ದುಬೈ(ಅ.25): 11ರಲ್ಲಿ ಈಗಾಗಲೇ 8 ಪಂದ್ಯಗಳಲ್ಲಿ ಸೋಲುಂಡು ಟೂರ್ನಿಯಿಂದ ಹೊರಬಿದ್ದಿರುವ ಚೆನ್ನೈ ಸೂಪರ್‌ ಕಿಂಗ್ಸ್‌, ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಇಲ್ಲಿ ಭಾನುವಾರ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಎದುರಾಗಲಿವೆ. 

ಆಲ್ರೌಂಡರ್‌ ಕ್ರಿಸ್‌ ಮೋರಿಸ್‌ ತಂಡ ಸೇರ್ಪಡೆ ಬಳಿಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವಿನ ಉತ್ಸಾಹದಲ್ಲಿದೆ. ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ವಿಶ್ವಾಸ ಕೊಹ್ಲಿ ಪಡೆಗಿದೆ. ಆರ್‌ಸಿಬಿ 7 ಜಯದೊಂದಿಗೆ 14 ಅಂಕಗಳಿದೆ. 

ಸುಲಭ ಟಾರ್ಗೆಟ್ ಚೇಸ್ ಮಾಡಲು ಹೈದರಾಬಾದ್ ವಿಫಲ, ಪಂಜಾಬ್‌ಗೆ ರೋಚಕ ಗೆಲುವು!

ಕಳೆದ 2 ಪಂದ್ಯದಲ್ಲಿ ರಾಜಸ್ಥಾನ ಹಾಗೂ ಕೆಕೆಆರ್‌ ವಿರುದ್ಧ ಕೊಹ್ಲಿ ಪಡೆ ಜಯಭೇರಿ ಬಾರಿಸಿದೆ. ಇದೀಗ ಚೆನ್ನೈ ವಿರುದ್ಧ ಗೆದ್ದು ಆರ್‌ಸಿಬಿ ಪ್ಲೇ ಆಫ್‌ ಹಂತವನ್ನು ಬಹುತೇಕ ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ. ಮತ್ತೊಂದೆಡೆ ಚೆನ್ನೈ 11 ಪಂದ್ಯಗಳಿಂದ 6 ಅಂಕಗಳಿಸಿದ್ದು, ಉಳಿದ 3 ಪಂದ್ಯಗಳಲ್ಲಿ ಗೆದ್ದರೂ ರನ್‌ರೇಟ್‌ ಉತ್ತಮ ಪಡಿಸಿಕೊಳ್ಳಬೇಕಿದೆ. ಇತರೆ ತಂಡಗಳ ಫಲಿತಾಂಶ ಅವಲಂಬಿಸಬೇಕಿದೆ.

ಪಿಚ್‌ ರಿಪೋರ್ಟ್‌: ದುಬೈ ಪಿಚ್‌ ನಿಧಾನಗತಿಯಲ್ಲಿದ್ದು, ಆರಂಭದಲ್ಲಿ ಸ್ವಿಂಗ್‌ ಬೌಲರ್‌ಗಳಿಗೆ ಹೆಚ್ಚಾಗಿ ಸ್ಪಂದಿಸಲಿದೆ. ಸಮಯ ಕಳೆದಂತೆ ಸ್ಪಿನ್ನರ್‌ಗಳು ವಿಕೆಟ್‌ ಕೀಳಲಿದ್ದಾರೆ. ಟಾಸ್‌ ಪ್ರಮುಖ ಪಾತ್ರವಹಿಸಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ದೇವದತ್ ಪಡಿಕ್ಕಲ್‌, ಆರೋನ್ ಫಿಂಚ್‌, ಗುರುಕೀರತ್ ಮನ್‌, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ವಾಷಿಂಗ್ಟನ್ ಸುಂದರ್‌, ಕ್ರಿಸ್‌ ಮೋರಿಸ್‌, ಇಸುರು ಉದಾನ, ಮೊಹಮ್ಮದ್ ಸಿರಾಜ್‌,ನವದೀಪ್ ಸೈನಿ, ಯುಜುವೇಂದ್ರ ಚಹಲ್‌.

ಚೆನ್ನೈ: ಋುತುರಾಜ್ ಗಾಯಕ್ವಾಡ್‌, ಫಾಫ್ ಡುಪ್ಲೆಸಿ, ಅಂಬಟಿ ರಾಯುಡು, ಎನ್. ಜಗದೀಸನ್‌, ಎಂ ಎಸ್ ಧೋನಿ(ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್‌, ದೀಪಕ್ ಚಹಾರ್‌, ಶಾರ್ದೂಲ್ ಠಾಕೂರ್‌, ಇಮ್ರಾನ್ ತಾಹಿರ್‌, ಜೋಸ್ ಹೇಜಲ್‌ವುಡ್‌.

ಸ್ಥಳ: ದುಬೈ
ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್