ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯತ್ತ ಟಿಎಂಸಿ ಸಚಿವರು ಹಾಗೂ ಶಾಸಕರ ವಲಸೆ| ಕ್ಯಾಥೋಲಿಕ್‌ ಪಾದ್ರಿ ಬಿಜೆಪಿಗೆ ಸೇರ್ಪಡೆ

ಕೋಲ್ಕತಾ(ಮಾ.11): ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯತ್ತ ಟಿಎಂಸಿ ಸಚಿವರು ಹಾಗೂ ಶಾಸಕರ ವಲಸೆ ಮುಂದುವರಿದಿದ್ದು, ಟಿಕೆಟ್‌ ನಿರಾಕರಿಸಿದ ಕಾರಣಕ್ಕೆ ಸಚಿವ ಬಚ್ಚು ಹನ್ಸ್‌ದಾ ಹಾಗೂ ಶಾಸಕ ಗೌರಿ ಶಂಕರ್‌ ದತ್ತಾ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.

ಇದೇ ವೇಳೆ ಬಂಗಾಳಿ ನಟ ಬೊನಿ ಸೇನ್‌ಗುಪ್ತಾ, ಟಿಎಂಸಿ ಸಂಸದೆ ಪ್ರತಿಮಾ ಮಂಡಲ್‌ ಅವರ ಕಿರಿಯ ಸಹೋದರಿ ಜಯಂತಿ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಇತ್ತೀಚೆಗಷ್ಟೇ ಐವರು ಟಿಎಂಸಿ ಶಾಸಕರು ಬಿಜೆಪಿಗೆ ಸೇರ್ಪಡೆ ಆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 2019ರ ಲೋಕಸಭೆ ಚುನಾವಣೆಯ ಬಳಿಕ ಇದುವರೆಗೆ 26 ಟಿಎಂಸಿ ಶಾಸಕರು ಹಾಗೂ 2 ಇಬ್ಬರು ಸಂಸದರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.

ಕ್ಯಾಥೋಲಿಕ್‌ ಪಾದ್ರಿ ಬಿಜೆಪಿಗೆ:

ಕೋಲ್ಕತಾದ ರೋಮನ್‌ ಕ್ಯಾಥೋಲಿಕ್‌ ಚಚ್‌ರ್‍ನ ಪಾದ್ರಿ ರೊಡ್ನಿ ಬೊರ್ನಿಯೋ ಅವರು ಫಾದರ್‌ ಹುದ್ದೆಗೆ ರಾಜೀನಾಮೆ ನೀಡಿದ್ದು, ಬಿಜೆಪಿಗೆ ಮಂಗಳವಾರ ಅಧಿಕೃತವಾಗಿ ಸೇರ್ಪಡೆ ಆಗಿದ್ದಾರೆ. ಬೋರ್ನಿಯೋ ಅವರು 22 ವರ್ಷಗಳ ಕಾಲ ಚಚ್‌ರ್‍ನ ಪಾದ್ರಿಯಾಗಿ ಸೇವೆ ಸಲ್ಲಿಸಿದ್ದರು.