ವಿದೇಶ ಪ್ರವಾಸದಲ್ಲಿ ಪ್ರತಿ ಬಾರಿ ರಾಹುಲ್ ಗಾಂಧಿ ಮಾತನಾಡುವಾಗಲೂ ಭಾರತ ವಿರೋಧಿ ಅಂಶಗಳು ಪ್ರಕಟವಾಗುತ್ತಿದೆ. ಆದರೆ, ಜಗತ್ತಿನ ಕ್ರಮಗಳು ಬದಲಾಗುತ್ತಿವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಹೊಸ ಭಾರತವನ್ನು ಜಗತ್ತು ಅಪ್ಪಿಕೊಳ್ಳುತ್ತಿದೆ ಎಂದು ಬರೆದಿದ್ದಾರೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರೇಮ್ ಶುಕ್ಲಾ.
ಭಾರತದ ಜನತೆ ಎಂದಿನಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಪಕ್ಷದ ಯುವರಾಜ ರಾಹುಲ್ ಗಾಂಧಿಯನ್ನು ಒಳಗೊಂಡ ಕುಟುಂಬ ರಾಜಕೀಯವನ್ನು ತಿರಸ್ಕರಿಸಿದರೋ ಆ ದಿನದಂದಲೂ, ಭಾರತದ ಪ್ರಜಾಪ್ರಭುತ್ವವನ್ನು ದೂಷಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುವ ರಾಜಕೀಯ ಗುಂಪು ಹುಟ್ಟಿಕೊಂಡಿದೆ. ಅದೂ ಮಾತ್ರವಲ್ಲದೆ ಸಿಕ್ಕ ಸಣ್ಣ ಅವಕಾಶದಲ್ಲೂ ದೇಶದ ಹೆಸರನ್ನು ಹಾಳು ಮಾಡುವುದರಲ್ಲಿಯೇ ಅವರು ನಿರತರಾಗಿದ್ದಾರೆ. ಭಾರತದಲ್ಲಿ ಪ್ರತಿದಿನ ಶೋಷಣೆ ಆಗುತ್ತಿದೆ ಎನ್ನುವಂಥ ಅಭಿಪ್ರಾಯ ಸ್ಥಾಪಿಸಲು ಬಯಸುವ ಅಂತರರಾಷ್ಟ್ರೀಯ ಸಂಸ್ಥೆಗಳು ಸಾಮಾನ್ಯವಾಗಿ ಇಂತಹ ಪ್ರಚಾರ ಅಭಿಯಾನಗಳಿಗೆ ಉತ್ತೇಜನ ನೀಡುತ್ತಿದೆ. ಇವುಗಳನ್ನು ಜಾರ್ಜ್ ಸೊರೊಸ್‌ನಂಥ ವ್ಯಕ್ತಿಗಳು ಪ್ರಾಯೋಜಿಸುತ್ತಿದ್ದಾರೆ ಮತ್ತು ಅಂತಹ ಜನರ ಬೆಂಬಲಿತ ಟೂಲ್‌ಕಿಟ್ ಗ್ಯಾಂಗ್‌ಗಳು ಭಾರತದಲ್ಲಿ ಪ್ರಜಾಪ್ರಭುತ್ವವು ಮುಗಿದಿದೆ, ಸಾಂವಿಧಾನಿಕ ಸಂಸ್ಥೆಗಳು ಕಣ್ಮರೆಯಾಗುತ್ತಿವೆ, ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗವನ್ನು ನಿಷ್ಕ್ರಿಯಗೊಳಿಸಲಾಗಿದೆ. ಚುನಾವಣಾ ಆಯೋಗವು ಪಕ್ಷಪಾತಿ ಚುನಾವಣೆಗಳನ್ನು ನಡೆಸುತ್ತಿದೆ. ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೂಲಕ ಚುನಾವಣೆಯ ಮೇಲೆ ಪ್ರಭಾವ ಬೀರುತ್ತಿದೆ. ಭಾರತವು ಸಿರಿವಂತ ಉದ್ಯಮಿಗಳ ಆಟದ ಮೈದಾನವಾಗಿದೆ ಎನ್ನುತ್ತಾ ಪ್ರತಿದಿನ ಇವುಗಳನ್ನು ಪ್ರಚಾರ ಮಾಡುತ್ತಿದ್ದಾರೆ.
