Asianet Suvarna News Asianet Suvarna News

ಮದುವೆ ನೆರವೇರಿಸಿಕೊಟ್ಟ ಮುಸ್ಲಿಂ ಮಹಿಳಾ ಧರ್ಮಗುರು : ವಿಡಿಯೋ ವೈರಲ್

  • ಮುಸ್ಲಿಂ ಸಮುದಾಯದಲ್ಲಿ ಕ್ರಾಂತಿ 
  • ಮದುವೆ ನೆರವೇರಿಸಿಕೊಟ್ಟ ಮಹಿಳಾ ಧರ್ಮಗುರು
  • ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್ ಅವರ ಮರಿಮೊಮ್ಮಗನ ವಿವಾಹ
Woman qazi performs marriage rituals of former president Zakir Hussains great grandson akb
Author
Bangalore, First Published Mar 14, 2022, 11:44 AM IST

ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್ ಅವರ ಮರಿಮೊಮ್ಮಗನ ವಿವಾಹವನ್ನು ಮುಸ್ಲಿಂ ಮಹಿಳಾ ಧರ್ಮಗುರು ನೆರವೇರಿಸಿ ಕೊಟ್ಟು ಮುಸ್ಲಿಂ ಸಮುದಾಯದಲ್ಲಿ ಕ್ರಾಂತಿಕಾರಿ ನಡೆಗೆ ಪಾತ್ರರಾಗಿದ್ದಾರೆ. ಇಂತಹ ಅಪರೂಪದ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಮಹಿಳಾ ಧರ್ಮಗುರು ಶುಕ್ರವಾರ ರಾಜಧಾನಿಯಲ್ಲಿ ಮಾಜಿ  ರಾಷ್ಟ್ರಪತಿ ಜಾಕೀರ್ ಹುಸೇನ್ ಅವರ ಮರಿ ಮೊಮ್ಮಗನ ವಿವಾಹವನ್ನು ನೆರವೇರಿಸಿ ಕೊಟ್ಟರು. ಈ ಮದುವೆ ಸಮಾರಂಭದ ವೀಡಿಯೊ ಸಾಮಾಜಿಕ  ಜಾಲತಾಣದಲ್ಲಿ ವೈರಲ್‌ ಆಗಿದೆ. 

ಮಾಜಿ ಯೋಜನಾ ಆಯೋಗದ ಸದಸ್ಯರೂ ಆಗಿರುವ ಸೈಯದಾ ಸೈಯದೈನ್ ಹಮೀದ್ (Syeda Saiyadain Hameed) ಅವರು ರೆಹಮಾನ್ (Rahman) ಮತ್ತು ಉರ್ಸಿಲಾ ಅಲಿ (Ursila Ali) ಅವರ ನಿಕಾಹ್ (nikaah) ಅನ್ನು ಪೂರ್ಣಗೊಳಿಸಲು ಧರ್ಮಗುರುವಿನ (ಖಾಜಿ) ಕರ್ತವ್ಯವನ್ನು ನಿರ್ವಹಿಸಿದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ 57 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

ಇದೇ ಮೊದಲ ಬಾರಿ ರಾಜ್ಯಪಾಲರ ನೇಮಕದಲ್ಲಿ ಮಹಿಳೆಯರು, ಮುಸಲ್ಮಾನರಿಗೆ ಅವಕಾಶ! 

ಮುಸ್ಲಿಂ ಮಹಿಳಾ ವೇದಿಕೆಯ ಆಶ್ರಯದಲ್ಲಿ ಈ ವಿವಾಹದ ಆಯೋಜನೆ ಮಾಡಲಾಗಿದೆ. ಈ ಮುಸ್ಲಿಂ ಮಹಿಳಾ ವೇದಿಕೆಯನ್ನು ವರನ ಮುತ್ತಜ್ಜಿಯಾಗಿದ್ದ ಬೇಗಂ ಸಯೀದಾ ಖುರ್ಷಿದ್ (Begum Saeeda Khurshid) ಸ್ಥಾಪಿಸಿದ್ದರು. ಈ ವೇದಿಕೆಯಡಿಯಲ್ಲೇ ಮದುವೆಯ ‍ಷರತ್ತುಗಳನ್ನು ರೂಪಿಸಲಾಗಿದೆ ಎಂದು ಹಮೀದ್ ಹೇಳಿಕೆಯೊಂದರಲ್ಲಿ ತಿಳಿಸಿದರು.

