8ರ ಬದಲು 7 ಗಂಟೆಗೆ IPL ಪಂದ್ಯ ಆರಂಭ? ಫ್ರಾಂಚೈಸಿ ವಿರೋಧ!
IPL ಟೂರ್ನಿಯ ರಾತ್ರಿ ಪಂದ್ಯಗಳು 8 ಗಂಟೆಗೆ ಆರಂಭವಾಗುತ್ತಿತ್ತು. ಆದರೆ 2020ರ ಐಪಿಎಲ್ ಟೂರ್ನಿಯಲ್ಲಿ ಕೆಲ ಬದಲಾವಣೆಗೆ ಪ್ರಸ್ತಾವನೆ ಮುಂದಿಡಲಾಗಿದೆ. ಇದರ ಪ್ರಕಾರ 8ಗಂಟೆ ಬದಲು 7 ಗಂಟೆಗೆ ಪಂದ್ಯ ಆರಂಭಿಸಲು ಪ್ಲಾನ್ ಹಾಕಿಕೊಂಡಿದೆ.
"
ಮುಂಬೈ(ಜ.03): ಐಪಿಎಲ್ ಟೂರ್ನಿಗೆ ಬಿಸಿಸಿಐ ತಯಾರಿ ನಡೆಸುತ್ತಿದೆ. 2020ರ ಐಪಿಎಲ್ ಟೂರ್ನಿ ವೇಳಾಪಟ್ಟಿ ಪ್ರಕಟಿಸಲು ಬಿಸಿಸಿಐ ಅಂತಿಮ ಕಸರತ್ತು ನಡೆಸುತ್ತಿದೆ. ಬಿಸಿಸಿಐ ಮಾರ್ಚ್ 28ಕ್ಕೆ ನಡೆಸಲು ಉದ್ದೇಶಿಸಿದರೆ, ಫ್ರಾಂಚೈಸಿ ವಿರೋಧ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಪಂದ್ಯದ ಪ್ರಸಾರ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ಸಮಯ ಬದಲಿಸಲು ಮುಂದಾಗಿದೆ.
ಇಲ್ಲೀವರೆಗೆ ಐಪಿಎಲ್ ರಾತ್ರಿ ಪಂದ್ಯಗಳು 8 ಗಂಟೆಗೆ ಆರಂಭವಾಗುತ್ತಿತ್ತು. ಸಂಜೆ ಪಂದ್ಯಗಳು 4 ಗಂಟೆಗೆ ಆರಂಭವಾಗುತ್ತಿತ್ತು. ಆದರೆ ವಾಹಿನಿ ಪಂದ್ಯ ಆರಂಭದ ಸಮಯದಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ. ರಾತ್ರಿ ರೋಚಕ ಪಂದ್ಯಗಳು ಹೆಚ್ಚು ಸಮಯ ತೆಗೆದುಕೊಳ್ಳುವ ಕಾರಣ ರಾತ್ರಿ 11ರ ಬಳಿಕ ಪಂದ್ಯ ವೀಕ್ಷಿಸುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಹೀಗಾಗಿ ವಾಹಿನಿ ಪಂದ್ಯ ಆರಂಭ ಸಮಯ ಬದಲಾಯಿಸಲು ನಿರ್ಧರಿಸಿದೆ.
ರಾತ್ರಿ 8ರ ಬದಲು 7 ಗಂಟೆ ಅಥವಾ 7.30ಕ್ಕೆ ಪಂದ್ಯ ಆರಂಭಿಸಲ ಉದ್ದೇಶಿಸಲಾಗಿದೆ. ವಾಹಿನಿ ನಿರ್ಧಾರಕ್ಕೆ ಫ್ರಾಂಚೈಸಿಗಳು ವಿರೋಧ ವ್ಯಕ್ತಪಡಿಸಿದೆ. ತಮ್ಮ ತಮ್ಮ ಕೆಲಸ ಮುಗಿಸಿ ಕ್ರಿಕೆಟ್ ನೋಡುವ ಅಭಿಮಾನಿಗಳಿಗೆ ಬೇಗನೆ ಪಂದ್ಯ ಆರಂಭಿಸಿದರೆ ಕಷ್ಟವಾಗಲಿದೆ. 8 ಗಂಟೆ ಸರಿಯಾದ ಸಮಯ ಎಂದು ಫ್ರಾಂಚೈಸಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದೆ.
ಪಂದ್ಯದ ದಿನಾಂಕದಲ್ಲಿನ ಬದಲಾವಣೆ, ಅಥವಾ ಮುಂದೂಡಿಕೆ ಒಪ್ಪಬಹುದು. ಆದರೆ ಸಮಯ ಬದಲಾವಣೆ ಒಪ್ಪಲು ಸಾಧ್ಯವಿಲ್ಲ ಎಂದು ಫ್ರಾಂಚೈಸಿಗಳು ಬಿಸಿಸಿಐಗೆ ಹೇಳಿದೆ. ಹೀಗಾಗಿ ಐಪಿಎಲ್ ವೇಳಾಪಟ್ಟಿ ಪ್ರಕಟ ವಿಳಂಬವಾಗುತ್ತಿದೆ. ಕಳೆದ ಆವೃತ್ತಿಯಲ್ಲೂ ಸಮಯ ಬದಲಾವಣೆಗೆ ವಾಹಿನಿ ಮುಂದಾಗಿತ್ತು. ಆದರೆ ಪ್ರಸ್ತಾವನ ಮುಂದಿಟ್ಟಿತ್ತು. ಆದರೆ ಕಾರ್ಯಗೊಂಡಿರಲಿಲ್ಲ.
ಜನವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