ವಿಜಯನಗರ ಸಾಮ್ರಾಜ್ಯದ ಸಂಪತ್ತು ಕರ್ನೂಲು ಕೃಷಿ ಭೂಮಿಯಲ್ಲಿ ಪತ್ತೆ?: ವಜ್ರ ಹುಡುಕಲು ಮುಗಿಬಿದ್ದ ಜನ
ಬಂಗಾರ, ವಜ್ರ ವೈಢೂರ್ಯಗಳನ್ನು ತರಕಾರಿಗಳಂತೆ ಬೀದಿಯಲ್ಲಿ ಮಾರುತ್ತಿದ್ದ ವಿಜಯನಗರ ಸಾಮ್ರಾಜ್ಯದ ಸಂಪತ್ತು ಮುಳುಗಡೆಯಾದ ಕರ್ನೂಲು, ಅನಂತಪುರ ಜಿಲ್ಲೆಗಳ ಜಮೀನುಗಳಲ್ಲಿ ಜನರು ವಜ್ರದ ಹರಳುಗಳ ಹುಡುಕಾಟಕ್ಕೆ ಮುಗಿಬಿದ್ದಿದ್ದಾರೆ.
ಬಳ್ಳಾರಿ/ಕರ್ನೂಲು (ಜು.25): ಕರ್ನಾಟಕದ ಅತ್ಯಂತ ಶ್ರೀಮಂತ ರಾಜಮನೆತನವಾದ ಹಾಗೂ ಬಂಗಾರ, ವಜ್ರ ವೈಢೂರ್ಯಗಳನ್ನು ತರಕಾರಿಗಳಂತೆ ಬೀದಿಯಲ್ಲಿ ಮಾರಾಟ ಮಾಡುತ್ತಿದ್ದ ವಿಜಯನಗರ ಸಾಮ್ರಾಜ್ಯದ ವ್ಯಾಪ್ತಿಗೊಳಪಟ್ಟ ಆಂಧ್ರ ಪ್ರದೇಶ ರಾಜ್ಯದ ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳ ಗ್ರಾಮಗಳಲ್ಲಿ ಬಂಗಾರ, ವಜ್ರ, ವೈಡೂರ್ಯ, ಮುತ್ತು, ರತ್ನಗಳನ್ನು ಹೊಂದಿದ ಸಂಪತ್ತು ಮುಳುಗಿತ್ತಂತೆ. ಪ್ರತಿವರ್ಷ ಮಳೆ ಸುರಿದಾಗಲೂ ವಜ್ರದ ಹರಳುಗಳು ಪತ್ತೆಯಾಗುತ್ತಿದ್ದು, ಇವುಗಳನ್ನು ಆಯ್ದುಕೊಳ್ಳಲು ಸ್ಥಳೀಯ ಜನರು ಹೊಲದಲ್ಲಿಯೇ ಬೀಡುಬಿಟ್ಟಿದ್ದಾರೆ. ಕೆಲವರಿಗೆ ವಜ್ರಗಳ ಹರಳು ಸಿಕ್ಕು, ಮಾರಾಟ ಮಾಡಿ ಶ್ರೀಮಂತರೂ ಆಗಿದ್ದಾರೆ.
ಆಂಧ್ರಪ್ರದೇಶ ರಾಜ್ಯದ ಅನಂತಪುರ ಮತ್ತು ಕರ್ನೂಲು ಜಿಲ್ಲೆಯ ಗಡಿಭಾಗದ ಗುಂತಕಲ್ ಮತ್ತು ಪತ್ತಿಕೊಂಡ ಭಾಗದ ಕೃಷಿ ಜಮೀನುಗಳಲ್ಲಿ ಈ ವಿಚಿತ್ರ ಘಟನೆ ನಡೆಯುತ್ತಿದೆ. ಇಲ್ಲಿ ಮುಂಗಾರು ಮಳೆಯಾದರೆ ವಜ್ರಕ್ಕಾಗಿ ಜಮೀನುಗಳಲ್ಲಿ ರೈತರಿಂದ ಶೋಧ ಕಾರ್ಯ ಆರಂಭವಾಗುತ್ತದೆ. ಜುಲೈನಿಂದ ಸೆಪ್ಟೆಂಬರ್‌ವರಿಗೂ ಸುರಿಯುವ ಮಳೆಗೆ ವಜ್ರಗಳು ಹೊರಗೆ ಕಾಣಿಸಿಕೊಳಗ್ಳುತ್ತವೆ. ಇಲ್ಲಿ ಹುಡುಕಿದರೆ ಅದೃಷ್ಟವಂತರಿಗೆ ವಜ್ರಗಳು ಸಿಗುತ್ತವೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರತಿ ಮುಂಗಾರು ಮಳೆಯ ಪವಾಡ ಈ ಬಾರಿಯೂ ನಡೆದಿದೆ. ಇಲ್ಲಿನ ಒಣ ಭೂಮಿಗಳಲ್ಲಿ ವಜ್ರಗಳು ಮತ್ತು ಅಮೂಲ್ಯ ಹರಳುಗಳು ಲಭ್ಯವಾಗುತ್ತಿದ್ದು, ನೂರಾರು ಜನರು ವಜ್ರ ಆಯಲು ಹೊಲದಲ್ಲಿ ಬೀಡು ಬಿಟ್ಟಿದ್ದಾರೆ.