ಮದುವೆಯನ್ನು ಮಹಿಳಾ ಧರ್ಮಗುರು ನಡೆಸಿಕೊಡುತ್ತಿರುವ ಈ ವಿಡಿಯೋವನ್ನು ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು  ಈ ಕ್ರಾಂತಿಕಾರಿ ನಡೆಯನ್ನು ಮೆಚ್ಚಿಕೊಂಡಿದ್ದು, ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಮಯ ಬದಲಾಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮೆಹರ್, ಸಾಕ್ಷಿಗಳು ಮತ್ತು ಧರ್ಮಗುರು ಇವು ಖುರಾನ್ ಆದೇಶದಲ್ಲಿ ಬರುವ ನಿಕಾಹ್ ಆಚರಣೆಗಳು. ಈ ನಿಕಾಹ್‌ದ ಹೆಚ್ಚುವರಿ ಮಹತ್ವವೆಂದರೆ ಇಕ್ರಾರ್ನಾಮ (ಒಪ್ಪಂದ) ಇದು ವಧುವರರು ಪರಸ್ಪರ ಒಪ್ಪಿದ ಷರತ್ತುಗಳಾಗಿದ್ದು ವಧುವರರಿಗಿರುವ ಸಮಾನ ಹಕ್ಕುಗಳು ಮತ್ತು ಜವಾಬ್ದಾರಿಗಳಿಗೆ ಸಂಬಂಧಿಸಿದ್ದಾಗಿದೆ.

ಸಂಜನಾ ಮುಸ್ಲಿಂಗೆ ಮತಾಂತರ, ಮದುವೆ ಬಳಿಕ ಹೆಸರೂ ಚೇಂಜ್, ಈಗ ಈಕೆ ಸಂಜನಾ ಅಲ್ಲ! 

ಪುರುಷ ಪ್ರಧಾನ ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಮಕ್ಕಳಿಗೆ ಮಸೀದಿಯೊಳಗೆ ಪ್ರವೇಶವಿಲ್ಲ ಎಂಬ ನಿಯಮವಿದೆ. ಕೆಲವು ಭಾಗಗಳಲ್ಲಿ ಮದುವೆಯಲ್ಲೂ ಕೂಡ ವಧುವನ್ನು ತೋರಿಸುವ ಸಂಪ್ರದಾಯವಿಲ್ಲ. ಕೇವಲ ವರನಿಗಷ್ಟೇ  ಬಂದವರು ಶುಭಾಶಯ ಕೋರಿ ಹೊರಗೆ ಹೋಗುತ್ತಾರೆ. ಇನ್ನು ಹೆಣ್ಣು ಮಕ್ಕಳು ಮೃತಪಟ್ಟರೆ ಪರ ಪುರುಷರು ಆಕೆಯನ್ನು ನೋಡುವಂತಿಲ್ಲ ಹೆಣ್ಣು ಮಕ್ಕಳ ಮೇಲೆ ಇಷ್ಟೊಂದು ಕಠಿಣ ಷರತ್ತುಗಳನ್ನು ಹೊಂದಿರುವ ಮುಸ್ಲಿಂ ಸಮುದಾಯದಲ್ಲಿ ಒಬ್ಬರು ಮಹಿಳಾ ಧರ್ಮಗುರುವೊಬ್ಬರು ಮುಂದೆ ನಿಂತು ಮದುವೆಯನ್ನು ನೇರವೇರಿಸಿರುವುದು ಒಂದು ಕ್ರಾಂತಿಕಾರಿ ಬದಲಾವಣೆಯೇ ಸರಿ.

 
 
 
 
 
 
 
 
 
 
 
 
 
 
 

A post shared by India Today (@indiatoday)

 

ಕೆಲ ವರ್ಷಗಳ ಹಿಂದೆ ಮುಸ್ಲಿಂ ಮದುವೆಯ ಬಳಿಕ ನಡೆಯುವ ತಲಾಖ್ ಅಥವಾ ವಿಚ್ಚೇದನ ಸಮಸ್ಯೆಯ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಮಸೂದೆ ಜಾರಿಗೆ ತಂದಿತ್ತು. ಇದು ಮುಸ್ಲಿಂ ಹೆಣ್ಣುಮಕ್ಕಳ ಜೀವನಕ್ಕೆ ನೆರವಾಗಿದೆ. ಆದರೆ ತ್ರಿವಳಿ ತಲಾಖ್ ಮಸೂದೆ ಜಾರಿಗೆ ಬರುವ ಮುನ್ನ ಕೋರ್ಟ್ ಮೆಟ್ಟಿಲೇರಿದ ಹಲವು ಪ್ರಕರಣಗಳು ಇನ್ನು ಇತ್ಯರ್ಥಗೊಂಡಿಲ್ಲ. ಈ ಕುರಿತು ಪ್ರಕರಣ ಒಂದರ ತೀರ್ಪು ನೀಡುವಾಗ ಮುಸ್ಲಿಂ ಮದುವೆ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಹಿಂದೂ ವಿವಾಹದ ರೀತಿಯ ಸಂಸ್ಕಾರ ಮುಸ್ಲಿಂ ಮದುವೆಯಲ್ಲಿ ಇಲ್ಲ. ಮುಸ್ಲಿಂ ಮದುವೆ ಒಪ್ಪಂದ ಮಾತ್ರ ಎಂದು ಕರ್ನಾಟಕ ಹೈಕೋರ್ಟ್ ಈ ಹಿಂದೆ ಹೇಳಿತ್ತು.

Follow Us:
Download App:
  • android
  • ios