ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೊಂದು ಮನ್ ಕಿ ಬಾತ್ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಆದರೆ ಆದರೆ ಮಣಿಪುರದ ಬಗ್ಗೆ ಮೌನ ಏಕೆ ತಾಳಿದ್ದಾರೆ?’ ಎಂದು ಕಾಂಗ್ರೆಸ್ ಕಿಡಿಕಾರಿದೆ.
ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೊಂದು ಮನ್ ಕಿ ಬಾತ್ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಆದರೆ ಆದರೆ ಮಣಿಪುರದ ಬಗ್ಗೆ ಮೌನ ಏಕೆ ತಾಳಿದ್ದಾರೆ?’ ಎಂದು ಕಾಂಗ್ರೆಸ್ ಕಿಡಿಕಾರಿದೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್,‘ಪ್ರಧಾನಿ ಅವರು 100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಮಣಿಪುರದ ಸಂಘರ್ಷದ ಬಗ್ಗೆ ಮೌನ ಮುರಿಯಬೇಕು. ನೈಸರ್ಗಿಕ ವಿಕೋಪಗಳನ್ನು ತಡೆಯಲು ಯಾರಿಂದಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ. ಆದರೆ ಜನ ಸಂಘರ್ಷ ತಡೆಯಲು ಅವರಿಗೆ ಆಗುತ್ತಿಲ್ಲವೆ ? ರಕ್ಷಣಾ ಪಡೆಗಳು ಅಷ್ಟು ಶಕ್ತಿ ಹೊಂದಿಲ್ಲವೇ? ಸಂಘರ್ಷ ಶುರುವಾಗಿ ಇಷ್ಟು ದಿನವಾದರೂ ಮೋದಿ ಇನ್ನೂ ಏಕೆ ಶಾಂತಿ ಸಂದೇಶ ನೀಡಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಮಧ್ಯೆ ಆರ್‌ಎಸ್‌ಎಸ್ ಕೂಡ ಸರ್ಕಾರಕ್ಕೆ ಶಾಂತಿ ಕಾಪಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರವನ್ನು ಖಂಡಿಸಿದ್ದು ಮತ್ತು ಸ್ಥಳೀಯ ಆಡಳಿತ, ಪೊಲೀಸರು, ಭದ್ರತಾ ಪಡೆಗಳು ಮತ್ತು ಕೇಂದ್ರೀಯ ಏಜೆನ್ಸಿಗಳು ಸೇರಿದಂತೆ ಸರ್ಕಾರವು ತಕ್ಷಣವೇ ಶಾಂತಿಯ ಮರುಸ್ಥಾಪನೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದೆ.
ಮಣಿಪುರ ಹಿಂಸಾಚಾರ: ಕೇಂದ್ರ ಸಚಿವರ ಮನೆಗೆ ಬೆಂಕಿ; 1200 ಜನರ ಗುಂಪಿನಿಂದ ದುಷ್ಕೃತ್ಯ
ಆರ್‌ಎಸ್‌ಎಸ್ (RSS) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ (Dattatreya Hosabale) ಭಾನುವಾರ ಸಂಜೆ ಈ ಹೇಳಿಕೆ ನೀಡಿ, ‘ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಅಗತ್ಯ ಕ್ರಮಗಳ ಜೊತೆಗೆ ಹಿಂಸೆಯಿಂದ ನಿರಾಶ್ರಿತರಾದವರಿಗೆ ಪರಿಹಾರ ಸಾಮಗ್ರಿಗಳ ತಡೆರಹಿತ ಪೂರೈಕೆ ಆಗುವಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದ್ವೇಷ ಮತ್ತು ಹಿಂಸೆಗೆ ಸ್ಥಳವಿಲ್ಲ. ಪ್ರಸ್ತುತ ಬಿಕ್ಕಟ್ಟಿಗೆ ಕಾರಣವಾದ ವಿಶ್ವಾಸ ಕೊರತೆಯನ್ನು ಎರಡೂ ಕಡೆಯವರು ನಿವಾರಿಸಬೇಕು ಮತ್ತು ಶಾಂತಿ (Peace) ಮರುಸ್ಥಾಪಿಸಲು ಮಾತುಕತೆ ಪ್ರಾರಂಭಿಸಬೇಕು. ಹಿಂಸೆಯಿಂದ ನಿರಾಶ್ರಿತರಾದ 50 ಸಾವಿರ ಜನರ ನೆರವಿಗೆ ಆರೆಸ್ಸೆಸ್ ನಿಲ್ಲಲಿದೆ ಎಂದು ಒತ್ತಿ ಹೇಳಿದ್ದಾರೆ.
ಕಳೆದ 45 ದಿನಗಳ ನಿರಂತರ ಹಿಂಸೆ ಅತ್ಯಂತ ಕಳವಳಕಾರಿ. ವಿಷಾದನೀಯ. ಸ್ಥಿತಿ ತಿಳಿಗೊಳಿಸಲು ಮತ್ತು ಜನರ ಜೀವ ಉಳಿಸಲು ಸಾಧ್ಯವಿರುವ ಎಲ್ಲ ಕ್ರಮ ತೆಗೆದುಕೊಳ್ಳಬೇಕು ಎಂದು ಮಣಿಪುರದ ನಾಗರಿಕ ಸಮಾಜ, ರಾಜಕೀಯ ಗುಂಪುಗಳು ಮತ್ತು ಸಾರ್ವಜನಿಕರಿಗೆ ಆರ್‌ಎಸ್‌ಎಸ್ ಮನವಿ ಮಾಡುತ್ತದೆ ಎಂದಿದ್ದಾರೆ. ಮಣಿಪುರದಲ್ಲಿ ಒಂದೂವರೆ ತಿಂಗಳ ಹಿಂದೆ ಭುಗಿಲೆದ್ದ ಮೈತೇಯಿ ಮತ್ತು ಕುಕಿ ಸಮುದಾಯದ ಜನರ ನಡುವಿನ ಜನಾಂಗೀಯ ಹಿಂಸೆಯಲ್ಲಿ (Racial violence) 110ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 11 ಜಿಲ್ಲೆಗಳಲ್ಲಿ ಕರ್ಫ್ಯೂ (curfew) ವಿಧಿಸಲಾಗಿದೆ ಮತ್ತು ಇಂಟರ್ನೆಟ್ ಸೇವೆ (Internet Service)ಸ್ತಬ್ಧಗೊಂಡಿದೆ.
ಮಣಿಪುರ ಗಲಾಟೆಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಮಲ್ಲಿಕಾರ್ಜುನ ಖರ್ಗೆ