ಇಂತಹ ಕಾಲ್ಪನಿಕ ಆರೋಪಗಳ ಪಟ್ಟಿಗಳಿಗೆ ಅಂತ್ಯ ಅನ್ನೋದೇ ಇಲ್ಲ. ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿ ಬ್ರಿಟನ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಬ್ರಿಟನ್ ಹಾಗೂ ಅಮೆರಿಕ ದೇಶಗಳು ಪ್ರಜಾಪ್ರಭುತ್ವದ ರಕ್ಷಕರು ಎನ್ನುವ ಅರ್ಥದಲ್ಲಿ ಮಾತನಾಡಿದ್ದು ಮಾತ್ರವಲ್ಲದೆ, ಭಾರತದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಈ ದೇಶಗಳು ಮಧ್ಯಪ್ರವೇಶಿಬೇಕು ಎನ್ನುವ ಅರ್ಥದಲ್ಲಿ ಮನವಿ ಮಾಡಿದ್ದರು. ಇತ್ತೀಚೆಗೆ ಅಮೆರಿಕ ಪ್ರವಾಸದ ವೇಳೆಯನ್ನೂ ಅವರು ಮತ್ತೊಮ್ಮೆ ಭಾರತ ಮತ್ತು ಭಾರತೀಯತೆಯ ವಿರುದ್ಧ ಕೆಟ್ಟ ಪ್ರಚಾರದ ಅಭಿಯಾನವನ್ನು ಇನ್ನಷ್ಟು ವೇಗಗೊಳಿಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು. ನರೇಂದ್ರ ಮೋದಿಯವರ ಮೂಲಕ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಫ್ಯಾಸಿಸ್ಟ್ ಜನರನ್ನು ವಿವಿಧ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳಲ್ಲಿ ಇರಿಸಲಾಗಿದೆ ಮತ್ತು ಪ್ರತಿದಿನ ಪ್ರಜಾಸತ್ತಾತ್ಮಕ ಪ್ರಕ್ರಿಯೆಯು ಕೊಲೆಯಾಗುತ್ತಿದೆ ಎಂದು ಅವರು ಹೇಳಿದರು. ರಾಹುಲ್ ಗಾಂಧಿಯವರ ಈ ಹೇಳಿಕೆಗಳೂ ಇನ್ನೂ ಕೂಡ ಪತ್ರಿಕೆಗಳಲ್ಲಿ ಸುದ್ದಿಯಲ್ಲಿವೆ. ತಮ್ಮ ಹಿಂದಿನ ಚಾಳಿಯನ್ನು ಅವರು ಪ್ರತಿ ಬಾರಿಯೂ ಮುಂದುವರಿಸುತ್ತಿದ್ದಾರೆ. ಅಮೆರಿಕದಲ್ಲಿ ಭಾರತ ವಿರೋಧಿ ಅಭಿಯಾನಗಳಿಗೆ ಈಗಾಗಲೇ ಪಾಕಿಸ್ತಾನದ ಲಾಬಿ ಕೂಡ ಪ್ರಾರಂಭವಾಗಿದೆ.
