ನವದೆಹಲಿ[ಜ.19]: 2013ರಲ್ಲಿ ಪೂರ್ವ ದೆಹಲಿಯಲ್ಲಿ 5 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಗುಪ್ತಾಂಗಕ್ಕೆ ವಸ್ತುಗಳನ್ನು ತೂರಿ ಕ್ರೂರತೆ ಮೆರೆದಿದ್ದ ಪ್ರಕರಣ ಸಂಬಂಧ, ಇಬ್ಬರು ಆರೋಪಿಗಳನ್ನು ಇಲ್ಲಿನ ಪೋಕ್ಸೋ ನ್ಯಾಯಾಲಯ ಶನಿವಾರ ದೋಷಿಗಳೆಂದು ತೀರ್ಪಿತ್ತಿದೆ.

ನಿಮಗೆಷ್ಟು ಧೈರ್ಯ?: ತಾಯಿಯ ಕೋಪದ ಕಂಗಳಲ್ಲಿ ಕಂಡಳು ನಿರ್ಭಯಾ!

ಇಲ್ಲಿನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಮನೋಜ್‌ ಶಾ ಹಾಗೂ ಪ್ರದೀಪ್‌ ಕುಮಾರ್‌ ಎಂಬವರನ್ನು ದೋಷಿಗಳೆಂದು ಪರಿಗಣಿಸಿದೆ. ಪ್ರಕರಣದಲ್ಲಿ ಮಗುವನ್ನು ಕ್ರೂರವಾಗಿ ಹಿಂಸಿಸಲಾಗಿದ್ದು, ಸಮಾಜದ ಸ್ವಾಸ್ಥವನ್ನೇ ಕದಡಿದ ಹೇಯ ಪ್ರಕರಣ ಇದಾಗಿದೆ ಎಂದು ನ್ಯಾಯಮೂರ್ತಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

2013ರ ಏಪ್ರಿಲ್‌ 15ರಂದು ಅಪರಾಧಿಗಳಿಬ್ಬರೂ ಮಗುವಿನ ಮೇಲೆ ಅತ್ಯಾಚಾರ ಎಸಗಿ, ಗುಪ್ತಾಂಗಕ್ಕೆ ವಸ್ತುಗಳನ್ನು ತೂರಿಸಿದ್ದರು. ಬಳಿಕ ಮಗು ಸತ್ತಿದೆ ಎಂದು ಭಾವಿಸಿ ಮನೋಜ್‌ ಶಾ ಮನೆಯಲ್ಲಿ ಮಗುವನ್ನು ಇಡಲಾಗಿತ್ತು. ಸುಮಾರು 40 ಗಂಟೆಗಳ ಬಳಿಕ ಏಪ್ರಿಲ್‌ 17 ರಂದು ಪೊಲೀಸರು ಮಗುವನ್ನು ರಕ್ಷಿಸಿದ್ದರು. ಜ.30 ರಂದು ಇವರಿಬ್ಬರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

ಶೃಂಗೇರಿ ವಿದ್ಯಾರ್ಥಿನಿ ಗ್ಯಾಂಗ್ ರೇಪ್, ಕೊಲೆ : ದೋಷಿಗಳಿಗೆ ಗಲ್ಲು