ಹಾಸಿಗೆ ಹಾಗೂ ತಲೆದಿಂಬಿನ ಒಳಗೆ ಹತ್ತಿಯ ಬದಲು ಬಳಸಿ ಬಿಸಾಡಿದ ಮಾಸ್ಕ್‌|  ಗಾರ್ಮೆಂಟ್‌ ಫ್ಯಾಕ್ಟರಿಗೆ ಬೀಗ

ಮುಂಬೈಏ.13): ಹಾಸಿಗೆ ಹಾಗೂ ತಲೆದಿಂಬಿನ ಒಳಗೆ ಹತ್ತಿಯ ಬದಲು ಬಳಸಿ ಬಿಸಾಡಿದ ಮಾಸ್ಕ್‌ಗಳನ್ನು ತುಂಬುತ್ತಿದ್ದ ಗಾರ್ಮೆಂಟ್‌ ಫ್ಯಾಕ್ಟರಿಯೊಂದನ್ನು ಮಹಾರಾಷ್ಟ್ರದ ಜಲ್ಗಾಂವ್‌ ಜಿಲ್ಲೆಯಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಲ್‌ಗಾಂವ್‌ನ ಕೈಗಾರಿಕಾ ಪ್ರದೇಶದಲ್ಲಿನ ಫ್ಯಾಕ್ಟರಿಯೊಂದರಲ್ಲಿ ಬಳಸಿದ ಮಾಸ್ಕ್‌ಗಳನ್ನು ಹಾಸಿಗೆ ತಯಾರಿಕೆಗೆ ಬಳಕೆ ಮಾಡುತ್ತಿರುವ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ ವೇಳೆ ಈ ಸಂಗತಿ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಫ್ಯಾಕ್ಟರಿ ಮಾಲಿಕನ ಪತ್ತೆಗೆ ಬಲೆ ಬೀಸಿದ್ದಾರೆ.

ಫ್ಯಾಕ್ಟರಿಯ ಆವರಣದಲ್ಲಿ ಸಂಗ್ರಹಿಟ್ಟಿದ್ದ ಫೇಸ್‌ ಮಾಸ್ಕ್‌ಗಳನ್ನು ಬೆಂಕಿ ಹಚ್ಚಿ ಪೊಲೀಸರು ನಾಶಪಡಿಸಿದ್ದಾರೆ.