ವಿಶ್ವಸಂಸ್ಥೆಯಲ್ಲಿ (UN) ಭಾರತವನ್ನು ಗುರಿಯಾಗಿಸಲು ಪಾಕಿಸ್ತಾನವು ರಾಹುಲ್ ಗಾಂಧಿಯವರ ಭಾರತ ವಿರೋಧಿ ಹೇಳಿಕೆಗಳನ್ನು ಬಳಕೆ ಮಾಡಿದೆ. ಪಾಕಿಸ್ತಾನಿ ಮೂಲದ ಅಮೆರಿಕದ ಪತ್ರಕರ್ತೆ ಅಸ್ಮಾ ಖಾಲಿದ್ ಅವರು ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಬಳಸಿಕೊಂಡು ಭಾರತದಲ್ಲಿ ಪ್ರಜಾಪ್ರಭುತ್ವದ ನಾಶವಾಗುತ್ತಿರುವ ಸಂಬಂಧಿಸಿದಂತೆ ಅಮೆರಿಕ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ಇಂಥ ಪ್ರಶ್ನೆಗಳನ್ನು ಕೇಳುವುದರ ಹಿಂದಿನ ಉದ್ದೇಶವಂತೂ ಸ್ಪಷ್ಟವಾಗಿದೆ. ಹಾಗೇನಾದರೂ ಅಮೆರಿಕದ ಅಧಿಕಾರಿ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಮಾನ್ಯ ಮಾಡಿ ಈ ಕುರಿತಾಗಿ ಯಾವುದೇ ಹೇಳಿಕೆಯನ್ನು ಪ್ರಕಟ ಮಾಡಿದರೆ, ಅದು ಭಾರತ ವಿರೋಧಿಯೇ ಆಗಿರಲಿದೆ. ಅದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮುಂಬರುವ ಅಮೆರಿಕ ಪ್ರವಾಸದ ಮೇಲೆ ಸ್ವಲ್ಪ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯೂ ಇರುತ್ತದೆ.
ಆದರೆ ಶ್ವೇತಭವನದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಕಾರ್ಯತಂತ್ರದ ಸಂವಹನಗಳ ಸಂಯೋಜಕರಾದ ಜಾನ್ ಕಿರ್ಬಿ, ಅವರ ಈ ಉದ್ದೇಶಗಳನ್ನು ಹಾಳು ಮಾಡಿದ್ದಾರೆ. ಅವರು ನೀಡಿದ ಉತ್ತರ ರಾಹುಲ್ ಗಾಂಧಿಯವರ ಭಾರತ ವಿರೋಧಿ ಅಭಿಯಾನಕ್ಕೆ ಕಪಾಳಮೋಕ್ಷ ಎನ್ನುವ ಅರ್ಥದಲ್ಲಿ ಕೂಡ ನೋಡಬಹುದಾಗಿದೆ. 'ಭಾರತವು ಅತ್ಯಂತ ರೋಮಾಂಚಕ ಪ್ರಜಾಪ್ರಭುತ್ವ ದೇಶವಾಗಿದೆ. ನಿಮಗೆ ತಿಳಿದಿರುವ ಯಾರಾದರೂ ನವದೆಹಲಿಗೆ ಹೋದರೆ ಅದನ್ನು ಸ್ವತಃ ನೀವೂ ಅನುಭವಿಸಬಹುದು. ಖಂಡಿತವಾಗಿಯೂ ನಾನು ಪ್ರಜಾಪ್ರಭುತ್ವ ಸಂಸ್ಥೆಗಳ ಶಕ್ತಿ ಮತ್ತು ಆರೋಗ್ಯವು ಚರ್ಚೆಯ ಒಂದು ಭಾಗವಾಗಿದೆ ಎಂದು ನಿರೀಕ್ಷಿಸುತ್ತೇನೆ. ಯಾವುದೇ ವಿಚಾರದ ಬಗ್ಗೆ ಮಾತನಾಡಲು ನಮಗೆ ಗೊಂದಲವಿಲ್ಲ. ಪ್ರಪಂಚದಾದ್ಯಂತ ಯಾರೊಂದಿಗಾದರೂ ನಾವು ಹೊಂದಿರಬಹುದಾದ ಕಳವಳಗಳನ್ನು ವ್ಯಕ್ತಪಡಿಸುವುದರಿಂದ ನೀವು ಎಂದಿಗೂ ಹಿಂಜರಿಯುವುದಿಲ್ಲ. ಆದರೆ ಈ (ರಾಜ್ಯ) ಭೇಟಿಯು ನಿಜವಾಗಿಯೂ ಈಗ ಇರುವುದನ್ನು ಮುಂದುವರೆಸುವುದರ ಬಗ್ಗೆ ಮತ್ತು ಮುಂದೆ ಆಳವಾದ, ಬಲವಾದ ಪಾಲುದಾರಿಕೆ ಮತ್ತು ಸ್ನೇಹಕ್ಕಾಗಿ ನಾವು ಆಶಿಸುತ್ತೇವೆ' ಎಂದಿ ಕಿರ್ಬಿ ಹೇಳಿದ್ದಾರೆ.
