Asianet Suvarna News

ಕರ್ನಾಟಕ ಸಿಎಂ ಬಿಎಸ್‌ವೈ ಇನ್ನು ಗವರ್ನರ್?

* ಕರ್ನಾಟಕ ಸಿಎಂ ಬಿಎಸ್ ವೈ ಇನ್ನು ಮುಂದೆ ಗೌವರ್ನರ್ ?

* ಕರ್ನಾಟಕಕ್ಕೆ ಹೊಂದಿಕೊಂಡೇ ಇರುವ ಆಂದ್ರಪ್ರದೇಶಕ್ಕೆ ರಾಜ್ಯಪಾಲರು?

* ಯಡಿಯೂರಪ್ಪ ಅವರು ಗೌವರ್ನರ್ ಅನ್ನೋ ವಿಷಯ ಆಂಧ್ರಪ್ರದೇಶದಲ್ಲಿ ಬಹುಚರ್ಚಿತ ವಿಷಯ

Will BJP Appoint karnataka CM BS Yediyurappa As The Governor Of Andhra Pradesh pod
Author
Bangalore, First Published Jun 19, 2021, 9:33 AM IST
  • Facebook
  • Twitter
  • Whatsapp

ಅಮರಾವತಿ(ಜೂ.19): ನಾಯಕತ್ವ ಬದಲಾವಣೆ ಸೇರಿದಂತೆ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಆಡಳಿತಾತರೂಢ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನೀಡಿದ್ದು, ಈ ವಿಚಾರ ಈಗ ಹೈಕಮಾಂಡ್ ಅಂಗಳ ಸೇರಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಕರ್ನಾಟಕ ಸಿಎಂ ಬಿ. ಎಸ್. ಯಡಿಯೂರಪ್ಪ ನೆರೆ ರಾಜ್ಯ ಆಂಧ್ರಪ್ರದೇಶದ ಗವರ್ನರ್ ಆಗಲಿದ್ದಾರೆಂಬ ವಿಚಾರ ಭಾರೀ ಸದ್ದು ಮಾಡಲಾರಂಭಿಸಿದೆ.

ಖಡಕ್ ಸಂದೇಶ ಕೊಟ್ಟು ದಿಲ್ಲಿಗೆ ಹಾರಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್..!

ಹೌದು ಯಡಿಯೂರಪ್ಪ ಅವರು ರಾಜ್ಯಪಾಲರಾಗಲಿದ್ದಾರೆಂಬುವುದು ಆಂಧ್ರಪ್ರದೇಶದಲ್ಲಿ ಬಹುಚರ್ಚಿತ ವಿಷಯ. ಕಳೆದ ಎರಡು ದಿನಗಳಿಂದ ತೆಲುಗು ಮಾಧ್ಯಮಗಳಲ್ಲಿ ಕೇವಲ ಇದೊಂದೇ ವಿಚಾರ ಚರ್ಚೆಯಾಗುತ್ತಿದೆ. ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಕಂಡು ಬಂದಿರುವ ಸಂದರ್ಭದಲ್ಲಿ ಇಂತಹುದ್ದೊಂದು ಚರ್ಚೆ ನಡೆಯುತ್ತಿರುವುದು ಭಾರೀ ಮಹತ್ವ ಪಡೆದಿದೆ.

ಮಠಾಧೀಶರ ಹೇಳಿಕೆಗೆ ಮಾರ್ಮಿಕವಾಗಿ ಉತ್ತರ ನೀಡಿದ ಸಿಟಿ ರವಿ

ಹಾಲಿ ರಾಜ್ಯಪಾಲ ಬಿಶ್ವಭೂಷಣ ಅವರ ಅವಧಿ ಜುಲೈ 23ಕ್ಕೆ ಅಂತ್ಯಗೊಳ್ಳಲಿರುವ ಹಿನ್ನಲೆ ಬಿ. ಎಸ್‌. ಯಡಿಯೂರಪ್ಪ ಹೆಸರು ಮುನ್ನಲೆಗೆ ಬಂದಿದೆ. ಆಂಧ್ರದಲ್ಲಿ ಬಿಎಸ್‌ವೈ ವರ್ಚಸ್ಸು ಬಳಸಿಕೊಂಡು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಬಿಜೆಪಿ ಪ್ಲಾನ್ ಎನ್ನಲಾಗಿದೆ. 

ಈ ವಿಚಾರ ನಿಜಾನಾ? ಬಿಜೆಪಿ ಇಂತಹುದ್ದೊಂದು ಸಾಹಸಕ್ಕೆ ಕೈ ಹಾಕುತ್ತಾ? ರಾಜ್ಯ ರಾಜಕಾರಣದಲ್ಲೂ ಬದಲಾವಣೆಯಾಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಲಿದೆ. 

Follow Us:
Download App:
  • android
  • ios