ವಯನಾಡು ದುರಂತ ಕತೆ: ಮನೆಯ 17 ಜನರಲ್ಲಿ ಬದುಕಿದ್ದು ಮನ್ಸೂರ್ ಮಾತ್ರ!

ಭೂಕುಸಿತ ಸಂತ್ರಸ್ತರ ರಕ್ಷಣಾ ಕಾರ್ಯ 6ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ತನ್ನವರನ್ನೆಲ್ಲ ಕಳೆದುಕೊಂಡ ಚೂರಲ್‌ಮಲೆಯ ಮನ್ಸೂರ್ (42) ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Wayanad landsides stories out of 17 people in the family, only Mansoor is alive rav

ವಯನಾಡು (ಆ.5): ಭೂಕುಸಿತ ಸಂತ್ರಸ್ತರ ರಕ್ಷಣಾ ಕಾರ್ಯ 6ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ತನ್ನವರನ್ನೆಲ್ಲ ಕಳೆದುಕೊಂಡ ಚೂರಲ್‌ಮಲೆಯ ಮನ್ಸೂರ್ (42) ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

‘ನನ್ನ ಬಳಿ ಈಗ ಏನೂ ಇಲ್ಲ. ಪರಿವಾರ, ಮನೆ ಎಲ್ಲವೂ ನಾಶವಾಯಿತು’ ಎಂದು ತನ್ನ ತಾಯಿ, ಪತ್ನಿ, ಇಬ್ಬರು ಮಕ್ಕಳು, ಸಹೋದರಿ ಹಾಗೂ ಆಕೆಯ ಕುಟುಂಬದ 11 ಮಂದಿ ಸೇರಿ 16 ಜನರನ್ನು ಕಳೆದುಕೊಂಡ ಮನ್ಸೂರ್ ಕಣ್ಣೀರಿಟ್ಟಿದ್ದಾರೆ. ಇದುವರೆಗೆ ಅವರ ಪತ್ನಿ, ಪುತ್ರ, ತಾಯಿ ಮತ್ತು ಸಹೋದರಿಯ ದೇಹವಷ್ಟೇ ದೊರಕಿದೆ. ಉಳಿದ ಹನ್ನೆರಡು ಜನರ ದೇಹಗಳು ಪತ್ತೆಯಾಗಿಲ್ಲ. ಘಟನೆ ನಡೆದಾಗ ಕೆಲಸದ ನಿಮಿತ್ತ ಹೊರಗೆಲ್ಲೋ ಹೋಗಿದ್ದ ಮನ್ಸೂರ್‌ ಬದುಕುಳಿದಿದ್ದು, ತಮ್ಮ ಸಹೋದರ ನಾಸಿರ್‌ನೊಂದಿಗೆ ವಾಸವಿದ್ದಾರೆ.‘ನೀರಿನ ಮಟ್ಟ ಏರಿದಾಗ ಎಲ್ಲರನ್ನೂ ಇಲ್ಲಿಗೇ ಬರಲು ಹೇಳಿದ್ದೆ. ಆದರೆ ಎಲ್ಲವೂ ಸರಿಯಾಗಿದೆ ಎಂದು ನಂಬಿ ಅಲ್ಲೇ ಉಳಿದ ಎಲ್ಲರೂ ಈಗ ಇಲ್ಲವಾಗಿದ್ದಾರೆ’ ಎಂದು ನಾಸಿರ್ ತನ್ನ ಸಹೋದರನ ದುಃಖಕ್ಕೆ ಕಂಬನಿ ಮಿಡಿದಿದ್ದಾರೆ.

ಅಪ್ಪನ ಕೈಹಿಡಿದೇ ಬೆಳೆದಿದ್ದೇ ಮಗಳು 'ಕೈ'ಯನನ್ನಷ್ಟೇ ಬಿಟ್ಟು ಹೋದಳು! ವಯನಾಡಿನಲ್ಲಿ ಮನಕಲುಕುವ ಘಟನೆ

ಚಿರು ಕುಟುಂಬ 1 ಕೋಟಿ, ಅಲ್ಲು ಅರ್ಜುನ್‌ 25 ಲಕ್ಷ ರು. ನೆರವು ಪ್ರಕಟ

ಮುಂಬೈ: ಕೇರಳದ ವಯನಾಡು ಭೂಕುಸಿತದಲ್ಲಿ ಆಸ್ತಿಪಾಸ್ತಿಗಳನ್ನು ಕಳೆದುಕೊಂಡ ಸಂತ್ರಸ್ತರಾದವರ ಕಷ್ಟಕ್ಕೆ ಸಿನಿಮಾ ತಾರೆಯರು ನೆರವಾಗಿದ್ದಾರೆ. ತೆಲುಗಿನ ಖ್ಯಾತ ನಟರಾದ ಚಿರಂಜೀವಿ, ರಾಮ್ ಚರಣ್ ಮತ್ತು ಅಲ್ಲು ಅರ್ಜುನ್‌ ಆರ್ಥಿಕ ಸಹಾಯ ಮಾಡಲು ಮುಂದೆ ಬಂದಿದ್ದು, ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ನೀಡಿದ್ದಾರೆ. ಚಿರಂಜೀವಿ ಮತ್ತು ಪುತ್ರ ರಾಮ್‌ ಚರಣ್ 1 ಕೋಟಿ ರು ಹಣವನ್ನು ನೀಡಿದ್ದರೆ, ಅಲ್ಲು ಅರ್ಜುನ್‌ 25 ಲಕ್ಷ ರು ಹಣವನ್ನು ಸಿಎಂಡಿಆರ್‌ಎಫ್‌ ನಿಧಿಗೆ ನೀಡಿದ್ದಾರೆ.

Latest Videos
Follow Us:
Download App:
  • android
  • ios