ಅಧ್ಯಕ್ಷ ಜೋಯ್ ಬಿಡೆನ್ ಕೂಡ ಸಾಕಷ್ಟು ವಿಚಾರಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ಮಾಡಲು ಉತ್ಸುಕರಾಗಿದ್ದಾರೆ ಎಂದು ಜಾನ್ ಕಿರ್ಬಿ ಹೇಳಿದ್ದಾರೆ. ಭಾರತ ಮತ್ತು ಅದರ ಪ್ರಧಾನ ಮಂತ್ರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ನಿಟ್ಟಿನಲ್ಲಿ ಜಾನ್ ಕಿರ್ಬಿ ಒಬ್ಬಂಟಿಯಲ್ಲ. ಇದೇ ರೀತಿಯ ನಿಲುವನ್ನು ಹೊಂದಿರುವ ಬಹಳಷ್ಟು ಅಮೆರಿಕದ ಅಧಿಕಾರಿಗಳು ಇದ್ದಾರೆ ಮತ್ತು ಅವರ ಸಕಾರಾತ್ಮಕ ಹೇಳಿಕೆಗಳು ಸೊರೊಸ್ ಗ್ಯಾಂಗ್‌ನ ಕಾರ್ಯಸೂಚಿಯನ್ನು ಘಾಸಿಗೊಳಿಸಿದೆ.
ನರೇಂದ್ರ ಮೋದಿ ಭೇಟಿಗೆ ಸಂಬಂಧಿಸಿದಂತೆ ಅಮೆರಿಕದ ವಿದೇಶಾಂಗ ಇಲಾಖೆಯೂ ಹೇಳಿಕೆ ನೀಡಿದೆ. ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ಮಾತನಾಡಿ, ಭಾರತದೊಂದಿಗಿನ ಪಾಲುದಾರಿಕೆಯು ಅಮೆರಿಕದ ಶ್ರೇಷ್ಠ ಸಂಬಂಧಗಳಲ್ಲಿ ಒಂದಾಗಿದೆ. ಆರ್ಥಿಕತೆ, ವ್ಯಾಪಾರ ಮತ್ತು ಭದ್ರತೆ ಕ್ಷೇತ್ರದಲ್ಲಿ ಅಮೆರಿಕ-ಭಾರತ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ ಎಂದಿದ್ದಾರೆ. ಅದೇ ರೀತಿ ಅಮೆರಿಕದ ಸಂಸದರು ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಅವರ ಭಾಷಣವು ಭವಿಷ್ಯದ ಭಾರತದ ದೃಷ್ಟಿಕೋನ ಮತ್ತು ಉಭಯ ದೇಶಗಳು ಎದುರಿಸುತ್ತಿರುವ ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದು ತಿಳಿಸಿದ್ದಾರೆ. ಜೂನ್ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್ ಸೆನೆಟ್‌ನಲ್ಲಿ ಮಾತ್ರವಲ್ಲದೆ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಅಮೆರಿಕದಲ್ಲಿ ವಿದೇಶಿ ಅತಿಥಿಗೆ ನೀಡುವ ಗೌರವದ ದೊಡ್ಡ ರೂಪವಾಗಿದೆ.
