ಪ.ಬಂಗಾಳ: ದೀದಿ-ಮೋದಿ ಸಮಬಲ ಹೋರಾಟ| ಟಿಎಂಸಿಗೆ ಕೂದಲೆಳೆ ಅಂತರದಲ್ಲಿ ಬಹುಮತ ಮಿಸ್‌: ಸಮೀಕ್ಷೆ

ನವದೆಹಲಿ(ಮಾ.24): ತೀವ್ರ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಬಿಜೆಪಿ ನಡುವೆ ಕೂದಳೆಯ ಅಂತರ ತುರುಸಿನ ಪೈಪೋಟಿ ನಡೆಯಲಿದೆ ಎಂದು ಎಬಿಪಿ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ.

ಒಟ್ಟು 294 ಕ್ಷೇತ್ರಗಳ ಪೈಕಿ ಬಹುಮತಕ್ಕೆ 148 ಸ್ಥಾನ ಬೇಕು. ಆದರೆ ಟಿಎಂಸಿ 136ರಿಂದ 146 ಕ್ಷೇತ್ರಗಳಲ್ಲಿ ಜಯ ಸಾಧಿಸಿದರೆ, ಬಿಜೆಪಿ 130ರಿಂದ 140 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ. ಇನ್ನು ಕಾಂಗ್ರೆಸ್‌ 14ರಿಂದ 18 ಕ್ಷೇತ್ರಗಳಲ್ಲಿ, ಇತರೆ 1ರಿಂದ 3 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.

2016ರ ಚುನಾವಣೆಯಲ್ಲಿ ಟಿಎಂಸಿ ಬರೋಬ್ಬರಿ 200 ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ 35 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು.

ಒಟ್ಟು ಕ್ಷೇತ್ರಗಳು 294 (ಬಹುಮತಕ್ಕೆ 148)

ಟಿಎಂಸಿ 136-146

ಬಿಜೆಪಿ 130-140

ಕಾಂಗ್ರೆಸ್‌ 14-18

ಇತರೆ 1-3