ನದಿನೀರಿನಲ್ಲಿ ಕೊಚ್ಚಿ ಹೋದ ಕಾರು, 9 ಮಂದಿ ಸಾವು!
ನಾಜಿಯಾ ಎಂದು ಗುರುತಿಸಲಾದ 22 ವರ್ಷದ ಮಹಿಳೆಯನ್ನು ವಾಹನದಿಂದ ಜೀವಂತವಾಗಿ ರಕ್ಷಿಸಲಾಗಿದೆ. ಆಕೆಯನ್ನು ರಾಮನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನೈನಿತಾಲ್ (ಜುಲೈ 8): ಉತ್ತರಾಖಂಡದ (Uttarakhand) ರಾಮನಗರದಲ್ಲಿ ದಾರುಣ ಘಟನೆ ನಡೆದಿದ್ದು, ಡೇಲಾ ನದಿಯ (Dhela river) ಪ್ರವಾಹದಲ್ಲಿ ಕಾರು ಕೊಚ್ಚಿಕೊಂಡು ಹೋಗಿದ್ದರಿಂದ ಒಂಬತ್ತು ಪ್ರವಾಸಿಗರು (tourists ) ಮುಳುಗಿ ಸಾವನ್ನಪ್ಪಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನದಿ ಉಕ್ಕಿ ಹರಿಯುತ್ತಿತ್ತು ಇದರ ಪ್ರವಾಹದಲ್ಲಿ ಕಾರು ಕೊಚ್ಚಿಕೊಂಡು ಹೋದ ಕಾರಣ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್‌ನ (Punjab) ಪಟಿಯಾಲ ಮೂಲದ ನಿವಾಸಿಗಳಾದ ಪ್ರವಾಸಿಗರೆಲ್ಲರೂ ರಾಜ್ಯಕ್ಕೆ ಹಿಂತಿರುಗುತ್ತಿದ್ದಾಗ ಬೆಳಿಗ್ಗೆ 5:45 ರ ಸುಮಾರಿಗೆ ಅಪಘಾತ ಸಂಭವಿಸಿದೆ. ನಾಲ್ಕು ಶವಗಳನ್ನು ಹೊರತೆಗೆಯಲಾಗಿದ್ದು, ಐವರು ಇನ್ನೂ ವಾಹನದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ನಾಜಿಯಾ ಎಂದು ಗುರುತಿಸಲಾದ 22 ವರ್ಷದ ಮಹಿಳೆಯನ್ನು ವಾಹನದಿಂದ ಜೀವಂತವಾಗಿ ರಕ್ಷಿಸಲಾಗಿದೆ. ಆಕೆಯನ್ನು ರಾಮನಗರ ಆಸ್ಪತ್ರೆಗೆ ಕಳುಹಿಸಲಾಗಿದೆ. 10 ಪ್ರವಾಸಿಗರು ಡೇಲಾದಲ್ಲಿನ ರೆಸಾರ್ಟ್‌ನಲ್ಲಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
"ಎಲ್ಲಾ 9 ಶವಗಳನ್ನು ಹೊರತೆಗೆಯಲಾಗಿದ್ದು, ಮೃತರನ್ನು ಗುರುತು ಮಾಡುವ ಕೆಲಸ ನಡೆಯುತ್ತಿದೆ. ರಕ್ಷಣೆ ಮಾಡಲಾಗಿರುವ ಹುಡುಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಕೌಮೌನ್ ವಲಯದ ಡಿಐಜಿ ನಿಲೇಶ್ ಆನಂದ್ ಭರ್ನೆ ತಿಳಿಸಿದ್ದಾರೆ.
"ನೈನಿತಾಲ್ ಜಿಲ್ಲೆಯಲ್ಲಿ ಸಂಭವಿಸಿದ ದುರಂತದಲ್ಲಿ ಕಾರೊಂದು ಕೊಚ್ಚಿಕೊಂಡು ಹೋಗಿದ್ದು ನೋವಿನ ಸಂಗತಿ. ಈ ದುಃಖದ ಸಮಯದಲ್ಲಿ, ನನ್ನ ಪ್ರಾರ್ಥನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಘಟನೆಯಲ್ಲಿ ಉಳಿದುಕೊಂಡಿರುವವರ ನೆರವಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.