2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಏರಿದ ಬಳಿಕ ಅಮೆರಿಕಕ್ಕೆ ಇದು ಅವರ 6ನೇ ಭೇಟಿಯಾಗಿದೆ. ಗುಜರಾತ್ ಮುಖ್ಯಮಂತ್ರಿಯಾಗಿ ಅವರ ಅಧಿಕಾರಾವಧಿಯಲ್ಲಿ, ಕಾಂಗ್ರೆಸ್ ಮತ್ತು ಜಾತ್ಯತೀತರು ("ಸೆಕ್ಯುಲರ್") ಗುಜರಾತ್ ಗಲಭೆಗಳನ್ನು ಉಲ್ಲೇಖಿಸಿ ನರೇಂದ್ರ ಮೋದಿಯವರಿಗೆ ಅಮೆರಿಕ ವೀಸಾವನ್ನು ರದ್ದು ಮಾಡುವ ಸಂಚು ರೂಪಿಸಿದ್ದರಯ 2014 ರಲ್ಲಿ, ಕಾಂಗ್ರೆಸ್ ಸೇರಿದಂತೆ ಈ ಎಲ್ಲಾ "ಜಾತ್ಯತೀತ" ಪಕ್ಷಗಳು ವಿದೇಶಾಂಗ ವ್ಯವಹಾರಗಳ ಬಗ್ಗೆ ನರೇಂದ್ರ ಮೋದಿಯವರ ಅನುಭವ ಮತ್ತು ಜ್ಞಾನವು ನಗಣ್ಯ ಎಂದು ವಾದಿಸುತ್ತಿದ್ದವು. ಅಮೇರಿಕಾ ವೀಸಾ ಇಲ್ಲದೆಯೇ ಮೋದಿಯವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೇಶವನ್ನು ಹೇಗೆ ಪ್ರತಿನಿಧಿಸುತ್ತಾರೆ ಎಂದು ಅವರು ತುಂಬಾ ಚಿಂತಿತರಾಗಿ ಬರೆದುಕೊಂಡಿದ್ದರು.
ಮೋದಿ ಹಿಂಬದಿ ಮಿರರ್ ಮಾತ್ರ ನೋಡೋದ್ರಿಂದ ಕಾರು ಅಪಘಾತವಾಗಿದೆ: ಒಡಿಶಾ ರೈಲು ದುರಂತದ ಬಗ್ಗೆ ರಾಹುಲ್ ಗಾಂಧಿ ವ್ಯಾಖ್ಯಾನ..
ಇಂದು ಅಮೇರಿಕಾ ಮೋದಿಗೆ ಕೆಂಪು ಹಾಸು ಹಾಸಿ ಸ್ವಾಗತ ಮಾಡುತ್ತಿದ್ದರೆ ಕಾಂಗ್ರೆಸ್ ಮತ್ತು ಅದರ ಮಿತ್ರ ಕೂಟಗಳು ಹೊಟ್ಟೆಕಿಚ್ಚು ಪಡುತ್ತಿವೆ. ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ ಅಥವಾ ಡೊನಾಲ್ಡ್ ಟ್ರಂಪ್ ಅವರಂತೆ ಅಧ್ಯಕ್ಷ ಜೋ ಬಿಡೆನ್ ಕೂಡ ಮೋದಿ ಅಭಿಮಾನಿ. "ನಾನು ನಿಮ್ಮ ಆಟೋಗ್ರಾಫ್ ತೆಗೆದುಕೊಳ್ಳಬೇಕು. ನೀವು ನನಗೆ ನಿಜವಾದ ಸಮಸ್ಯೆಯನ್ನು ಉಂಟುಮಾಡುತ್ತಿದ್ದೀರಿ. ಮುಂದಿನ ತಿಂಗಳು ನಾವು ವಾಷಿಂಗ್ಟನ್‌ನಲ್ಲಿ ನಿಮಗಾಗಿ ಭೋಜನಕೂಟ ಏರ್ಪಡಿಸಿದ್ದೇವೆ. ಇಡೀ ದೇಶದ ಪ್ರತಿಯೊಬ್ಬರೂ ಇದಕ್ಕೆ ಬರಲು ಕಾಯುತ್ತಿದ್ದಾರೆ. ಆದರೆ, ಇಲ್ಲಿ ಟಿಕೆಟ್ ಖಾಲಿಯಾಗಿದೆ. ನಾನು ತಮಾಷೆ ಮಾಡುತ್ತಿದ್ದೇನೆ ಎಂದು ನಿಮಗೆ ಅನಿಸಬಹುದು. ಆದರೆ, ನನ್ನ ತಂಡವನ್ನು ಕೇಳಿ, ನಾನು ಹಿಂದೆಂದೂ ಕೇಳಿರದ ಜನರಿಂದ ನನಗೆ ಫೋನ್ ಕರೆಗಳು ಬರುತ್ತಿವೆ, ಚಲನಚಿತ್ರ ತಾರೆಯರಿಂದ ಸಂಬಂಧಿಕರವರೆಗೆ ಎಲ್ಲರಲ್ಲೂ ನೀವು ತುಂಬಾ ಜನಪ್ರಿಯರಾಗಿದ್ದೀರಿ, ”ಎಂದು ಬಿಡೆನ್ ಇತ್ತೀಚೆಗೆ ಟೋಕಿಯೊದಲ್ಲಿ ಇಬ್ಬರು ನಾಯಕರು ಭೇಟಿಯಾದಾಗ ಹೇಳಿದರು.
ಮನ್ ಕೀ ಬಾತ್ ಮಾಡಲು ಬಂದಿಲ್ಲ, ನಿಮ್ಮೊಂದಿಗೆ ಸಂಬಂಧ ಬೆಳೆಸಲು ಬಂದಿದ್ದೇನೆ: ಮೋದಿ ವಿರುದ್ಧ ರಾಹುಲ್ ವ್ಯಂಗ್ಯ
ಮಾಜಿ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಒಂದೇ ವೇದಿಕೆಯಲ್ಲಿದ್ದಕ್ಕಾಗಿ ಅಮೇರಿಕಾ ಅಧ್ಯಕ್ಷರು ಮೋದಿಯ ಕಡೆಗೆ ಸ್ನೇಹಪರ ಧೋರಣೆ ಹೊಂದಿರೋದಿಲ್ಲ ಎಂದು ಭಾರತ ವಿರೋಧಿ ಬಣಗಳು ನಿರೀಕ್ಷೆ ಮಾಡಿದ್ದವು. ಆದರೆ, ಬಿಡೆನ್ ಮಾತುಗಳು ಇವರ ನಿರೀಕ್ಷೆಗಳಿಗೆ ತಣ್ಣೀರೆರಚಿದೆ. ಅಮೆರಿಕ ಮೋದಿ ಭೇಟಿಗಾಗಿ ಕಾಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸ್ವಾಭಾವಿಕವಾಗಿ ರಾಹುಲ್ ಹಾಗೂ ಹಾಗೂ ಅವರ ಬಣಗಳ ಹತಾಶೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಆದರೆ ಬದಲಾಗುತ್ತಿರುವ ವಿಶ್ವ ಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ ಹೊಸ ಭಾರತವನ್ನು ಜಗತ್ತು ಅಂಗೀಕರಿಸುತ್ತಿದೆ.
ಸೂಚನೆ: ಇಲ್ಲಿ ಬರೆದಿರುವ ಅಭಿಪ್ರಾಯಗಳು ಲೇಖಕರ ವೈಯಕ್ತಿಕ
