* ಲಸಿಕೆ ಬಳಿಕ ವೃದ್ಧೆಗೆ ಕಣ್ಣಿನ ದೃಷ್ಟಿ ಮರಳಿತು* ಕೊರೋನಾ ಲಸಿಕೆಯಿಂದ ನಡೆಯಿತು ಪವಾಡ* ಕೋವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿದ್ದ ಮಹಿಳೆ

ಮುಂಬೈ(ಜು.07): ಕೋವಿಶೀಲ್ಡ್‌ ಲಸಿಕೆ ಪಡೆದ ನಂತರ 70 ವರ್ಷದ ವಯೋವೃದ್ಧೆ ತಮ್ಮ ಕಣ್ಣಿನ ದೃಷ್ಟಿಯನ್ನು ಮರಳಿ ಪಡೆದಿರುವ ಅಚ್ಚರಿಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇಲ್ಲಿನ ವಾಷಿಂ ಜಿಲ್ಲೆಯ ನಿವಾಸಿ ಮಥುರಾಬಾಯಿ ಬಿಡ್ವೆ 9 ವರ್ಷದ ಹಿಂದೆ ತಮ್ಮ ಎರಡೂ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದರು.

ಈ ನಡುವೆ ಜೂ.26ರಂದು ಮಥುರಾಬಾಯಿ ಕೋವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿದ್ದರು. ಅಚ್ಚರಿ ಎಂಬಂತೆ ಮಾರನೆ ದಿನ ಅವರಿಗೆ ಒಂದು ಕಣ್ಣಿನ ದೃಷ್ಟಿಮರಳಿದೆ. ಒಂದು ಕಣ್ಣು ಶೇ.30-40ರಷ್ಟುದೃಷ್ಟಿಪಡೆದುಕೊಂಡಿದೆ ಎಂದು ಅವರು ಹೇಳುತ್ತಿದ್ದಾರೆ. ಹೀಗಾಗಿ ಇದು ವೈದ್ಯಲೋಕಕ್ಕೇ ಅಚ್ಚರಿಯಾಗಿ ಪರಿಣಮಿಸಿದೆ.

ಇತರೆ ಕೆಲವು ಕಡೆ ಕೂಡಾ ಲಸಿಕೆ ಪಡೆದ ಬಳಿಕ ತಮ್ಮ ಇನ್ನಿತರೆ ಹಲವು ಆರೋಗ್ಯ ಸಮಸ್ಯೆ ನಿವಾರಣೆಯಾದ ಬಗ್ಗೆ ಜನರು ಹೇಳಿಕೊಂಡ ಘಟನೆಗಳೂ ಇತ್ತೀಚೆಗೆ ವರದಿಯಾಗಿದ್ದವು.