ಡೆಹ್ರಾಡೂನ್(ಏ.07)‌: 1300 ಹೆಕ್ಟೇರ್‌ಗೂ ಹೆಚ್ಚಿನ ಅರಣ್ಯವನ್ನು ಆಹುತಿಪಡೆದ ಕಾಡ್ಗಿಚ್ಚನ್ನು ನಂದಿಸಲು ಉತ್ತರಾಖಂಡದ ಅರಣ್ಯ ಸಚಿವರ ಹರಾಕ್‌ಸಿಂಗ್‌ ರಾವತ್‌ ಏಕಾಂಗಿಯಾಗಿ ಯತ್ನಿಸಿ ನಗೆಪಾಟಲಿಗೀಡಾದ ಘಟನೆ ನಡೆದಿದೆ.

ಕಳೆದ ಕೆಲ ದಿನಗಳಿಂದ ರಾಜ್ಯದ ಕೆಲ ಅರಣ್ಯ ಭಾಗಗಳು ಭಾರೀ ಕಾಡ್ಗಿಚ್ಚಿಗೆ ತುತ್ತಾಗಿದೆ. ಇದನ್ನು ನಂದಿಸುವ ವೇಳೆ ನಾಲ್ವರು ಅರಣ್ಯ ಸಿಬ್ಬಂದಿ ಕೂಡಾ ಸಾವನ್ನಪ್ಪಿದ್ದಾರೆ. ಇದರ ನಡುವೆಯೇ ಸಚಿವ ಹರಕ್‌ ಭಾನುವಾರ ಅರಣ್ಯಕ್ಕೆ ಭೇಟಿ ನೀಡಿದ್ದಾರೆ.

ಈ ವೇಳೆ ಛಾಯಾಗ್ರಾಹಕರು ಕಾಣುತ್ತಲೇ ಕೈಯಲ್ಲಿ ಮರದ ಸಣ್ಣ ಟೊಂಗೆ ಹಿಡಿದು ಬೆಂಕಿ ಆರಿಸುವ ಯತ್ನ ಮಾಡಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಚಿವರ ನಡೆಗೆ ಭಾರೀ ಟೀಕೆ ವ್ಯಕ್ತವಾಗಿದೆ.