ರಾಜಸ್ಥಾನ[ಅ. 30]  ನೀನು ಕಪ್ಪಗಿದ್ದೀಯಾ? ನಿನ್ನ ವರ್ಣ ಕಪ್ಪು ಎಂದು ಗಂಡನ ಕಿರುಕುಳ ತಾಳಲಾರದೆ 21 ವರ್ಷದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ರಾಜಸ್ಥಾನದ ಪೊಲೀಸರು ಮಹಿಳೆಯ ಗಂಡನ ವಿರುದ್ಧ ಕಿರುಕುಳ ಆರೋಪದಡಿ ದೂರು ದಾಖಲಿಸಿಕೊಂಡಿದ್ದಾರೆ. ಮೃತ ಯುವತಿಯ ತಂದೆ ಪೊಲೀಸರಿಗೆ ನೀಡಿದ ದೂರಿನ ಆಧಾರದಲ್ಲಿ ಎಫ್ ಐ ಆರ್ ದಾಖಲಾಗಿದೆ.

ಇಲ್ಲಿಯವರೆಗೆ ಯಾರನ್ನು ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಯಾವಾಗಲೂ ನನ್ನ ಮಗಳನ್ನು ಕಪ್ಪು ಕಪ್ಪು ಎಂದು ಆಕೆಯ ಗಂಡ ಹೀಯಾಳಿಸುತ್ತಿದ್ದ ಎಂದು ಮಹಿಳೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಂಡ್ಯ: ಒಂದು ಲವ್ ಸ್ಟೋರಿಗೆ ಬಲಿಯಾದ ಮೂರು ಜೀವಗಳು

 ಕಪ್ಪು ಬಣ್ಣ  ಎಂದು ಹೀಯಾಳಿಸುತ್ತ ಮನನೊಂದು ಸಾವಿಗೀಡಾಗುತ್ತಿರುವ ಮೊದಲ ಪ್ರಕರಣ ಇದೇನಲ್ಲ. 2014ರಲ್ಲಿ 29 ವರ್ಷದ ಮಹಿಳೆ ಇದೇ ರೀತಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಕ್ಲಾಸ್ ಮೇಟ್ ಗಳ ಕಿರುಕುಳ ತಾಳಲಾರದೆ14 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಳು. 

ಇದು ನಿಜಕ್ಕೂ ಅತ್ಯಂತ ಅಪಾಯಕಾರಿ ಮತ್ತು ಆತಂಕ ತರುವ ಸಂಗತಿ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಶಾಲೆ, ಆಟದ ಮೈದಾನ ಅಲ್ಲದೇ ಮನೆಗಳಲ್ಲಿಯೂ ಕಪ್ಪು ವರ್ಣದವರನ್ನು ಅವರ ಚರ್ಮದ ಬಣ್ಣದಿಂದ ಹೀಯಾಳಿಸುವುದು ಕಂಡುಬರುತ್ತಿದೆ.

ಕೆಲ ವರ್ಷಗಳಿಂದ ಕಪ್ಪು ಬಣ್ಣವನ್ನು ಸಂಭ್ರಮಿಸುವ ಪರಿಪಾಠವೂ ಬೆಳೆದು ಬಂದಿದೆ. ಅಂದರೆ ಕಪ್ಪು ವರ್ಣದವರನ್ನು ಹೀಯಾಳಿಸುವವರಿಗೆ ಇದೊಂದು ರೀತಿಯ ಖಡಕ್ ಉತ್ತರದ ರೀತಿ ಆಗಿದೆ.