Bengaluru: ಕನಕಪುರ ರಸ್ತೆಯಲ್ಲಿ 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆ
ದಿನವಿಡೀ ಹೊಲದಲ್ಲಿ ವಜ್ರದ ಹರಳುಗಳ ಹುಡುಕಾಟ: ಈಗಾಗಲೇ ಹಲವು ಜಮೀನುಗಳಲ್ಲಿ ರೈತರಿಗೆ ವಜ್ರದ ಹರಳುಗಳು ಸಿಕ್ಕಿವೆಯಂತೆ. ಈಗಾಗಲೇ ಕೆಲವು ರೈತರು ವಜ್ರದ ಹರಳುಗಳನ್ನು ಮಾರಾಟ ಮಾಡಿ 50 ಸಾವಿರ ರೂ.ಗಳಿಂದ 2 ಕೋಟಿ ರೂ. ಆದಾಯ ಪಡೆದುಕೊಂಡದ್ದಾರಂತೆ. ರೈತರು ಮತ್ತು ಸ್ಥಳೀಯರು ವಜ್ರದ ಹರಳುಗಳನ್ನು ಹುಡುಕಿಕೊಂಡು ಹೋಗಿ ಮಾರಾಟ ಮಾಡಿ ಶ್ರೀಮಂತರಾಗಿದ್ದಾರೆ ಎಂದು ಹೇಳುತ್ತಿದ್ದು, ಇದು ನಿಜವೋ ಸುಳ್ಳೋ ತಿಳಿಯುತತ್ತಿಲ್ಲ. ಆದರೆ, ನೂರಾರು ಜನರು ತಮ್ಮ ಪ್ರತಿನಿತ್ಯದ ಕಾಯಕವನ್ನು ಬಿಟ್ಟು ಹೊಲಗಳಲ್ಲಿ ವಜ್ರಗಳನ್ನು ಹುಡುಕುತ್ತಿರುವುದು ಮಾತ್ರ ನೋಡುಗರಿಗೆ ಸೋಜಿಗವಾಗಿದೆ. ವಜ್ರಕ್ಕಾಗಿ ಹೊಲಗಳಲ್ಲಿ ನೂರಾರು ಜನರಿಂದ ದಿನವಿಡೀ ಹುಡುಕಾಟ ಮಾಡ್ತಿದ್ದಾರೆ. ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳ ತುಗ್ಗಲಿ, ಜೊನ್ನಾಗಿರಿ,ಮಡ್ಡಿಕೇರಾ, ಚನ್ನಗಿರಿ, ಮುದ್ದಿಕೇರಿ ಸೇರಿದಂತೆ ಹಲವು ಹಳ್ಳಿಯಲ್ಲಿ ವಜ್ರವನ್ನು ಹುಡುಕುವವರ ಸಂಖ್ಯೆ ಹೆಚ್ಚಾಗಿದೆ.
