯ ಸೇಠ್‌ ಅಲ್ಲಿಂದಲೇ ಚಿತ್ರಪ್ರಭ ಜೊತೆ ಆಡಿರುವ ನಾಲ್ಕು ಮಾತುಗಳು ಇಲ್ಲಿವೆ.

ಡ್ಯಾನಿಶ್ ಸೈಟ್ ಯಾರು? ಫ್ರೆಂಚ್ ಬಿರಿಯಾನಿ ನೋಡಿದ್ದೀರಾ? 

1. ಈ ಸಲ ಕಪ್‌ ನಮ್ದೇ ಅಂತ ಹೇಳುವಾಗ ತಂಡಕ್ಕೆ ಖುಷಿಯಾಗುತ್ತೆ. ಎಲ್ಲರೂ ಕಪ್‌ ಗೆಲ್ಲಲೇಬೇಕು ಅನ್ನುವ ಛಲದಿಂದಲೇ ಆಡುತ್ತಾರೆ. ಬೇರೆಲ್ಲ ಟೀಮ್‌ಗಿಂತ ಆರ್‌ಸಿಬಿಯೇ ಪ್ರತಿಸಲವೂ ಫೇವರಿಟ್‌. ಹಾಗೆಯೇ ತಂಡದ ಪ್ರತಿಯೊಬ್ಬ ಆಟಗಾರರಿಗೂ ಆರ್‌ಸಿಬಿ ಟೀಮ್‌ ಬಗ್ಗೆ ತುಂಬಾ ಅಭಿಮಾನ ಇದೆ. ಫ್ರಾಂಚೈಸಿಯನ್ನು ಇಷ್ಟಪಡುತ್ತಾರೆ. ನಾನು ಆರು ವರ್ಷದಿಂದ ತಂಡದ ಜತೆಗಿದ್ದೇನೆ.

2. ಈ ಸಲ ಖಾಲಿ ಸ್ಟೇಡಿಯಂನಲ್ಲಿ ಅಭಿಮಾನಿಗಳ ಸಿಳ್ಳೆಯ ಸದ್ದಿಲ್ಲದೇ ಆಡುತ್ತಿರುವುದು ಹೊಸತು. ಈ ಅನುಭವ ಹೇಗಿರುತ್ತೆ ಅಂತ ನಾವೆಲ್ಲ ಚರ್ಚೆ ಮಾಡಿದ್ದೀವಿ.

ನಟಿ ವಿದ್ಯಾ ಬಾಲನ್ ಕನ್ನಡದಲ್ಲಿ ಬೈಯೋದನ್ನ ನೋಡಿದ್ದೀರಾ..? ಇಲ್ನೋಡಿ ವಿಡಿಯೋ 

3. ಡಿಜಿಟಲ್‌ ಪೇಪರಿಗಿಂತ ಪ್ರಿಂಟೆಂಡ್‌ ಪೇಪರ್ರೆ ಅನೇಕರಿಗೆ ಇಷ್ಟ. ಈ ಸಲ ಕೊರೋನಾದಿಂದ ಟೀವಿಯಲ್ಲೇ ಮ್ಯಾಚ್‌ ನೋಡಬೇಕಾಗಿದೆ. ಈ ಸಲದ ಆಟ ಎಲ್ಲರಿಗೂ ಜೀವಮಾನದ ವಿಶಿಷ್ಟಅನುಭವ. ಅವರೂ ಎಂಜಾಯ್‌ ಮಾಡುತ್ತಿದ್ದಾರೆ.

View post on Instagram

4. ಆರ್‌ಸಿಬಿ ಫ್ಯಾನ್ಸ್‌ ತಂಡವನ್ನು ಎಷ್ಟುಇಷ್ಟಪಡುತ್ತಾರೆ ಎಂದು ಎಲ್ಲಾ ಆಟಗಾರರಿಗೂ ಗೊತ್ತಿದೆ. ಆ ಅಭಿಮಾನಕ್ಕೆ ತಕ್ಕಂತೆ ಆಡಬೇಕು ಎನ್ನುವ ಆಸೆ ಎಲ್ಲರದ್ದು. ಈ ಅಭಿಮಾನ ವಿದೇಶಿ ಆಟಗಾರರಿಗೂ ಇದೆ.

View post on Instagram