ವಜ್ರ ಶೋಧನೆಗೊಂಡು ಪೌರಾಣಿಕ ಕಥೆ: ವಿಜಯನಗರ ಅರಸರ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮಗಳಲ್ಲಿ ವಿಜಯ ನಗರದ ಸಂಪತ್ತು ಮುಳುಗಿತ್ತಂತೆ. ಮಳೆಯಾದಾಗ ಮಣ್ಣಲ್ಲಿ ಹುದುಗಿರುವ ವಜ್ರಗಳು ಹೊರಗೆ ಬರುತ್ತದೆ. ಇದನ್ನು ಜನರು ಆರಿಸುತ್ತಾರಂತೆ. ಹೀಗಾಗಿ ಮಳೆಗಾಲದ ಋತುವಿನಲ್ಲಿ ಸ್ಥಳೀಯ ಜನರು ವಜ್ರದ ಹುಡುಕಾಟ ನಡೆಸುತ್ತಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಕರ್ನಾಟಕದ ಪ್ರಮುಖ ರಾಜಮನೆತನವಾದ ಹಾಗೂ ಹಿಂದೂಗಳ ಉಳಿವಿಗಾಗಿ ಜನ್ಮತಾಳಿದ ವಿಜಯನಗರ ಸಾಮ್ರಾಜ್ಯದಲ್ಲಿ ಬಂಗಾರ, ವಜ್ರ, ವೈಢೂರ್ಯಗಳನ್ನು ತರಕಾರಿಯಂತೆ ಹಂಪಿಯ ಬೀದಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬ ಇತಿಹಾಸ ಎಲ್ಲರಿಗೂ ತಿಳಿಸಿದೆ. ಆದರೆ, ಬಹುಮನಿ ಸುಲ್ತಾನರ ದಾಳಿ ವೇಳೆ ವಿಜಯನಗರ ಸಾಮ್ರಾಜ್ಯದ ಅರಸ ಆನೆ, ಕುದುರೆಗಳ ಮೇಲೆ ವಜ್ರ ವೈಢೂರ್ಯಗಳನ್ನು ಆಂಧ್ರಕ್ಕೆ ತೆಗೆದುಕೊಂಡು ಹೋಗುವಾಗ ಕರ್ನೂಲು ಮತ್ತು ಅನಂತಪುರದ ಜಿಲ್ಲೆಗಳಲ್ಲಿ ಬಿದ್ದಿವೆ ಎಂಬ ಪ್ರತೀತಿ ಇದೆ. ಆದ್ದರಿಂದ ಪ್ರತಿ ವರ್ಷ ಮುಂಗಾರು ಮಳೆ ಬಿದ್ದಾಕ್ಷಣ ಮಣ್ಣಿನಲ್ಲಿ ಹುದುಗಿದ್ದ ವಜ್ರಗಳು ನೀರು ಬಿದ್ದು ಹೊಳೆಯುತ್ತಿದ್ದು, ಕೃಷಿಕರಿಗೆ ಸಿಗುತ್ತಿವೆ.
ಉಡುಪಿ ಕಾಲೇಜು ಶೌಚಗೃಹದಲ್ಲಿ ಹಿಂದೂ ಯುವತಿಯರ ವೀಡಿಯೋ ಸೆರೆ: ಪ್ರಶ್ನಿಸಿದವರ ಮೇಲೆ ಪೊಲೀಸ್ ವಿಚಾರಣೆ
ಸ್ಥಳೀಯರ ಮಾಹಿತಿ ಪ್ರಕಾರ: ಮೂಲಗಳ ಪ್ರಕಾರ ಮಡ್ಡಿಕೇರಾ ಮಂಡಲದ ಬಸಿನೇಪಲ್ಲಿ ಗ್ರಾಮದಲ್ಲಿ ರೈತರೊಬ್ಬರು ಕೃಷಿ ಮಾಡುತ್ತಿದ್ದಾಗ ದೊಡ್ಡ ವಜ್ರವೊಂದು ಪತ್ತೆಯಾಗಿತ್ತು. ಈ ಪ್ರದೇಶದ ವೃತ್ತಿಪರ ವ್ಯಾಪಾರಿಗಳು ರೈತರೊಂದಿಗೆ ಒಪ್ಪಂದವನ್ನು ಮಾಡಿಕೊಂಡು 2 ಕೋಟಿ ರೂ.ಗೆ ಖರೀದಿಸಿದ್ದರು. 2019 ರಲ್ಲಿ, ಒಬ್ಬ ರೈತನಿಗೆ ವಜ್ರವೊಂದು ಸಿಕ್ಕಿದ್ದು, ಅದನ್ನು ಮಾಡಿ 60 ಲಕ್ಷ ರೂ. ಗಳಿಸಿದ್ದನು. ಇನ್ನು 2020ರಲ್ಲಿ ಇಬ್ಬರು ಗ್ರಾಮಸ್ಥರು 5 ಲಕ್ಷ ಮತ್ತು 6 ಲಕ್ಷ ಮೌಲ್ಯದ ಎರಡು ಅಮೂಲ್ಯ ಕಲ್ಲುಗಳನ್ನು ಹುಡುಕಿದ್ದರು. ಅವುಗಳನ್ನು ಕ್ರಮವಾಗಿ ಕೇವಲ 1.5 ಲಕ್ಷ ಮತ್ತು 50,000 ರೂ.ಗಳಿಗೆ ಸ್ಥಳೀಯ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದರು ಎಂದು ಹೇಳುತ್ತಿದ್ದಾರೆ.